ಪಾಕಿಸ್ಥಾನದಿಂದ ಸಮ್ಝೋತಾ ಎಕ್ಸ್ಪ್ರೆಸ್ ರೈಲು ಸೇವೆ ರದ್ದು
Team Udayavani, Feb 28, 2019, 7:12 AM IST
ಲಾಹೋರ್ : ಭಾರತ – ಪಾಕ್ ನಡುವಿನ ಉದ್ವಿಗ್ನತೆ ತೀವ್ರಗೊಂಡಿರುವ ನಡುವೆಯೇ ಪಾಕ್ ಅಧಿಕಾರಿಗಳು ಉಭಯ ದೇಶಗಳ ನಡುವಿನ ಸಮ್ಝೋತಾ ಎಕ್ಸ್ಪ್ರೆಸ್ ರೈಲು ಸೇವೆಯನ್ನು ಮಂದಿನ ಆದೇಶದ ತನಕ ಅಮಾನತುಗೊಳಿಸಿದ್ದಾರೆ ಎಂದು ಅಧಿಕಾರಿಗಳು ಇಂದು ಗುರುವಾರ ತಿಳಿಸಿದ್ದಾರೆ.
ವಾರಕ್ಕೆರಡು ಬಾರಿಯ ಸಮ್ಝೋತಾ ಎಕ್ಸ್ಪ್ರೆಸ್ ರೈಲು ಪ್ರತೀ ಸೋಮವಾರ ಮತ್ತು ಗುರುವಾರ ಲಾಹೋರ್ನಿಂದ ಹೊರಡುತ್ತದೆ. ಇಂದು ಗುರುವಾರ ಈ ರೈಲಿನಲ್ಲಿ ಪ್ರಯಾಣಿಸಲಿದ್ದವರ ಸಂಖ್ಯೆ ಕೇವಲ 16 ಇತ್ತು.
ಇಂದು ಬೆಳಗ್ಗೆ 8 ಗಂಟೆಗೆ ಹೊರಡಲಿದ್ದ ಈ ರೈಲಿನ ಯಾನವನ್ನು ಅದಕ್ಕೆ ಮುನ್ನವೇ ರದ್ದು ಗೊಳಿಸಿ ಪಾಕ್ ಅಧಿಕಾರಿಗಳು ಪ್ರಕಟನೆ ಹೊರಡಿಸಿದ್ದರು. ಹಾಗಿದ್ದರೂ ಈ ರೈಲು ಇಂದು ಬೆಳಗ್ಗೆ ಕರಾಚಿಯಿಂದ ತನ್ನ ಯಾನವನ್ನು ಆರಂಭಿಸಿತ್ತು. ರೈಲು ಲಾಹೋರ್ಗೆ ಆಗಮಿಸಿದಾಗ ಅದರ ಯಾನ ರದ್ದಾಗಿರುವ ಪ್ರಕಟನೆ ಹೊರಬಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Jamie Dimon: ಮೋದಿ ಆರ್ಥಿಕ ನೀತಿ ಅದ್ಭುತ, ಅಮೆರಿಕದಲ್ಲೂ ಜಾರಿ ಮಾಡಿ: ಜೇಮಿ
Sunita Williams: ಮೇ 6ರಂದು 3ನೇ ಬಾರಿಗೆ ಸುನಿತಾ ವಿಲಿಯಮ್ಸ್ ಗಗನ ಯಾತ್ರೆ
Thailandನಲ್ಲಿ ಗುಜರಿ ಮಾಫಿಯಾದ ಕಿಂಗ್ ಪಿನ್ ರವಿ ಕಾನಾ, ಪ್ರಿಯತಮೆ ಕಾಜಲ್ ಜಾ ಬಂಧನ
ತಂಗಿಯ ಸಮಾಧಿ ಸ್ಥಳಕ್ಕೆ ಭೇಟಿ ನೀಡುವುದನ್ನು ವ್ಲಾಗ್ ವಿಡಿಯೋ ಮಾಡಿದ ಯೂಟ್ಯೂಬರ್: ಆಕ್ರೋಶ
Kyrgyzstan; ಹೆಪ್ಪುಗಟ್ಟಿದ ಜಲಪಾತದಲ್ಲಿ ಸಿಲುಕಿ ಆಂಧ್ರದ ವಿದ್ಯಾರ್ಥಿ ಸಾವು