ಭಾರತದ ಛಾನೆಲ್ ಗಳನ್ನು ಪ್ರಸಾರ ಮಾಡಿದ್ರೆ ಹುಷಾರ್!

ಕೇಬಲ್ ಟಿ.ವಿ. ಅಪರೇಟರ್ ಗಳಿಗೆ ಪಾಕಿಸ್ಥಾನ ಮೀಡಿಯಾ ವಾಚ್ ಡಾಗ್ ವಾರ್ನಿಂಗ್

Team Udayavani, Aug 22, 2019, 11:18 PM IST

ಲಾಹೋರ್: ಭಾರತದ ಟಿ.ವಿ. ಚಾನೆಲ್ ಗಳನ್ನು ಮತ್ತು ಸುದ್ದಿಗಳನ್ನು ಪ್ರಸಾರ ಮಾಡದಂತೆ ಪಾಕಿಸ್ಥಾನದ ಎಲೆಕ್ಟ್ರಾನಿಕ್ ಮೀಡಿಯಾ ವಾಚ್ ಡಾಗ್ ಲಾಹೋರ್ ಭಾಗದ ಕೇಬಲ್ ಟಿ.ವಿ. ಅಪರೇಟರ್ ಗಳಿಗೆ ಎಚ್ಚರಿಕೆ ನೀಡಿದೆ.

ಭಾರತದ ಚಾನೆಲ್ ಗಳನ್ನು ಪ್ರಸಾರ ಮಾಡುವ ಕೇಬಲ್ ಅಪರೇಟರ್ ಗಳ ಮೇಲೆ ಕಠಿಣ ಕಾನೂನು ಕ್ರಮ ತೆಗೆದುಕೊಳ್ಳಲಾಗುವುದು ಎಂದು ಪಾಕಿಸ್ಥಾನದ ವಿದ್ಯುನ್ಮಾನ ಮಾಧ್ಯಮ ನಿಯಂತ್ರಣ ಪ್ರಾಧಿಕಾರದ ಮುಖ್ಯಸ್ಥ ಮುಹಮ್ಮದ್ ಸಲೀಂ ಬೈಗ್ ಅವರು ತಿಳಿಸಿದ್ದಾರೆ.

ಅಪರೇಟರ್ ಗಳು ಸುಪ್ರೀಂ ಕೋರ್ಟ್ ಆದೇಶವನ್ನು ಕಡ್ಡಾಯವಾಗಿ ಪಾಲಿಸುವಂತೆ ಅವರು ಇದೇ ಸಂದರ್ಭದಲ್ಲಿ ಲಾಹೋರ್ ಕೇಬಲ್ ಅಪರೇಟರ್ ಗಳಿಗೆ ತಾಕೀತು ಮಾಡಿದ್ದಾರೆ. ಇದಕ್ಕೆ ತಪ್ಪಿದಲ್ಲಿ ಅಂತಹ ಅಪರೇಟರ್ ಗಳ ಪರವಾನಿಗೆಯನ್ನು ರದ್ದುಗೊಳಿಸಲಾಗುವುದು ಹಾಗೂ ಎಫ್.ಐ.ಆರ್. ದಾಖಲಿಸಿಕೊಳ್ಳಲಾಗುವುದು ಎಂದೂ ಮುಹಮ್ಮದ್ ಅವರು ಎಚ್ಚರಿಕೆ ನೀಡಿದ್ದಾರೆ.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ