ಮೋದಿ ಅದ್ಭುತ ಮನುಷ್ಯ, ಆದ್ರೆ ಅಮೆರಿಕಕ್ಕೆ ಲಾಭ ಇಲ್ಲ: ಟ್ರಂಪ್‌


Team Udayavani, Feb 27, 2018, 11:40 AM IST

Trump-nothing-700.jpg

ವಾಷಿಂಗ್ಟನ್‌ : ಭಾರತದ ಪ್ರಧಾನಿ ನರೇಂದ್ರ ಮೋದಿ ಓರ್ವ ಅದ್ಭುತ ಮನುಷ್ಯ; ಆದರೆ ಅವರಿಂದ ಅಮೆರಿಕಕ್ಕೆ ಮಾತ್ರ ಏನೂ ಲಾಭವಿಲ್ಲ ಎಂದು ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ವ್ಯಂಗ್ಯ ಮತ್ತು ಕೋಪದಿಂದ ಹೇಳಿದ್ದಾರೆ. 

ಅಮೆರಿಕನ್‌ ವಸ್ತುಗಳ ಮೇಲಿನ ಆಮದು ಸುಂಕ ಕಡಿತನ ಕುರಿತಾಗಿ ಎರಡೇ ವಾರಗಳ ಅವಧಿಯಲ್ಲಿ ಟ್ರಂಪ್‌ ಭಾರತವನ್ನು  ದೂರುತ್ತಿರುವುದು ಇದೀಗ ಎರಡನೇ ಬಾರಿ. 

ಅಮೆರಿಕನ್‌ ಮೋಟರ್‌ ಸೈಕಲ್‌ಗ‌ಳು, ವಿಶೇಷವಾಗಿ ಹ್ಯಾರ್ಲೆ ಡೇವಿಡ್‌ಸನ್‌ ಬೈಕುಗಳ ಮೇಲಿನ ಭಾರತೀಯ ಆಮದು ಸುಂಕ ಅತೀ ಹೆಚ್ಚಿದೆ; ಇದನ್ನು ಕಡಿಮೆ ಮಾಡಬೇಕು ಎಂಬುದೇ ಟ್ರಂಪ್‌ ಅವರ ಒತ್ತಾಯವಾಗಿದೆ. 

“ನಾನು ಪ್ರಧಾನಿ ಮೋದಿ ಅವರೊಂದಿಗೆ ಈ ವಿಷಯ ಮಾತನಾಡಿದಾಗ ಅವರು ಶೇ.50ರಷ್ಟು ಆಮದು ಸುಂಕ ತಗ್ಗಿಸಿರುವುದಾಗಿ ಹೇಳಿದರು. ಮೋದಿ ಹಾಗೆ ಮಾಡಿರುವ ಹೊರತಾಗಿಯೂ ಅಮೆರಿಕಕ್ಕೆ ಏನೂ ಸಿಗುತ್ತಿಲ್ಲ. ಆಮದು ಸುಂಕವನ್ನು ಶೇ.50ರಷ್ಟು  ತಗ್ಗಿಸುವ ಮೂಲಕ ನಮಗೇನೋ ಭಾರೀ ಪ್ರಯೋಜನ ಮಾಡಿಕೊಟ್ಟಿದ್ದೇವೆ ಎಂಬ ಭಾವನೆ ಮೋದಿ ಅವರಲ್ಲಿದೆ; ಆದರೆ ಅದರಿಂದ ನಮಗೇನೂ ವಿಶೇಷವಾದ ಲಾಭವಾಗಿಲ್ಲ’ ಎಂದು ಟ್ರಂಪ್‌ ಅವರು ಶ್ವೇತಭವನದಲ್ಲಿ ಕರೆದಿದ್ದ ರಾಜ್ಯಪಾಲರುಗಳ ಸಭೆಯಲ್ಲಿ ಹೇಳಿದರು. 

ಟ್ರಂಪ್‌ ಅವರು ಈ ಹಿಂದೆ ಅಮೆರಿಕನ್‌ ಮೋಟಾರ್‌ ಸೈಕಲ್‌ ಮೇಲಿನ ಭಾರತದ ಆಮದು ಸುಂಕ ಬಿಕ್ಕಟ್ಟನ್ನು ಬಗೆಹರಿಸಿದಿದ್ದರೆ ಅಮೆರಿಕವು ಕಣ್ಣಿಗೆ ಕಣ್ಣು ಎಂಬ ನೆಲೆಯಲ್ಲಿ ಗಂಭೀರ ಪ್ರತೀಕಾರದ ಕ್ರಮ ತಗೆದುಕೊಳ್ಳಲಿದೆ ಎಂದು ಹೇಳಿದ್ದರು. 

ಆಮದು ಸುಂಕವನ್ನು ಶೇ.75ರಷ್ಟು ಕಡಿತ ಮಾಡುವುದಾಗಿ ಹೇಳಿದ್ದ ಭಾರತ ಕೊನೆಗೂ ಮಾಡಿದ್ದು ಶೇ.50ರಷ್ಟನ್ನು ಮಾತ್ರ ಎಂಬುದು ಟ್ರಂಪ್‌ ನಿರಾಶೆಗೆ ಕಾರಣವಾಗಿದೆ. ತಮಗಾದ ನಿರಾಶೆಯನ್ನು ಟ್ರಂಪ್‌ ಅವರು ಮೋದಿ ಅವರ ಎಂದಿನ “ನಮಸ್ತೇ’ ಮೂಲಕವೇ ಪ್ರಕಟಿಸಿರುವುದು ವಿಶೇಷವಾಗಿದೆ. 

ಟಾಪ್ ನ್ಯೂಸ್

Rahul Gandhi 3

BJP ಮಾಧ್ಯಮಗಳಿಂದ ನನಗೆ ನಿತ್ಯ ನಿಂದನೆ: ರಾಹುಲ್‌ ಗಾಂಧಿ ಆರೋಪ

1-qewqeqwe

TIME; ವಿಶ್ವದ 100 ಪ್ರಭಾವಿಗಳ ಪೈಕಿ ಆಲಿಯಾ, ಪ್ರಿಯಂವದ

1-aewr

DRDO; ನಿರ್ಭಯ್‌ ಪರೀಕ್ಷಾರ್ಥ ಉಡಾವಣೆ ಯಶಸ್ವಿ

1eewqe

Iran ವಶದಲ್ಲಿದ್ದ ಹಡಗಿನ ಮಹಿಳಾ ಸಿಬಂದಿ ವಾಪಸ್‌

vachanananda

Panchamasali ಎಂಬ ಕಾರಣಕ್ಕೆ ಯತ್ನಾಳ್‌ಗೆ ಸಿಎಂ ಅವಕಾಶ ನಿರಾಕರಣೆ: ವಚನಾನಂದ ಶ್ರೀ

police crime

Chitradurga: ಅನ್ಯಕೋಮಿನ ಯುವತಿಗೆ ಡ್ರಾಪ್ ನೀಡಿದ್ದಕ್ಕೆ ಹಲ್ಲೆ

1-wewq-eqwe

IPL; ರೋಚಕ ಪಂದ್ಯದಲ್ಲಿ ಪಂಜಾಬ್‌ ಎದುರು 9 ರನ್ ಜಯ ಸಾಧಿಸಿದ ಮುಂಬೈ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Russia War: ಉಕ್ರೇನ್‌ ಮೇಲೆ ರಷ್ಯಾ ಭೀಕರ ದಾಳಿ-17 ಮಂದಿ ಮೃತ್ಯು; ನೆರವಿಗಾಗಿ ಮನವಿ

Russia War: ಉಕ್ರೇನ್‌ ಮೇಲೆ ರಷ್ಯಾ ಭೀಕರ ದಾಳಿ-17 ಮಂದಿ ಮೃತ್ಯು; ನೆರವಿಗಾಗಿ ಮನವಿ

ನನ್ನ ಪತ್ನಿಗೆ ಏನಾದರೂ ಆದರೆ…: ಸೇನಾ ಮುಖ್ಯಸ್ಥರಿಗೆ ಎಚ್ಚರಿಕೆ ನೀಡಿದ ಇಮ್ರಾನ್ ಖಾನ್

ನನ್ನ ಪತ್ನಿಗೆ ಏನಾದರೂ ಆದರೆ…: ಸೇನಾ ಮುಖ್ಯಸ್ಥರಿಗೆ ಎಚ್ಚರಿಕೆ ನೀಡಿದ ಇಮ್ರಾನ್ ಖಾನ್

Heavy Rain: ಮರಳುಗಾಡು ದುಬೈನಲ್ಲಿ ಧಾರಾಕಾರ ಮಳೆ, ಪ್ರವಾಹ ಪರಿಸ್ಥಿತಿ-ಜನಜೀವನ ಅಸ್ತವ್ಯಸ್ತ

Heavy Rain: ಮರಳುಗಾಡು ದುಬೈನಲ್ಲಿ ಧಾರಾಕಾರ ಮಳೆ, ಪ್ರವಾಹ ಪರಿಸ್ಥಿತಿ-ಜನಜೀವನ ಅಸ್ತವ್ಯಸ್ತ

Rain: ವರುಣನ ಆರ್ಭಟಕ್ಕೆ ನಲುಗಿದ ದುಬೈ… ವಿಮಾನ ನಿಲ್ದಾಣ ಜಲಾವೃತ, ಜನಜೀವನ ಅಸ್ತವ್ಯಸ್ಥ

Rain: ವರುಣನ ಆರ್ಭಟಕ್ಕೆ ನಲುಗಿದ ದುಬೈ… ವಿಮಾನ ನಿಲ್ದಾಣ ಜಲಾವೃತ, ಜನಜೀವನ ಅಸ್ತವ್ಯಸ್ಥ

Israel-Iran ಅಣುಯುದ್ಧ? ಇರಾನ್‌ನ ಅಣುಸ್ಥಾವರಗಳ ಮೇಲೆ ದಾಳಿ: ವಿಶ್ವಸಂಸ್ಥೆ ಆತಂಕ

Israel-Iran ಅಣುಯುದ್ಧ? ಇರಾನ್‌ನ ಅಣುಸ್ಥಾವರಗಳ ಮೇಲೆ ದಾಳಿ: ವಿಶ್ವಸಂಸ್ಥೆ ಆತಂಕ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

30

CET Exam: ಮೊದಲ ದಿನ ಸುಸೂತ್ರವಾಗಿ ನಡೆದ ಸಿಇಟಿ

1-wqeqwe

Maharashtra; ರತ್ನಾಗಿರಿ- ಸಿಂಧುದುರ್ಗದಲ್ಲಿ ರಾಣೆ vs ಠಾಕ್ರೆ ಕಾದಾಟ

1-HM

Mathura ನನ್ನನ್ನು ಗೋಪಿಕೆಯೆಂದು ಭಾವಿಸುವೆ: ಬಿಜೆಪಿ ಅಭ್ಯರ್ಥಿ ಹೇಮಾ

Rahul Gandhi 3

BJP ಮಾಧ್ಯಮಗಳಿಂದ ನನಗೆ ನಿತ್ಯ ನಿಂದನೆ: ರಾಹುಲ್‌ ಗಾಂಧಿ ಆರೋಪ

1-qewqeqwe

TIME; ವಿಶ್ವದ 100 ಪ್ರಭಾವಿಗಳ ಪೈಕಿ ಆಲಿಯಾ, ಪ್ರಿಯಂವದ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.