ನ.11ರಂದು ಕರ್ತಾಪುರ್ ಕಾರಿಡಾರ್ ಉದ್ಘಾಟನೆ;ಪಾಕ್ ವೀಡಿಯೋದಲ್ಲಿ ಭಿಂದ್ರನ್ ವಾಲೆ ಪೋಸ್ಟರ್!

Team Udayavani, Nov 6, 2019, 12:16 PM IST

ಇಸ್ಲಾಮಾಬಾದ್:ಪಾಕಿಸ್ತಾನದ ಕರ್ತಾಪುರ್ ಸಾಹಿಬ್ ಗುರುದ್ವಾರ ಸಂಪರ್ಕಿಸುವ ಕರ್ತಾಪುರ್ ಕಾರಿಡಾರ್ ಯೋಜನೆ ನವೆಂಬರ್ 11ರಂದು ಉದ್ಘಾಟನೆಗೊಳ್ಳಲಿರುವ ಹಿನ್ನೆಲೆಯಲ್ಲಿ ಪಾಕಿಸ್ತಾನದ ಮಾಹಿತಿ ಮತ್ತು ಪ್ರಸಾರ ಸಚಿವಾಲಯ ಬಿಡುಗಡೆ ಮಾಡಿರುವ ವೀಡಿಯೋ ಇದೀಗ ವಿವಾದಕ್ಕೆ ಎಡೆಮಾಡಿಕೊಟ್ಟಿದೆ.

ಪಾಕ್ ಬಿಡುಗಡೆ ಮಾಡಿರುವ ವಿಡಿಯೋದಲ್ಲಿನ ಪೋಸ್ಟರ್ ನಲ್ಲಿ ಖಾಲಿಸ್ತಾನಿ ಪ್ರತ್ಯೇಕತವಾದಿ ಮುಖಂಡ ಜರ್ನೈಲ್ ಸಿಂಗ್ ಭಿಂದ್ರನ್ ವಾಲೆ, ಮೇಜರ್ ಜನರಲ್ ಶಾಬೇಗ್ ಸಿಂಗ್ ಮತ್ತು ಅಮ್ರೀಕ್ ಸಿಂಗ್ ಖಾಲ್ಸಾ ಅವರ ಫೋಟೋ ಕಾಣಿಸಿರುವುದು ವಿವಾದಕ್ಕೆ ಕಾರಣವಾಗಿದೆ.

1984ರಲ್ಲಿ ಪಂಜಾಬ್ ನ ಅಮೃತ್ ಸರದ ಗೋಲ್ಡನ್ ಟೆಂಪಲ್ ಒಳಗೆ ಅವಿತಿದ್ದ ಭಿಂದ್ರನ್ ವಾಲೆ ಸೇರಿದಂತೆ ಮೂವರನ್ನು ಭಾರತೀಯ ಸೇನಾ ಪಡೆಯ ಬ್ಲೂ ಸ್ಟಾರ್ ಕಾರ್ಯಾಚರಣೆಯಲ್ಲಿ ಹತ್ಯೆಗೈಯಲಾಗಿತ್ತು. ಈ ಮೂಲಕ ಖಾಲಿಸ್ತಾನ್ ಉಗ್ರರ ಹಿಡಿತಲ್ಲಿದ್ದ ಗೋಲ್ಡನ ಟೆಂಪಲ್ ಅನ್ನು ಮುಕ್ತಗೊಳಿಸಿತ್ತು.

ಸಿಖ್ಖ್ ರ ಧರ್ಮಗುರು ಗುರುನಾನಕ್ ಅವರ 550ನೇ ಜನ್ಮ ಜಯಂತಿ ಹಿನ್ನೆಲೆಯಲ್ಲಿ ಕರ್ತಾಪುರ್ ಕಾರಿಡಾರ್ ಯೋಜನೆಗೆ ಭಾರತ ಮತ್ತು ಪಾಕಿಸ್ತಾನ ಸಹಿಹಾಕಿತ್ತು. ಈ ಕಾರಿಡಾರ್ ನಿಂದ ಗುರುದಾಸ್ ಪುರ್ ಡೇರಾ ಬಾಬಾ ನಾನಕ್ ಗುರುದ್ವಾರದಿಂದ ಕರ್ತಾಪುರದಲ್ಲಿರುವ ದರ್ಬಾರ್ ಸಾಹೀಬ್ ಗುರುದ್ವಾರಕ್ಕೆ ಸಂಪರ್ಕ ಕಲ್ಪಿಸಲಿದೆ. ಕರ್ತಾಪುರದಲ್ಲಿರುವ ಗುರುದ್ವಾರವನ್ನು ಗುರುನಾನಕ್ 1522ರಲ್ಲಿ ಸ್ಥಾಪಿಸಿದ್ದರು.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ