ಮೋದಿ ಚುನಾವಣಾ ವಿಜಯಕ್ಕೆ ಪಾಕ್‌ ಪ್ರಧಾನಿ ಇಮ್ರಾನ್‌ ಖಾನ್‌ ಅಭಿನಂದನೆ

Team Udayavani, May 23, 2019, 5:38 PM IST

ಇಸ್ಲಾಮಾಬಾದ್‌ : ‘ನಯಾ ಪಾಕಿಸ್ಥಾನ್‌’ ಪ್ರಧಾನಿ ಇಮ್ರಾನ್‌ ಖಾನ್‌ ಅವರು ಭಾರತದ ಪ್ರಧಾನಿ ನರೇಂದ್ರ ಮೋದಿ ಅವರನ್ನು ಪ್ರಚಂಡ ಚುನಾವಣಾ ವಿಜಯಕ್ಕಾಗಿ ಅಭಿನಂದಿಸಿದ್ದಾರೆ.

ದಕ್ಷಿಣ ಏಶ್ಯದಲ್ಲಿ ಶಾಂತಿ ಮತ್ತು ಸಮೃದ್ಧಿಗಾಗಿ ಜತೆಗೂಡಿ ಶ್ರಮಿಸುವ  ಹಂಬಲವನ್ನು ಇಮ್ರಾನ್‌ ಖಾನ್‌ ತನ್ನ ಅಭಿನಂದನ ಸಂದೇಶದಲ್ಲಿ ವ್ಯಕ್ತಪಡಿಸಿದ್ದಾರೆ.

ಜಮ್ಮು ಕಾಶ್ಮೀರ ಸಹಿತ ಪಾಕ್‌ ಜತೆಗಿನ ಎಲ್ಲ ವಿಷಯಗಳು ಬಗೆಹರಿಯಲು ನರೇಂದ್ರ ಮೋದಿ ಅವರು ಮತ್ತೆ ಅಧಿಕಾರಕ್ಕೆ ಬರುವ ಅಗತ್ಯವಿದೆ ಎಂದು ಕೆಲ ಸಮಯದ ಹಿಂದೆ ಇಮ್ರಾನ್‌ ಖಾನ್‌ ಹೇಳಿದ್ದರು. ಭಾರತದಲ್ಲಿ ವಿರೋಧ ಪಕ್ಷಗಳ ಕೂಟ ಅಧಿಕಾರಕ್ಕೆ ಬಂದರೆ ಕಾಶ್ಮೀರ ಪ್ರಶ್ನೆ ಬಗೆ ಹರಿಯುವುದು ಕಷ್ಟ ಎಂದು ಕೂಡ ಅವರು ಹೇಳಿದ್ದರು.

ಆರ್ಥಿಕವಾಗಿ ದೀವಾಳಿ ಅಂಚಿಗೆ ತಲುಪಿರುವ “ಪಾಕಿಸ್ಥಾನಕ್ಕೆ ಭಾರತದೊಂದಿಗೆ ಯುದ್ಧ ಬೇಕಾಗಿಲ್ಲ; ಶಾಂತಿ ಬೇಕಿದೆ; ಆ ಮೂಲಕ ಎರಡೂ ದೇಶಗಳಿಗೆ ಲಾಭವಾಗಲಿದೆ’ ಎಂದು ಇಮ್ರಾನ್‌ ಹೇಳಿದ್ದರು.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ

  • ಬೆಳಗಾವಿ: ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಮಕ್ಕಳು ಹಾಗೂ ಸಮುದಾಯಗಳು ಎದುರಿಸುತ್ತಿರುವ ಸಮಸ್ಯೆಗಳಿಗೆ ಕೂಡಲೇ ಪರಿಹಾರ ದೊರಕಿಸಿಕೊಡಲು ಸರಕಾರ ಮುಂದಾಗಬೇಕು...

  • ಅಮೀನಗಡ: ಗ್ರಾಮೀಣ ಪ್ರದೇಶದಲ್ಲಿರುವ ಸುಮಾರು 5 ಉಪಕೇಂದ್ರಗಳ ಸಾರ್ವಜನಿಕರಿಗೆ ಉಪಯುಕ್ತವಾದ ಆರೋಗ್ಯ ಸೇವೆ ಒದಗಿಸುವ ಗುಡೂರ(ಎಸ್‌.ಸಿ) ಗ್ರಾಮದ ಸರಕಾರಿ ಪ್ರಾಥಮಿಕ...

  • ಬೀದರ: ನಗರದಲ್ಲಿ ಗುರುವಾರ ಜಿಲ್ಲಾಧಿಕಾರಿ ಡಾ| ಎಚ್‌.ಆರ್‌.ಮಹಾದೇವ ಅವರ ಅಧ್ಯಕ್ಷತೆಯಲ್ಲಿ ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಯ ಅಭಿವೃದ್ಧಿ ಕಾಮಗಾರಿಗಳ...

  • ಕೊರಟಗೆರೆ: ಲಿಂ. ಶ್ರೀ ಶಿವಕುಮಾರ ಸ್ವಾಮೀಜಿ ಸಂಕಲ್ಪದಂತೆ ಶ್ರೀ ಸಿದ್ಧಲಿಂಗೇಶ್ವರ ಸ್ವಾಮಿ ಜಯಂತಿ ಅಂಗವಾಗಿ ಆಯೋಜಿಸಿರುವ ರಥಯಾತ್ರೆಗೆ ಪಟ್ಟಣದಲ್ಲಿ ಅದ್ಧೂರಿ...

  • ತೀರ್ಥಹಳ್ಳಿ: ತಾಲೂಕಿನಲ್ಲಿ ಕೆರೆಗಳ ಸರ್ವೇ ಕಾರ್ಯ ಸಮಾಧಾನಕರ ಆಗಿಲ್ಲ. 305 ಕೆರೆಗಳ ಗಡಿ ಗುರುತಿಸುವ ಕಾರ್ಯ ವಿಳಂಬವಾಗಿದೆ. ಸಿಬ್ಬಂದಿ ಕೊರತೆ ಇದ್ದಲ್ಲಿ ಡಿಡಿಎಲ್‌ಆರ್‌...