55 ಮೀನುಗಾರರು, 5 ನಾಗರಿಕರನ್ನು ಬಿಡುಗಡೆ ಮಾಡಿದ ಪಾಕಿಸ್ಥಾನ
Team Udayavani, Apr 30, 2019, 6:05 AM IST
ಕರಾಚಿ: ಪಾಕಿಸ್ಥಾನದ ಜೈಲುಗಳಲ್ಲಿ ಬಂಧಿಸಲ್ಪಟ್ಟಿದ್ದ 55 ಭಾರತೀಯ ಮೀನುಗಾರರು ಹಾಗೂ 5 ನಾಗರಿಕರನ್ನು ಪಾಕಿಸ್ಥಾನ ಸರಕಾರ ಸದ್ಭಾವನೆಯ ಸಂಕೇತವಾಗಿ ಸೋಮವಾರ ಬಿಡುಗಡೆಗೊಳಿಸಿದೆ.
ಕರಾಚಿಯ ಮಾಲಿರ್ ಜೈಲಿನಿಂದ ಸೋಮವಾರ ಬಿಡುಗಡೆಗೊಂಡ ಮೀನುಗಾರರು ಮತ್ತು ನಾಗರಿಕರನ್ನು ಬಿಗಿಭದ್ರತೆಯೊಂದಿಗೆ ಕರಾಚಿ ಕಂಟೋನ್ಮೆಂಟ್ ರೈಲು ನಿಲ್ದಾಣಕ್ಕೆ ಕರೆ ತರಲಾಯಿತು. ಅನಂತರ, ಅವರನ್ನು ಬ್ಯುಸಿನೆಸ್ ಎಕ್ಸ್ಪ್ರೆಸ್ ರೈಲಿನಲ್ಲಿ ಲಾಹೋರ್ಗೆ ಕಳುಹಿಸಲಾಯಿತು. ಲಾಹೋರ್ಗೆ ಬಂದಿಳಿದ ಅವರನ್ನು ವಾಘಾಗೆ ಕರೆದೊಯ್ದು ಭಾರತೀಯ ಪಡೆಗಳಿಗೆ ಹಸ್ತಾಂತರಿಸಲಾಗುತ್ತದೆ ಎಂದು ಹೇಳಲಾಗಿದೆ.
ಎ. 7ರಂದು 100 ಮೀನುಗಾರರನ್ನು ಬಿಡುಗಡೆಗೊಳಿಸಿದ್ದ ಪಾಕಿಸ್ಥಾನ, ಎ. 14ರಂದು ಇತರ 100 ಮೀನುಗಾರರನ್ನು ಬಿಡುಗಡೆಗೊಳಿಸಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
IPL 2024; ಎಂ.ಎಸ್ ಧೋನಿ ದಾಖಲೆ ಮುರಿದ ಕೆ.ಎಲ್ ರಾಹುಲ್
Snake: 50 ಅಡಿ ಉದ್ದದ ದೈತ್ಯ ಹಾವು “ವಾಸುಕಿ’!
Mollywood: ಸೂಪರ್ ಹಿಟ್ ʼಪ್ರೇಮಲುʼ ಸೀಕ್ವೆಲ್ ಅನೌನ್ಸ್; ಹೆಚ್ಚಾಯಿತು ನಿರೀಕ್ಷೆ
Haveri; ಲೋಕಸಭೆ ಚುನಾವಣೆಗೆ ನಾಮಪತ್ರ ಸಲ್ಲಿಸಲು ಸೂಚಕರ ಖೊಟ್ಟಿ ಸಹಿ, ದೂರು ದಾಖಲು
Hubli; ಸ್ಪರ್ಧೆ ಮಾಡಲು ದಿಂಗಾಲೇಶ್ವರ ಸ್ವಾಮೀಜಿಗೆ ಪೇಮೆಂಟ್ ಬಂದಿದೆ: ಯತ್ನಾಳ್ ಆರೋಪ