ಪಾಕ್‌ ನಿರ್ಗಮನ ನಿರ್ಬಂಧ ಪಟ್ಟಿ: ಷರೀಫ್ ಕುಟುಂಬಕ್ಕೆ ಮುಕ್ತಿ ಇಲ್ಲ

Team Udayavani, Feb 9, 2019, 10:42 AM IST

ಇಸ್ಲಾಮಾಬಾದ್‌ : ವಿದೇಶಕ್ಕೆ ಪ್ರಯಾಣಿಸುವುದನ್ನು ನಿರ್ಬಂಧಿಸುವ ದೇಶ-ನಿರ್ಗಮನ-ನಿಯಂತ್ರಣ-ಪಟ್ಟಿಯಿಂದ (ಇಸಿಎಲ್‌ ನಿಂದ) ತಮ್ಮ ಹೆಸರನ್ನು ತೆಗೆಯುವಂತೆ ಪಾಕ್‌ ಮಾಜಿ ಪ್ರಧಾನಿ ನವಾಜ್‌ ಷರೀಫ್, ಅವರ ಪುತ್ರಿ ಮತ್ತು ಅಳಿಯ ಮಾಡಿರುವ ಕೋರಿಕೆಯನ್ನು ಪಾಕಿಸ್ಥಾನ ಸರಕಾರ ತಿರಸ್ಕರಿಸಿದೆ. 

ಕಳೆದ ವರ್ಷ ಅಕ್ಟೋಬರ್‌ನಲ್ಲಿ ಷರೀಫ್, ಅವರ ಪುತ್ರಿ ಮರಿಯಾಂ ಮತ್ತು ಅಳಿಯ ಮೊಹಮ್ಮದ್‌ ಸಫ್ದಾರ್‌ ತಮ್ಮ ಹೆಸರನ್ನು ಇಸಿಎಲ್‌ ನಿಂದ ತೆಗೆದು ಹಾಕುವಂತೆ ಪ್ರತ್ಯೇಕವಾಗಿ ಒಳಾಡಳಿತ ಸಚಿವಾಲಯವನ್ನು ಕೋರಿದ್ದರು ಎಂದು ಜಿಯೋ ನ್ಯೂಸ್‌ ವರದಿ ಮಾಡಿದೆ. 

”2010ರ ಪಾಕ್‌ ನಿರ್ಗಮನ ನಿಯಮವು ತಮಗೆ ಅನ್ವಯಿಸುವುದಿಲ್ಲ; ಏಕೆಂದರೆ ತಾವು ಭ್ರಷ್ಟಾಚಾರ ನಡೆಸಿಲ್ಲ, ಅಧಿಕಾರ ದುರುಪಯೋಗಿಸಿಲ್ಲ, ಉಗ್ರರಲ್ಲ ಅಥವಾ ಯಾವುದೇ ಪಿತೂರಿಯಲ್ಲಿ  ಭಾಗಿಗಳಲ್ಲ; ಆದುದರಿಂದ ತಮ್ಮ ಹೆಸರನ್ನು ಇಸಿಎಲ್‌ ನಿಂದ ತೆಗೆದುಹಾಕಬೇಕು” ಎಂದು ಷರೀಫ್ ಕುಟುಂಬದವರು ತಮ್ಮ ಅರ್ಜಿಯಲ್ಲಿ ಹೇಳಿದ್ದರು. 


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ