ಇಮ್ರಾನ್‌ ಖಾನ್‌ ಅಶ್ಲೀಲ ಸಂದೇಶ: ರೋಸಿಹೋದ ಪಿಟಿಐ ಶಾಸಕಿ ರಾಜೀನಾಮೆ


Team Udayavani, Aug 2, 2017, 11:12 AM IST

Imran Khan-700.jpg

ಇಸ್ಲಾಮಾಬಾದ್‌ : ಆಘಾತಕಾರಿ ಆರೋಪವೊಂದರಲ್ಲಿ ಇಮ್ರಾನ್‌ ಖಾನ್‌ ಅವರ ತೆಹರೀಕ್‌ ಎ ಇನ್ಸಾಫ್ (ಪಿಟಿಐ) ಪಕ್ಷಕ್ಕೆ ರಾಜೀನಾಮೆ ನೀಡಿರುವ  ಶಾಸಕಿ ಆಯೇಷಾ ಗುಲಾಲಾಯಿ, “ನನಗೆ ಇಮ್ರಾನ್‌ ಖಾನ್‌ ಅಶ್ಲೀಲ ಮೊಬೈಲ್‌ ಸಂದೇಶಗಳನ್ನು ಕಳುಹಿಸುತ್ತಿದ್ದರು’ ಎಂದು ದೂರಿದ್ದಾರೆ. 

ಆಯೇಷಾ ಗುಲಾಲಾಯಿ ಅವರು ಸುದ್ದಿಗೋಷ್ಠಿಯೊಂದರಲ್ಲಿ ಮಾತನಾಡುತ್ತಾ, “ಇಮ್ರಾನ್‌ ಖಾನ್‌ ವಿರುದ್ಧ ನಾನು ಮಾಡಿರುವ ಈ ಆರೋಪದ ಬಗ್ಗೆ ತನಿಖೆಯಾಗಬೇಕು’ ಎಂದು ಸರಕಾರವನ್ನು ಒತ್ತಾಯಿಸಿದ್ದಾರೆ. 

“ಇಮ್ರಾನ್‌ ಖಾನ್‌ ನನಗೆ ಕಳುಹಿಸಿರುವ ಅಶ್ಲೀಲ ಮೊಬೈಲ್‌ ಸಂದೇಶಗಳಿಂದ ಜುಗುಪ್ಸೆಗೊಂಡು ನಾನು ಅವರ ಪಕ್ಷದ ಶಾಸಕಿಯ ಸ್ಥಾನವನ್ನು ತ್ಯಜಿಸಲು ನಿರ್ಧರಿಸಿದ್ದೇನೆ’ ಎಂದು ಗುಲಾಲಾಯಿ ಹೇಳಿದ್ದಾರೆ. 

“ನನಗೆ ಪಾರ್ಟಿ ಟಿಕೆಟ್‌ ಬೇಕಾಗಿಲ್ಲ ಅಥವಾ ಎನ್‌ಎ-1 ಸೀಟ್‌ ಕೂಡ ಬೇಕಾಗಿಲ್ಲ. ಎನ್‌ಎ-1 ಸೀಟಿಗಾಗಿ ಕೂಡ ನಾನು ಪಕ್ಷವನ್ನು ತ್ಯಜಿಸುತ್ತಿಲ್ಲ. ಇಮ್ರಾನ್‌ ಖಾನ್‌ ಅವರ ಅಶ್ಲೀಲ ವರ್ತನೆಯಿಂದ ಬೇಸತ್ತು ನಾನು ಪಿಟಿಐ ಪಕ್ಷದ ಶಾಸಕಿಯ ಸ್ಥಾನಕ್ಕೆ ರಾಜೀನಾಮೆ ನೀಡುತ್ತಿದ್ದೆನೆ’ ಎಂದು ಗುಲಾಲಾಯಿ ಹೇಳಿದ್ದಾರೆ.

“ಇಮ್ರಾನ್‌ ಖಾನ್‌ ಅವರ ಹಲವು ದುರ್ಗುಣಗಳಲ್ಲಿ ಅಶ್ಲೀಲ ಮೊಬೈಲ್‌ ಸಂದೇಶ ಕಳಿಸುವುದು ಕೂಡ ಒಂದಾಗಿದೆ’ ಎಂದು ಗುಲಾಲಾಯಿ ಆರೋಪಿಸಿದ್ದಾರೆ. 

“2013ರ ಅಕ್ಟೋಬರ್‌ನಲ್ಲಿ ನಾನು ಇಮ್ರಾನ್‌ ಖಾನ್‌ ಅವರಿಂದ ಮೊದಲ ಮೊಬೈಲ್‌ ಸಂದೇಶ ಪಡೆದೆ. ಇಮ್ರಾನ್‌ ಅವರ ಬ್ಲ್ಯಾಕ್‌ ಬೆರಿ ಫೋನನ್ನು ಚೆಕ್‌ ಮಾಡಿದರೆ ನಿಮಗದು ಗೊತ್ತಾಗುತ್ತದೆ. ಪಿಟಿಐ ಅಧ್ಯಕ್ಷರಾಗಿರುವ ಇಮ್ರಾನ್‌ ಇತರ ಮಹಿಳೆಯರಿಗೂ ಬ್ಲ್ಯಾಕ್‌ಬೆರಿ ಉಪಯೋಗಿಸಿರೆಂದು ಒತ್ತಾಯಿಸುತ್ತಾರೆ; ಏಕೆಂದರೆ ಅದರಲ್ಲಿನ ಸಂದೇಶಗಳನ್ನು ಅಳಿಸಲು ಸಾಧ್ಯವಿಲ್ಲ; ನೀವು ಆತನ ಬ್ಲ್ಯಾಕ್‌ಬೆರಿ ಚೆಕ್‌ ಮಾಡಿ; ನಿಮಗೆ ಎಲ್ಲವೂ ಗೊತ್ತಾಗುತ್ತದೆ. ಆತನ ಸಂದೇಶಗಳಲ್ಲಿರುವ ಅಶ್ಲೀಲ ಪದಗಳನ್ನು ಯಾವುದೇ ಗೌರವಾನ್ವಿತ ವ್ಯಕ್ತಿಗಳು ಸಹಿಸಲಾರರು; ಇಮ್ರಾನ್‌ ಖಾನ್‌ ಗೆ ತನ್ನನ್ನು ತಾನು ನಿಯಂತ್ರಿಸಿಕೊಳ್ಳುವುದು ಗೊತ್ತಿಲ್ಲ’ ಎಂದು ಗುಲಾಲಾಯಿ ಆರೋಪಿಸಿದ್ದಾರೆ. 

ಗುಲಾಲಾಯಿ ಅವರು ಮಹಿಳಾ ಮೀಸಲು ಸೀಟ್‌ ಮೂಲಕ ಎಂಎನ್‌ಎ ಗೆದ್ದವರು. ಆಕೆ ಪಿಟಿಐ ಪಕ್ಷದ ಸಕ್ರಿಯ ಸದಸ್ಯೆ. 

ಟಾಪ್ ನ್ಯೂಸ್

122

ಬೆಂಗಳೂರಿನಲ್ಲಿ 72 ರೋಹಿಂಗ್ಯಾಗಳು : ಗಡಿಪಾರು ಮಾಡುವ ಯೋಜನೆ ಇಲ್ಲ

kangana

“ನಾಲ್ಕನೇ” ರಾಷ್ಟ್ರೀಯ ಪ್ರಶಸ್ತಿ ಬಾಚಿಕೊಂಡ ನಟಿ ಕಂಗನಾ

ದೀಪಾವಳಿಗೆ ಮುಂಚಿತವಾಗಿ ಆನ್‌ಲೈನ್ ಶಾಪಿಂಗ್ ಹಗರಣಗಳು ಹೆಚ್ಚಾಗುತ್ತವೆ

 ದೀಪಾವಳಿ: ಆನ್‌ಲೈನ್ ಶಾಪಿಂಗ್ ಹಗರಣಗಳು ಹೆಚ್ಚಾಗುತ್ತವೆ, ಸುರಕ್ಷಿತವಾಗಿರುವುದು ಹೇಗೆ?

1-33

ಮಾವನಿಗೆ ದಾದಾ ಸಾಹೇಬ್ ಫಾಲ್ಕೆ, ಅಳಿಯನಿಗೆ ಅತ್ಯುತ್ತಮ ನಟ ಪ್ರಶಸ್ತಿ

Untitled-1

ಗೋವಾದಲ್ಲಿ ಬಿಜೆಪಿ ಸೋಲಿಸಲು ಕಾಂಗ್ರೆಸ್ ನಿಂದ ಮಾತ್ರ ಸಾಧ್ಯ: ಪಿ.ಚಿದಂಬರಂ

1-rr

ಪಾಕ್ ವಿರುದ್ಧ ಸೋಲಿನ ಬಳಿಕ ಕಾಶ್ಮೀರಿ ವಿದ್ಯಾರ್ಥಿಗಳ ಮೇಲೆ ದಾಳಿ

Untitled-1

ಚಿಕ್ಕಮಗಳೂರು: ಕೆರೆಯಲ್ಲಿ ಮುಳುಗಿ ಬಾಲಕ ನೀರುಪಾಲು

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬಾಂಬೆ ಷೇರು ಪೇಟೆ ಸೆನ್ಸೆಕ್ಸ್ 100ಕ್ಕೂ ಅಧಿಕ ಅಂಕ ಕುಸಿತ, ನಿಫ್ಟಿ ಇಳಿಕೆ

ಬಾಂಬೆ ಷೇರು ಪೇಟೆ ಸೆನ್ಸೆಕ್ಸ್ 100ಕ್ಕೂ ಅಧಿಕ ಅಂಕ ಕುಸಿತ, ನಿಫ್ಟಿ ಇಳಿಕೆ

2060ರ ಹೊತ್ತಿಗೆ ಸೌದಿ, ಮಾಲಿನ್ಯ ಮುಕ್ತ

2060ರ ಹೊತ್ತಿಗೆ ಸೌದಿ, ಮಾಲಿನ್ಯ ಮುಕ್ತ

ಹೊಸ ಗಡಿ ಕಾನೂನಿಗೆ ಚೀನ ಒಪ್ಪಿಗೆ

ಹೊಸ ಗಡಿ ಕಾನೂನಿಗೆ ಚೀನ ಒಪ್ಪಿಗೆ

ಸಾಕು ನಾಯಿಗೆ ಸಸ್ಯಹಾರಿ ಊಟ ಕೊಟ್ಟರೆ ಜೈಲು!

ಸಾಕು ನಾಯಿಗೆ ಸಸ್ಯಹಾರಿ ಊಟ ಕೊಟ್ಟರೆ ಜೈಲು!

1-2-aa’

ಅತಿಯಾದ ಲೈಂಗಿಕ ಗೀಳು: ಸ್ತ್ರೀ ಹಾರ್ಮೋನ್ ಚುಚ್ಚಿಸಿಕೊಂಡ ಸ್ಪೇನ್‌ನ ಮಾಜಿ ರಾಜ !

MUST WATCH

udayavani youtube

ಸೋತವನ ವಿರುದ್ದವೇ ಶರಣಾಗಿದ್ದೀಯ‌: ಸಿದ್ದರಾಮಯ್ಯಗೆ ಶ್ರೀನಿವಾಸ ಪ್ರಸಾದ್ ಟಾಂಗ್

udayavani youtube

ಚಿಕ್ಕಮಗಳೂರು : ಕೆರೆಯಲ್ಲಿ ಈಜಲು ಹೋದ ಬಾಲಕ ನೀರಲ್ಲಿ ಮುಳುಗಿ ಸಾವು

udayavani youtube

ಶ್ರೀರಂಗಪಟ್ಟಣ ತಾಲೂಕಿನಾದ್ಯಂತ ಭಾರೀ ಮಳೆಗೆ ಸೇತುವೆ ಮುಳುಗಡೆ ರೈತರ ಬೆಳೆ ನಾಶ

udayavani youtube

ಅಡಿಕೆಯನ್ನು ಸುಲಭವಾಗಿ ಬೆಳೆಯುವ ಹಲವು ವಿಧಾನಗಳು

udayavani youtube

ಭೂಕುಸಿತ ಪತ್ತೆಗೆ ಹೊಸ ಸ್ವದೇಶಿ ತಂತ್ರಜ್ಞಾನ ಸಿದ್

ಹೊಸ ಸೇರ್ಪಡೆ

122

ಬೆಂಗಳೂರಿನಲ್ಲಿ 72 ರೋಹಿಂಗ್ಯಾಗಳು : ಗಡಿಪಾರು ಮಾಡುವ ಯೋಜನೆ ಇಲ್ಲ

1-yrrt

ಕಳವಾಗಿ 2 ಸಂತೆಗೆ ಹೋದರೂ ಮಾಲೀಕರ ಸೇರಿದ 7 ಕುರಿಗಳು

gow theft – protest

ಗೋ ಕಳ್ಳಸಾಗಾಣಿಕೆ ತಡೆಯಲು ಕ್ರಮಕ್ಕೆ ಆಗ್ರಹ; ರಸ್ತೆ ತಡೆ ಮಾಡಿ ಪ್ರತಿಭಟನೆ

ಯಡಿಯೂರಪ್ಪ ಪ್ರಚಾರದಿಂದ ಬಿಜೆಪಿಗೆ ಆನೆ ಬಲ

ಯಡಿಯೂರಪ್ಪ ಪ್ರಚಾರದಿಂದ ಬಿಜೆಪಿಗೆ ಆನೆ ಬಲ

kangana

“ನಾಲ್ಕನೇ” ರಾಷ್ಟ್ರೀಯ ಪ್ರಶಸ್ತಿ ಬಾಚಿಕೊಂಡ ನಟಿ ಕಂಗನಾ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.