ಕಾಶ್ಮೀರ ದ್ವಿಪಕ್ಷೀಯ ವಿಷಯ: ಅಮೆರಿಕ

ಕಾಶ್ಮೀರವನ್ನು ಅಂತಾರಾಷ್ಟ್ರೀಯ ವಿಷಯವನ್ನಾಗಿಸಲು ಹೊರಟಿದ್ದ ಪಾಕ್‌ ಯತ್ನ ವಿಫ‌ಲ

Team Udayavani, Aug 26, 2019, 5:42 PM IST

ಬಿರಿಟ್ಜ್: ಜಮ್ಮು ಮತ್ತು ಕಾಶ್ಮೀರ ವಿಚಾರ ಏನಿದ್ದರೂ ಭಾರತ-ಪಾಕ್‌ನ ದ್ವಿಪಕ್ಷೀಯ ವಿಚಾರದ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಹೇಳಿದ್ದಾರೆ. ಇದರಿಂದ ಕಾಶ್ಮೀರ ವಿಚಾರವನ್ನು ಅಂತಾರಾಷ್ಟ್ರೀಯ ವಿವಾದದ ವಿಷಯವನ್ನಾಗಿಸಲು ಪಾಕಿಸ್ಥಾನ ಮಾಡುತ್ತಿರುವ ಯತ್ನಕ್ಕೆ ಮತ್ತೂಂದು ದೊಡ್ಡ ಹಿನ್ನಡೆಯಾಗಿದೆ.

ಕಾಶ್ಮೀರದ ವಿಶೇಷ ಸ್ಥಾನಮಾನ ರದ್ದುಗೊಳಿಸಿದ ಭಾರತದ ತೀರ್ಮಾನ ವಿರುದ್ಧ ಕ್ರುದ್ಧವಾಗಿರುವ ಪಾಕಿಸ್ಥಾನ ಅಂ.ರಾ. ಮಟ್ಟದಲ್ಲಿ ಭಾರತ ಹಣಿಯಲು ಇನ್ನಿಲ್ಲದ ಯತ್ನ ಮಾಡುತ್ತಿದ್ದು, ಆದರೆ ಅದು ಫ‌ಲಕೊಟ್ಟಿಲ್ಲ. ಕಾಶ್ಮೀರ ವಿಚಾರದಲ್ಲಿ ಮಾತುಕತೆಗೆ ಮಧ್ಯವರ್ತಿಯಾಗುವುದಾಗಿ ಟ್ರಂಪ್‌ ಹೇಳುತ್ತಿದ್ದರೂ, ಜಿ7 ಶೃಂಗ ಸಭೆಯ ಸಂದರ್ಭ ಪ್ರಧಾನಿ ನರೇಂದ್ರ ಮೋದಿಯವರೊಂದಿಗೆ ಸೋಮವಾರ ಮಾತುಕತೆ ನಡೆಸಿದ ಟ್ರಂಪ್‌ ಈ ಮಾತುಗಳನ್ನು ಹೇಳಿದ್ದಾರೆ.

ತಾವು ರವಿವಾರ ಪ್ರಧಾನಿ ನರೇಂದ್ರ ಮೋದಿಯವರೊಂದಿಗೆ ಕಾಶ್ಮೀರ ವಿಚಾರದಲ್ಲಿ ಮಾತುಕತೆ ನಡೆಸಿದ್ದು ಅಲ್ಲಿನ ಪರಿಸ್ಥಿತಿಯ ತಹಬಂದಿಯಲ್ಲಿರುವುದಾಗಿ ಪ್ರಧಾನಿ ಮೋದಿ ಹೇಳಿದ್ದಾರೆ. ಅವರು ಪಾಕಿಸ್ಥಾನದೊಂದಿಗೆ ಮಾತುಕತೆ ನಡೆಸಲು ಶಕ್ತರಿದ್ದು, ಏನಾದರೂ ಒಳ್ಳೆಯದನ್ನು ಮಾಡುತ್ತಾರೆ ಎಂದರು.

ಈ ವಿಚಾರದಲ್ಲಿ ಪ್ರತಿಕ್ರಿಯೆ ನೀಡಿದ ಪ್ರಧಾನಿ ಮೋದಿ ಅವರು, ಕಾಶ್ಮೀರದ ಹೆಸರೆತ್ತದೆ ನಾವು ಪಾಕ್‌ನೊಂದಿಗೆ ಹಲವು ದ್ವಿಪಕ್ಷೀಯ ವಿಚಾರಗಳನ್ನು ಹೊಂದಿದ್ದೇವೆ. ಇವುಗಳನ್ನೆಲ್ಲ ಮಾತುಕತೆಯ ಮೂಲಕವೇ ಇತ್ಯರ್ಥ ಪಡಿಸುವ ಇರಾದೆಯನ್ನು ನಾವು ಹೊಂದಿದ್ದೇವೆ ಎಂದು ಹೇಳಿದರು. ಅಲ್ಲದೇ ನಮ್ಮ ಮಧ್ಯೆ ಮೂರನೆಯವರೊಬ್ಬರನ್ನು ಇರಿಸಲು ನಾವು ಬಯಸುವುದಿಲ್ಲ. ಈ ಮೂಲಕ ಅವರಿಗೆ ತೊಂದರೆಯಾಗುವಂತೆ ಮಾಡುವ ಉದ್ದೇಶ ನಮ್ಮದಲ್ಲ ಎಂದು ಹೇಳಿದರು.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ