ವಿಶ್ವಸಂಸ್ಥೆ ಆಯ್ತು, ಈಗ ಅಂತಾರಾಷ್ಟ್ರೀಯ ಕೋರ್ಟ್‌ಗೆ ಹೋಗಲು ಪಾಕ್‌ ಸಿದ್ಧತೆ!

ಕಾಶ್ಮೀರ ವಿಚಾರದಲ್ಲಿ ಕಂಗೆಟ್ಟ ಪಾಕಿಸ್ಥಾನ

Team Udayavani, Aug 21, 2019, 3:14 PM IST

ಇಸ್ಲಾಮಾಬಾದ್‌: ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನವನ್ನು ಭಾರತ ರದ್ದುಗೊಳಿಸಿದ ಬೆನ್ನಲ್ಲೇ ಗೋಳಿಡುತ್ತಿರುವ ಪಾಕಿಸ್ಥಾನ ಚೀನ ಮೂಲಕ ವಿಶ್ವಸಂಸ್ಥೆಗೆ ದೂರು ತೆಗೆದುಕೊಂಡು ಹೋಗಿದ್ದರೂ ವಿಫ‌ಲವಾದ ಹಿನ್ನೆಲೆಯಲ್ಲಿ ಇದೀಗ ಅಂತಾರಾಷ್ಟ್ರೀಯ ಕೋರ್ಟ್‌ಗೆ (ಐಸಿಜೆ) ಹೋಗಲು ಮುಂದಾಗಿದೆ.

ಕಾಶ್ಮೀರ ವಿಚಾರದಲ್ಲಿ ನಾವು ಕೋರ್ಟ್‌ಗೆ ಹೋಗಲು ತೀರ್ಮಾನಿಸಿದ್ದೇವೆ ಎಂದು ಪಾಕ್‌ ವಿದೇಶಾಂಗ ಸಚಿವ ಶಾ ಮಹಮ್ಮದ್‌ ಖುರೇಶಿ ಅಲ್ಲಿನ ಚಾನೆಲೊಂದಕ್ಕೆ ಹೇಳಿಕೆ ನೀಡಿದ್ದಾರೆ. ಈ ಕುರಿತಂತೆ ಕಾನೂನು ಸಾಧ್ಯತೆಗಳ ಬಗ್ಗೆ ಇದೀಗ ಚಿಂತಿಸಲಾಗುತ್ತಿದೆ ಎಂದೂ ಹೇಳಿದ್ದಾರೆ.

ಕಾಶ್ಮೀರಕ್ಕೆ ಸ್ಥಾನಮಾನ ರದ್ದುಗೊಳಿಸಿದ ಬಳಿಕ ಪಾಕಿಸ್ಥಾನ ನಿದ್ದೆಯಿಲ್ಲದ ರಾತ್ರಿಗಳನ್ನು ಕಳೆಯುತ್ತಿದ್ದು, ವಿವಿಧ ದೇಶಗಳ ಮುಂದೆ ಭಾರತದ ವಿರುದ್ಧ ಕ್ರಮಕ್ಕೆ ಅಂಗಲಾಚುತ್ತಿದೆ. ಆದರೆ ಈ ವರೆಗೆ ಯಾವುದೇ ದೇಶಗಳು ಅದರ ಯಾವುದೇ ಕೇಳಿಕೆಗೂ ಸೊಪ್ಪು ಹಾಕುತ್ತಿಲ್ಲ. ವಿಶ್ವಸಂಸ್ಥೆಯಲ್ಲಿ ಗುಪ್ತ ಸಭೆ ನಡೆಸಿದ್ದರೂ, ಅಲ್ಲಿ ಯಾವುದೇ ತೀರ್ಮಾನ, ಕನಿಷ್ಠ ಸಭೆಯ ಬಗ್ಗೆ ವರದಿಯನ್ನೂ ನೀಡಿರಲಿಲ್ಲ. ಇದರಿಂದ ಪಾಕಿಸ್ಥಾನ ಈಗ ಅಂ.ರಾ. ಕೋರ್ಟ್‌ಗೆ ಹೋಗಲು ನಿರ್ಧರಿಸಿದೆ.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ