ಜ್ವಾಲಾಮುಖೀ ಬೂದಿಯಲ್ಲಿ ಇಟ್ಟಿಗೆ! ಕಸದಿಂದ ರಸ ತೆಗೆಯುತ್ತಿರುವ ಫಿಲಿಪ್ಪೀನ್ಸ್‌ ಜನತೆ

Team Udayavani, Jan 18, 2020, 7:24 PM IST

ಬಿನಾನ್‌: ಫಿಲಿಪ್ಪೀನ್‌ನಲ್ಲಿ ಕಳೆದ ವಾರ ಸ್ಫೋಟಗೊಂಡ ಜ್ವಾಲಾಮುಖೀಯು ಅಲ್ಲಿನ ಅನೇಕ ಗ್ರಾಮಗಳನ್ನು ಬೂದಿಯ ಹೊದಿಕೆಯಡಿ ಹುದುಗಿಸಿದ್ದರೂ, ಅಲ್ಲಿನ ಜನರ ಜೀವನೋತ್ಸಾಹ ಸ್ವಲ್ಪವೂ ತಗ್ಗಿಲ್ಲ. “ಕಸದಿಂದಲೇ ರಸ’ ಎನ್ನುವಂತೆ ಬಿನಾನ್‌ ನಗರದ ಜನರು, ಜ್ವಾಲಾಮುಖೀಯಿಂದ ಹೊರಬಿದ್ದಿರುವ ಬೂದಿಯನ್ನು ಪ್ಲಾಸ್ಟಿಕ್‌ ತ್ಯಾಜ್ಯದೊಂದಿಗೆ ಮಿಶ್ರ ಮಾಡಿ ಇಟ್ಟಿಗೆಗಳನ್ನು ತಯಾರಿಸುತ್ತಿದ್ದಾರೆ!

ಏಕಾಏಕಿ ಚಿಮ್ಮಿದ ಈ ಜ್ವಾಲೆಯ ಬೂದಿಯ ರಾಶಿಯನ್ನು ನೋಡುತ್ತಾ, ಮುಂದೇನು ಮಾಡುವುದು ಎಂದು ತಲೆ ಮೇಲೆ ಕೈಹೊತ್ತುಕೊಳ್ಳುವ ಬದಲು, ಅದನ್ನೇ ಬಳಸಿಕೊಂಡು ನಮ್ಮ ಪ್ರಯೋಜನಕ್ಕೆ ಬರುವ ವಸ್ತುವನ್ನಾಗಿ ಬದಲಿಸುತ್ತಿದ್ದೇವೆ ಎನ್ನುತ್ತಾರೆ ಇಲ್ಲಿನ ಸ್ಥಳೀಯರು.

ಮೊದಲೇ ಫಿಲಿಪ್ಪೀನ್ಸ್‌ ತ್ಯಾಜ್ಯದ ಬಿಕ್ಕಟ್ಟನ್ನು ಎದುರಿಸುತ್ತಿದೆ. ಇಲ್ಲಿ ಒಂದೇ ಬಾರಿ ಬಳಸಿ ಬಿಸಾಡುವಂಥ ಪ್ಲಾಸ್ಟಿಕ್‌ನ ಬಳಕೆ ಅತಿಯಾಗಿದೆ. ವರ್ಷಕ್ಕೆ 60 ಶತಕೋಟಿ ಪ್ಲಾಸ್ಟಿಕ್‌ ಸ್ಯಾಶೆಗಳನ್ನು ಬಳಸಿ ಬಿಸಾಕಲಾಗುತ್ತದೆ. ಒಂದು ಕಡೆ ಜ್ವಾಲಾಮುಖೀಯ ಬೂದಿ, ಮತ್ತೂಂದೆಡೆ ಪ್ಲಾಸ್ಟಿಕ್‌ನ ರಾಶಿ ಎರಡೂ ಹೇರಳವಾಗಿ ಸಿಗುವ ಕಾರಣ ಇಟ್ಟಿಗೆ ತಯಾರಿಸುವ ಯೋಜನೆಯು ಉತ್ತಮ ನಡೆ ಎನ್ನುತ್ತಾರೆ ಪರಿಸರ ವಿಜ್ಞಾನಿಗಳು.

ದಿನಕ್ಕೆ 5 ಸಾವಿರ ಇಟ್ಟಿಗೆ!
ಜ್ವಾಲಾಮುಖೀಯ ಬೂದಿಯನ್ನು ಮರಳು, ಸಿಮೆಂಟ್‌ ಮತ್ತು ಪ್ಲಾಸ್ಟಿಕ್‌ ತ್ಯಾಜ್ಯದೊಂದಿಗೆ ಮಿಶ್ರಣ ಮಾಡಿ ಇಟ್ಟಿಗೆಗಳನ್ನು ತಯಾರಿಸಲಾಗುತ್ತದೆ. ಪ್ರತಿ ದಿನ ಹೀಗೆ ಸುಮಾರು 5 ಸಾವಿರ ಇಟ್ಟಿಗೆ ತಯಾರಿಸಿದ್ದೇವೆ. ಇವುಗಳನ್ನು ಸ್ಥಳೀಯ ಕಟ್ಟಡ ನಿರ್ಮಾಣಕ್ಕೆ ಬಳಸುತ್ತೇವೆ ಎಂದು ಗ್ರಾಮಸ್ಥರು ಹೇಳಿದ್ದಾರೆ.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ

  • ಬೆಂಗಳೂರು: ಕೇಂದ್ರದಿಂದ ರಾಜ್ಯಕ್ಕೆ ಬರಬೇಕಾದ ಸಹಾಯಾನುದಾನ ಮತ್ತು ವಂತಿಗೆ ಹಾಗೂ ತೆರಿಗೆ ಪಾಲಿನ ಕಡಿತದ ಪರಿಣಾಮ 2020-21 ನೇ ಸಾಲಿನ ಬಜೆಟ್‌ ಮೇಲೆ ಪರಿಣಾಮ ಬೀರಲಿದ್ದು...

  • ಹುಬ್ಬಳ್ಳಿ: ಮಹದಾಯಿ ಕುರಿತು ಕೇಂದ್ರದಿಂದ ಅಧಿಸೂಚನೆ ಹೊರಡಿಸುವುದು ವಿಶೇಷವಾಗಿ ಇಬ್ಬರು ಸಚಿವರಿಗೆ ಪ್ರತಿಷ್ಠೆಯಾಗಿತ್ತು. ಕೇಂದ್ರ ಸಚಿವ ಪ್ರಹ್ಲಾದ ಜೋಶಿ,...

  • ಕಾರವಾರ: ಕೊರೊನಾ ವೈರಸ್‌ ಕಾರಣಕ್ಕೆ ಜಪಾನ್‌ನ ಯೊಕೊಹಾಮಾದಲ್ಲಿ ಡೈಮಂಡ್‌ ಪ್ರಿನ್ಸಸ್‌ ಎಂಬ ಕ್ರೂಸ್‌ ಹಡಗಿನಲ್ಲಿ ಬಂಧಿಯಾಗಿದ್ದ ಕಾರವಾರ ಮೂಲದ ಅಭಿಷೇಕ್‌...

  • ಮುದಗಲ್ಲ (ರಾಯಚೂರು): ಚೀನಾದಲ್ಲಿ ಮಾರಣಹೋಮ ನಡೆಸಿರುವ ಕೊರೊನಾ ವೈರಸ್‌ ಪರಿಣಾಮ ಇಲ್ಲಿನ ಕಲ್ಲು ಗಣಿಗಾರಿಕೆ ಮೇಲೂ ಆಗಿದೆ. ಕೊರೊನಾ ವೈರಸ್‌ ಪರಿಣಾಮ ಚೀನಾ ಸೇರಿ...

  • ಬೆಂಗಳೂರು: ಸಿದ್ದರಾಮಯ್ಯ ಹೇಳಿದ ಕೂಡಲೇ ಕಾಂಗ್ರೆಸ್‌ ಬಿಟ್ಟು ಹೋಗಿರುವವರು ವಾಪಸ್‌ ಬರ್ತಾರೆ ಎಂದು ಕಾಂಗ್ರೆಸ್‌ ಹಿರಿಯ ನಾಯಕಿ ಮಾರ್ಗರೇಟ್‌ ಆಳ್ವಾ ಹೇಳಿಕೆಯನ್ನು...