ಹಾಂಕಾಂಗ್‌ ಪ್ರತಿಭಟನೆ ತಾರಕಕ್ಕೆ

ವಿಮಾನ ನಿಲ್ದಾಣದಲ್ಲಿ ನಡೆಯುತ್ತಿರುವ ಧರಣಿ 2ನೇ ದಿನಕ್ಕೆ

Team Udayavani, Aug 14, 2019, 5:57 AM IST

ಬೀಜಿಂಗ್‌: ಚೀನದ ಆಡಳಿತದಿಂದ ಮುಕ್ತವಾಗಿ ಹಾಂಕಾಂಗ್‌ ಸ್ವತಂತ್ರಗೊಳ್ಳ ಬೇಕೆಂದು ಆಗ್ರಹಿಸಿ ಸೋಮವಾರದಿಂದ ಇಲ್ಲಿನ ವಿಮಾನ ನಿಲ್ದಾಣದಲ್ಲಿ ನಡೆಯುತ್ತಿರುವ ಪ್ರತಿಭಟನೆ ಮಂಗಳವಾರವೂ ಮುಂದುವರಿದಿದೆ.

ಪ್ರತಿಭಟನೆಯಿಂದ ಸೋಮವಾರ ಮಧ್ಯಾಹ್ನ, ನಿಲ್ದಾಣದ ಎಲ್ಲಾ ಚೆಕ್‌-ಇನ್‌ ಸೇವೆ ಗಳನ್ನು ಹಾಗೂ ನಿಲ್ದಾಣದಿಂದ ತೆರಳ ಬೇಕಿದ್ದ ಎಲ್ಲಾ ವಿಮಾನಗಳ ಹಾರಾಟವನ್ನು ರದ್ದುಗೊಳಿಸಿದ್ದ ಅಲ್ಲಿನ ಆಡಳಿತ ಮಂಡಳಿ, ಮಂಗಳವಾರವೂ ಇದೇ ಸ್ಥಿತಿಯನ್ನು ಕಾಯ್ದು ಕೊಂಡಿತು. ಹಾಂಕಾಂಗ್‌ ಮೇಯರ್‌ ಕ್ಯಾರಿ ಲಾಮ್‌ ನೀಡಿದ ಎಚ್ಚರಿಕೆ ಫ‌ಲ ನೀಡಿಲ್ಲ.

ಭಾರತದ ಸಲಹೆ
ಹಾಂಕಾಂಗ್‌ಗೆ ತೆರಳಲಿರುವ ಅಥವಾ ಆ ನಗರದ ಮೂಲಕ ಬೇರೆಡೆಗೆ ತೆರಳ ಬಯಸುವ ಭಾರತೀಯ ಪ್ರಯಾಣಿಕರಿಗೆ ಮುನ್ನೆಚ್ಚರಿಕಾ ಸಲಹೆ ನೀಡಿರುವ ಭಾರತ ಸರಕಾರ, ಅಲ್ಲಿನ ಪರಿಸ್ಥಿತಿಯನ್ನು ವಿವರಿಸಿದ್ದು, ಹಾಂಕಾಂಗ್‌ಗೆ ತೆರಳಬೇಕಿರುವ ಪ್ರಯಾಣಿಕರು ತಮ್ಮ ವಿಮಾನ ಸೇವಾ ಸಂಸ್ಥೆಯನ್ನು ಸಂಪರ್ಕಿಸಿ, ಬದಲಿ ಮಾರ್ಗದ ವ್ಯವಸ್ಥೆ ಮಾಡಿಕೊಳ್ಳಬೇಕೆಂದು ಹೇಳಿದೆ.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ