ಭಾರತದ ಸಂಸ್ಕೃತಿ, ಪರಂಪರೆಯ “ಉಡುಗೊರೆ’


Team Udayavani, Jun 29, 2022, 7:00 AM IST

ಭಾರತದ ಸಂಸ್ಕೃತಿ, ಪರಂಪರೆಯ “ಉಡುಗೊರೆ’

ಜರ್ಮನಿಯಲ್ಲಿ ನಡೆಯುತ್ತಿರುವ ಜಿ-7 ಶೃಂಗಸಭೆಯಲ್ಲಿ ಭಾಗವಹಿಸಿರುವ ಪ್ರಧಾನಿ ನರೇಂದ್ರ ಮೋದಿ, ಅಮೆರಿಕದ ಅಧ್ಯಕ್ಷ ಜೊ ಬೈಡನ್‌ ಸೇರಿದಂತೆ ಆ ಸಮ್ಮೇಳನದಲ್ಲಿ ಭಾಗವಹಿಸಿರುವ ವಿವಿಧ ರಾಷ್ಟ್ರಗಳ ನಾಯಕರಿಗೆ ಅಪರೂಪದ ಭಾರತೀಯ ಕಲಾಕೃತಿಗಳನ್ನು ಉಡುಗೊರೆಯಾಗಿ ನೀಡಿದ್ದಾರೆ. ಅವುಗಳ ವಿಶೇಷತೆಯೇನು ಎಂಬುದರ ಪಟ್ಟಿ ಇಲ್ಲಿದೆ.

ಯಾರ್ಯಾರಿಗೆ ಏನೇನು ಉಡುಗೊರೆ?

– ಗುಲಾಬಿ ಮೀನಕರಿ (ಅಮೆರಿಕ ಅಧ್ಯಕ್ಷ ಜೊ ಬೈಡನ್‌)
ಐಶಾರಾಮಿ ಉಡುಪುಗಳ ಮೇಲೆ ಧರಿಸಬಹುದಾದ ಪದಕ ಹಾಗೂ ಕಫ್ಲಿಂಗ್‌ಗಳು. ಇದೊಂದು ವಾರಾಣಸಿಯ ಪ್ರಾಚೀನ ಕಲೆಯಾಗಿದ್ದು, ಜಿ.ಐ. ಮಾನ್ಯತೆಯನ್ನು ಹೊಂದಿದೆ. ಬೆಳ್ಳಿಯ ಲೋಹದ ಮೋಲ್ಡ್‌ನಲ್ಲಿ ದಾಳಿಯ ಬೀಜಗಳು ಹಾಗೂ ಮೀನಾ ಗಾಜಿನ ಹರಳುಗಳನ್ನು ಕಲಾತ್ಮಕವಾಗಿ ಮೋಲ್ಡ್‌ನಲ್ಲಿ ಅಳವಡಿಸುವ ವಿಶಿಷ್ಟ ಕಲೆಯಿದು.

– ಮರೋಡಿ (ಜರ್ಮನಿ ಪ್ರಧಾನಿ ಒಲಾಫ್ ಸ್ಕೋಲ್ಜ್)
ಲೋಹದ ಕೊಡದ ಮೇಲೆ ಅತ್ಯಂತ ಸೂಕ್ಷ್ಮವಾದ, ಅಂದದ ವಿನ್ಯಾಸದ ಕುಸುರಿ ಕೆಲಸ. ಲೋಹದ ಕೊಡ ತಯಾರಿಸಿದ ಬಳಿಕ ಅದರ ಮೇಲ್ಮೈ ಮೇಲೆ ವಿಶೇಷವಾದ ಚಿಕ್ಕ ಉಳಿಗಳನ್ನು ಬಳಸಿ ಅಲಂಕಾರಿಕ ಸ್ಕೆಚ್‌ ಮಾಡಿ, ಆನಂತರ ಆ ಅಲಂಕಾರಕ್ಕೆ ಬಣ್ಣಗಳನ್ನು ತುಂಬಲಾಗುತ್ತದೆ.

– ಅಲಂಕಾರಿಕ ಟೀ ಸೆಟ್‌ (ಬ್ರಿಟನ್‌ ಪ್ರಧಾನಿ ಬೋರಿಸ್‌ ಜಾನ್ಸನ್‌)
ಕೈಯ್ಯಿಂದ ಬಿಡಿಸಿರುವ ವರ್ಣ ಚಿತ್ರಗಳುಳ್ಳ ಚಹಾ ಕಪ್‌ಗಳು ಹಾಗೂ ಸಾಸರ್‌. ಪ್ಲಾಟಿನಂ ಲೋಹವನ್ನು ಕರಗಿಸಿ ಅದನ್ನು ಬಣ್ಣದ ರೂಪದಲ್ಲಿ ಈ ಕಪ್‌, ಸಾಸರ್‌ಗಳ ಮೇಲೆ ಅಲಂಕಾರಕ್ಕಾಗಿ ಬಳಸಲಾಗುತ್ತದೆ.

– ಸುಗಂಧ ದ್ರವ್ಯ (ಫ್ರಾನ್ಸ್‌ ಅಧ್ಯಕ್ಷ ಇಮ್ಯಾನ್ಯುಯಲ್‌ ಮ್ಯಾಕ್ರನ್‌)
ರೇಷ್ಮೆಯ ನಯವಾದ ವಸ್ತ್ರದ ನಡುವೆ ಇಡಲಾದ (ಝರೋಡಿ ಬಾಕ್ಸ್‌), ಗಿಡಗಳು, ಹೂವುಗಳಿಂದ ನೈಸರ್ಗಿಕ ವಿಧಾನದಲ್ಲಿ ಮಾಡಲ್ಪಟ್ಟ ಸುಗಂಧ ದ್ರವ್ಯ. ಲಕ್ನೋ ನಗರಿಯ ಪ್ರಾಚೀನವಾದ ಕಲೆಯಿದು.

– ಕಾಶ್ಮೀರಿ ನೆಲಹಾಸು (ಕೆನಡಾ ಪ್ರಧಾನಿ ಜಸ್ಟಿನ್‌ ಡ್ರುಡ್ಯು)
ಕೋಮಲತೆಗ, ಮೆದುವಿಗೆ ಜಗದ್ವಿಖ್ಯಾತಿ ಹೊಂದಿರುವ ಕಾಶ್ಮೀರಿ ನೆಲಹಾಸುಗಳು. ಸೌಂದರ್ಯ, ಕಲಾ ಶ್ರೀಮಂತಿಗೂ ಇವು ಹೆಸರುವಾಸಿ.

– ಕಪ್ಪು ಮಡಿಕೆಯ ಕಲಾಕೃತಿ (ಜಪಾನ್‌ ಪ್ರಧಾನಿ ಫ್ಯೂಮಿಯೊ ಕಿಶಿದಾ)
ಉತ್ತರ ಪ್ರದೇಶದ ನಿಜಾಮಾಬಾದ್‌ನ ಕಲೆ. ಸಾಮಾನ್ಯವಾದ ಮಡಿಕೆ ಮಾಡುವ ಪ್ರಕ್ರಿಯೆಯಲ್ಲೇ ಇದನ್ನು ತಯಾರಿಸಲಾಗುತ್ತದೆಯಾದರೂ, ಕುಲುಮೆಯಲ್ಲಿ ಮಡಿಕೆ ತಯಾರಾಗುವಾಗಲೇ ಕುಲುಮೆಗೆ ಆಮ್ಲಜನಕ ಹರಿಯುವಿಕೆಯನ್ನು ತಡೆಗಟ್ಟಿ ಅದನ್ನು ಕಪ್ಪು ಮಡಿಕೆಯನ್ನಾಗಿ ರೂಪುಗೊಳ್ಳುವಂತೆ ಮಾಡುವ ವಿಶಿಷ್ಟತೆ ಇದರ ತಯಾರಿಕೆಯಲ್ಲಿದೆ.

– ಅಮೃತ ಶಿಲೆಯ ಟೇಬಲ್‌ ಟಾಪ್‌ (ಇಟಲಿ ಪ್ರಧಾನಿ ಮರಿಯೊ ಡ್ರಾ )
ಇದು ಪುರಾತನ ರೋಮನ್‌ ಮೂಲದ ಒಪಲ್‌ ಸೆಕ್ಟಿಲ್‌ ಎಂಬ ಕಲೆಯನ್ನು ಆಧರಿಸಿದ್ದರೂ ಇದಕ್ಕೆ ಭಾರತೀಯತೆಯ ಸ್ಪರ್ಶನವಿದೆ. ಇದು ಉತ್ತರ ಪ್ರದೇಶದ ಆಗ್ರಾದಲ್ಲಿ ಹೆಚ್ಚು ಜನಪ್ರಿಯ. ಅಮೃತಶಿಲೆ, ಕಲ್ಲಿನ ಹರಳುಗಳು ಮುಂತಾದ ರೀತಿಯಲ್ಲಿ ಈ ಕಲಾಕೃತಿಯನ್ನು ರಚಿಸಲಾಗುತ್ತದೆ.

– ಡೋಕ್ರಾ ಕಲಾಕೃತಿ (ದಕ್ಷಿಣ ಆಫ್ರಿಕಾ ಅಧ್ಯಕ್ಷ ಸಿರಿಲ್‌ ರಾಮಪೋಸಾ ಹಾಗೂ ಅರ್ಜೆಂಟೈನಾ ಅಧ್ಯಕ್ಷ ಅಲ್ಬರ್ಟೊ ಫೆರ್ನಾಂಡೀಸ್)
ಇದು ಛತ್ತೀಸ್‌ಗಡದಲ್ಲಿ ಸುಮಾರು 4 ಸಾವಿರ ವರ್ಷಗಳಿಂದ ಜೀವಂತವಾಗಿರುವ ಕಲೆ. ಲೋಹ, ಅಲಂಕಾರಿಕ ಸಾಧನಗಳನ್ನು ಬಳಸಿ ರಾಮಾಯಣದ ದೃಶ್ಯಗಳನ್ನು ಬಿಂಬಿಸುವ ಕಲಾಕೃತಿಗಳನ್ನು ರಚಿಸುವ ಕಲೆಯಿದು.

– ಮೂಂಜ್‌ ಬುಟ್ಟಿಗಳು (ಸೆನೆಗಲ್‌ ಅಧ್ಯಕ್ಷ ಮ್ಯಾಕಿ ಸಾಲ್‌)
ಇದು ಉತ್ತರ ಪ್ರದೇಶದ ಪ್ರಯಾಗ್‌ ರಾಜ್‌ನಲ್ಲಿರುವ ಪ್ರಾಚೀನ ಕಲೆ. ದರ್ಬೆ ಅಥವಾ ಗರಿಕೆ ಮಾದರಿಯ ಹುಲ್ಲಿನ ಎಲೆಗಳನ್ನು ಒಣಗಿಸಿ ದಾರಗಳನ್ನು ಈ ಬುಟ್ಟಿಗಳನ್ನು, ಕಲಾಕೃತಿಗಳನ್ನು ನಿರ್ಮಿಸಲಾಗುತ್ತದೆ. ತೀರಾ ಸೂಕ್ಷ್ಮವಾಗಿರುವ ಈ ಎಳೆಗಳನ್ನು ತಾಳ್ಮೆಯಿಂದ ನೇಯುವುದೇ ಒಂದು ಸವಾಲಿನ ಕೆಲಸ.

– ರಾಮ್‌ ದರ್ಬಾರ್‌ (ಇಂಡೋನೇಷ್ಯಾ ಅಧ್ಯಕ್ಷ ಜೊಕೊ ವಿಡೊಕೊ)
ಇದು ಕೂಡ ಉತ್ತರ ಪ್ರದೇಶದ ವಾರಾಣಸಿಯ ಕಲಾಕೃತಿ. ಇದಕ್ಕೂ ಜಿ.ಐ. ಮಾನ್ಯತೆಯಿದೆ. ನಮ್ಮ ಚನ್ನಪಟ್ಟಣದ ಗೊಂಬೆಗಳಂತೆಯೇ ಇವುಗಳನ್ನೂ ಮರದಿಂದ ಮಾಡಲಾಗುತ್ತದೆ. ಆದರೆ, ಇವು ಹಿಂದೂ ಪುರಾಣಗಳಲ್ಲಿನ ದೇವತೆಗಳನ್ನು ಮಾತ್ರ ಬಿಂಬಿಸುತ್ತವೆ. ಇಂಡೋನೇಷ್ಯಾದಲ್ಲಿ ಭಾರತದ ರಾಮಾಯಣವನ್ನು ಕ್ರಿ.ಶ. 732ರಿಂದ 1006ರ ಅವಧಿಯಲ್ಲಿ ಪುರಾಣವಾಗಿ ಬರೆಯಲಾಗಿದೆ. ಹಾಗಾಗಿ, ಇದನ್ನು ಜೋಕೊ ಅವರಿಗೆ ಪ್ರಧಾನಿ ನೀಡಿದ್ದಾರೆ.

ಟಾಪ್ ನ್ಯೂಸ್

9-joshi

ದಿಂಗಾಲೇಶ್ವರ ಸ್ವಾಮೀಜಿಗೆ ತಪ್ಪು ತಿಳಿವಳಿಕೆಯಾಗಿದ್ದರೆ ಸರಿಪಡಿಸುವೆ: ಸಚಿವ ಪ್ರಹ್ಲಾದ ಜೋಶಿ

ಲೋಕಸಭಾ ಚುನಾವಣೆ: ಈ ಬಾರಿ ತೆಲಂಗಾಣದಲ್ಲಿ 10ಕ್ಕೂ ಅಧಿಕ ಕ್ಷೇತ್ರಗಳಲ್ಲಿ ಗೆಲುವು; ಅಭಯ ಪಾಟೀಲ

ಲೋಕಸಭಾ ಚುನಾವಣೆ: ಈ ಬಾರಿ ತೆಲಂಗಾಣದಲ್ಲಿ 10ಕ್ಕೂ ಅಧಿಕ ಕ್ಷೇತ್ರಗಳಲ್ಲಿ ಗೆಲುವು; ಅಭಯ ಪಾಟೀಲ

8-gadag

Gadag: ಭ್ರಷ್ಟ ಅಧಿಕಾರಿಗೆ ಬಿಸಿ ಮುಟ್ಟಿಸಿದ ಲೋಕಾಯುಕ್ತ ಅಧಿಕಾರಿಗಳು

Arunachal Village: ಕೇವಲ ಒಂದು ಮತಕ್ಕಾಗಿ ಚುನಾವಣಾ ಅಧಿಕಾರಿಗಳ 40 ಕಿ.ಮೀ ಕಾಲ್ನಡಿಗೆ!

Arunachal Village: ಕೇವಲ ಒಂದು ಮತಕ್ಕಾಗಿ ಚುನಾವಣಾ ಅಧಿಕಾರಿಗಳ 40 ಕಿ.ಮೀ ಕಾಲ್ನಡಿಗೆ!

SSLC ಪರೀಕ್ಷೆ ವೇಳೆ ಉತ್ತರ ತೋರಿಸಲಿಲ್ಲ ಎಂದು ಸಹಪಾಠಿಗೆ ಚಾಕು ಇರಿದ ವಿದ್ಯಾರ್ಥಿಗಳು

SSLC ಪರೀಕ್ಷೆ ವೇಳೆ ಉತ್ತರ ತೋರಿಸಲಿಲ್ಲ ಎಂದು ಸಹಪಾಠಿಗೆ ಚಾಕು ಇರಿದ ವಿದ್ಯಾರ್ಥಿಗಳು

Shocking: ಮುಸುಧಾರಿಗಳಿಂದ ಗುರುದ್ವಾರದ ಸಿಬಂದಿಯ ಗುಂಡಿಕ್ಕಿ ಹತ್ಯೆ… ಭಯಾನಕ ದೃಶ್ಯ ಸೆರೆ

Shocking: ಮುಸುಧಾರಿಗಳಿಂದ ಗುರುದ್ವಾರದ ಸಿಬ್ಬಂದಿಯ ಗುಂಡಿಕ್ಕಿ ಹತ್ಯೆ.. ಭಯಾನಕ ದೃಶ್ಯ ಸೆರೆ

6-bng

Bengaluru: ಪೇಂಟರ್‌ ಕೊಂದು ಪೊಲೀಸ್‌ ಠಾಣೆಗೆ ಬಂದು ಸಿಕ್ಕಿಬಿದ್ದ ಸ್ನೇಹಿತರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Baltimore bridge: ಬಾಲ್ಟಿಮೋರ್ ಸೇತುವೆ ಕುಸಿತ: ಇಬ್ಬರ ಮೃತದೇಹ ಹೊರತೆಗೆದ ರಕ್ಷಣಾ ತಂಡ

Baltimore bridge: ಬಾಲ್ಟಿಮೋರ್ ಸೇತುವೆ ಕುಸಿತ: ಇಬ್ಬರ ಮೃತದೇಹ ಹೊರತೆಗೆದ ರಕ್ಷಣಾ ತಂಡ

America: ಕಾನೂನು ಸಮರದಲ್ಲಿ ಹೈರಾಣ-ಹಣ ಸಂಗ್ರಹಕ್ಕಾಗಿ ಟ್ರಂಪ್‌ ಬೈಬಲ್‌ ಮಾರಾಟ!

America: ಕಾನೂನು ಸಮರದಲ್ಲಿ ಹೈರಾಣ-ಹಣ ಸಂಗ್ರಹಕ್ಕಾಗಿ ಟ್ರಂಪ್‌ ಬೈಬಲ್‌ ಮಾರಾಟ!

1—weqe

Baltimore bridge collapse; ಆರು ಕಾರ್ಮಿಕರು ನಾಪತ್ತೆ: ಪತ್ತೆ ಕಾರ್ಯ ಸ್ಥಗಿತ

LGBTQ Couple anjali chakra sufi malik broke their marriage

Anjali Chakra – Sufi Malik; ಮದುವೆಗೂ ಮುನ್ನ ಭಾರತ-ಪಾಕ್‌ ಸಲಿಂಗಿ ಜೋಡಿ ಬ್ರೇಕಪ್‌!

ವಿಯೆಟ್ನಾಂನಲ್ಲಿ ಹಕ್ಕಿಜ್ವರಕ್ಕೆ ಮೊದಲ ಬಲಿ!

H5N1: ವಿಯೆಟ್ನಾಂನಲ್ಲಿ ಹಕ್ಕಿಜ್ವರಕ್ಕೆ ಮೊದಲ ಬಲಿ!

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

Mollywood: “ಆಡುಜೀವಿತಂ” ಮೇಲೆ ಪೃಥ್ವಿರಾಜ್‌ ನಿರೀಕ್ಷೆ

Mollywood: “ಆಡುಜೀವಿತಂ” ಮೇಲೆ ಪೃಥ್ವಿರಾಜ್‌ ನಿರೀಕ್ಷೆ

9-joshi

ದಿಂಗಾಲೇಶ್ವರ ಸ್ವಾಮೀಜಿಗೆ ತಪ್ಪು ತಿಳಿವಳಿಕೆಯಾಗಿದ್ದರೆ ಸರಿಪಡಿಸುವೆ: ಸಚಿವ ಪ್ರಹ್ಲಾದ ಜೋಶಿ

ಲೋಕಸಭಾ ಚುನಾವಣೆ: ಈ ಬಾರಿ ತೆಲಂಗಾಣದಲ್ಲಿ 10ಕ್ಕೂ ಅಧಿಕ ಕ್ಷೇತ್ರಗಳಲ್ಲಿ ಗೆಲುವು; ಅಭಯ ಪಾಟೀಲ

ಲೋಕಸಭಾ ಚುನಾವಣೆ: ಈ ಬಾರಿ ತೆಲಂಗಾಣದಲ್ಲಿ 10ಕ್ಕೂ ಅಧಿಕ ಕ್ಷೇತ್ರಗಳಲ್ಲಿ ಗೆಲುವು; ಅಭಯ ಪಾಟೀಲ

Sandalwood: ಪ್ರಕೃತಿಯ ಸುತ್ತ “ಕೃಷ್ಣಾವತಾರ’

Sandalwood: ಪ್ರಕೃತಿಯ ಸುತ್ತ “ಕೃಷ್ಣಾವತಾರ’

8-gadag

Gadag: ಭ್ರಷ್ಟ ಅಧಿಕಾರಿಗೆ ಬಿಸಿ ಮುಟ್ಟಿಸಿದ ಲೋಕಾಯುಕ್ತ ಅಧಿಕಾರಿಗಳು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.