ನಾಯಿ ಮಲ ಹೆಕ್ಕಲೂ ಬಂತು ರೊಬೋಟ್‌! ಮಲ ಎಲ್ಲಿದೆ ಎಂದು ಹುಡುಕಿ, ಹೆಕ್ಕುತ್ತದೆ!

Team Udayavani, Dec 15, 2019, 8:40 PM IST

ವಾಷಿಂಗ್ಟನ್‌: ನಾಯಿಗಳು ಹೋದ ಕಡೆಗಳಲ್ಲಿ ಕೆಲವೊಮ್ಮೆ ಛೀ.. ಥೂ..! ಮಾಡಿ ಬಿಡುತ್ತವೆ. ಎಲ್ಲರೂ ಸಂಚರಿಸುವ ಪ್ರದೇಶಗಳಲ್ಲಿ ಅದನ್ನು ತೆಗೆಯುವುದೂ ಕಷ್ಟವೇ.

ಇಂತಹ ಸಮಸ್ಯೆ ವಿದೇಶೀಯರಿಗೂ ಇದೆ. ಇದಕ್ಕಾಗಿ ಅವರೀಗ ಪರಿಹಾರವನ್ನೂ ಕಂಡುಹುಡುಕಿದ್ದಾರೆ.

ಇನ್ನು ಅಮೆರಿಕದಲ್ಲಿ ನಾಯಿ ಮಲ ಹಾಕಿದರೆ ಚಿಂತೆ ಇಲ್ಲ. ಅದಕ್ಕಾಗಿ ಅವರು ರೊಬೋಟ್‌ ಒಂದನ್ನು ಆವಿಷ್ಕರಿಸಿದ್ದು, ಅದುವೇ ನಾಯಿ ಮಲ ಎಲ್ಲಿದೆ ಎಂದು ಹುಡುಕಾಡಿ ಅದನ್ನು ತೆಗೆದು ಶುಚಿಗೊಳಿಸಲಿದೆ.

ಬೀಟ್ಲೆ ಎಂಬ ಹೆಸರಿನ ಈ ರೊಬೋಟ್‌ ಕಂಪ್ಯೂಟರ್‌ ಕಣ್ಣುಗಳನ್ನು ಹೊಂದಿದ್ದು, ನಾಯಿ ಮಲ ಎಲ್ಲಿದೆ ಎಂದು ಹುಡುಕಾಡುತ್ತದೆ. ನಾಯಿ ಮಲ ಕಂಡ ತಕ್ಷಣ ಅದರ ಮೇಲೆ ಹೋಗಿ ತನ್ನ ಕೆಳಭಾಗದಲ್ಲಿರುವ ಮೆಕ್ಯಾನಿಕಲ್‌ ಕೈಯಿಂದ ಮಲವನ್ನು ಹೆಕ್ಕುತ್ತದೆ. ಬಳಿಕ ಅದನ್ನು ಸೀಲ್‌ ಆಗಿರುವ ಕಂಟೈನರ್‌ಗೆ ಹಾಕಿ ಬೇರೆ ಕಡೆಯಲ್ಲಿ ವಿಲೇವಾರಿ ಮಾಡುತ್ತದೆ.

ನಿರ್ದಿಷ್ಟ ಪ್ರದೇಶದ ಒಳಗೆ ಅದು ನಾಯಿ ಮಲವನ್ನು ಗುರುತಿಸುತ್ತದೆ. ಇದಕ್ಕಾಗಿ ಮನೆಯ ಅಂಗಳ ಎಷ್ಟು ದೊಡ್ಡದಿದೆ? ಎಲ್ಲಿ ಮಲ ಹುಡುಕಾಡಬೇಕು ಎಂದು ಮೊದಲು ಮಾಹಿತಿಯನ್ನು ರೊಬೋಟ್‌ಗೆ ನೀಡಬೇಕಿದೆ.

ಕೃತಕ ಬುದ್ಧಿಮತ್ತೆ ಅನ್ವಯ ರೊಬೋಟ್‌ ಈ ಕೆಲಸ ಮಾಡುತ್ತದೆ. ಸದ್ಯ ರೊಬೋಟ್‌ ಪ್ರಾಯೋಗಿಕ ಹಂತದಲ್ಲಿದ್ದು, ಶೀಘ್ರದಲ್ಲಿ ಮಾರುಕಟ್ಟೆಯಲ್ಲಿ ಲಭ್ಯವಾಗಲಿದೆ. ಮುಂದಿನ ದಿನಗಳಲ್ಲಿ ನಾಯಿ ಅಲ್ಲದೆ ಇತರ ಸಾಕು ಪ್ರಾಣಿಗಳ ಮಲವನ್ನೂ ಪತ್ತೆ ಮಾಡುವಂತೆ ರೊಬೋಟ್‌ ಅನ್ನು ಸುಧಾರಿಸುವ ಉದ್ದೇಶವನ್ನು ಕಂಪೆನಿ ಹೊಂದಿದೆ.

ಮುಂಭಾಗ ಎರಡು ದೊಡ್ಡದಾದ ಮತ್ತು ಹಿಂಭಾಗ ಎರಡು ಸಣ್ಣ ಚಕ್ರಗಳನ್ನು ಹೊಂದಿದೆ. ಕಂಪ್ಯೂಟರೀಕೃತ ವ್ಯವಸ್ಥೆ, ಮಲ ಶೇಖರಣೆ ಮಾಡುವ ವ್ಯಸ್ಥೆಯನ್ನು ಹೊಂದಿದೆ.

ಜಿಪಿಎಸ್‌ ಮುಖಾಂತರ ಇದು ಮನೆಯ ಅಂಗಳ, ಬೀದಿ, ಪಾರ್ಕ್‌ನ ಹುಲ್ಲುಹಾಸನ್ನು ಗುರುತಿಸುತ್ತದೆ.

ವಿದೇಶಗಳಲ್ಲಿ ನಾಯಿಗಳು ಕಂಡ ಕಂಡಲ್ಲಿ ಮಲ ಹಾಕುವಂತಿಲ್ಲ. ಹಾಗೊಂದು ವೇಳೆ ಹಾಕಿದರೆ ಅದಕ್ಕೆ ಮಾಲಕನೇ ಜವಾಬ್ದಾರಿ. ಇದರೊಂದಿಗೆ ಮಲವನ್ನು ತೆಗೆಯಲು ಸುಲಭವಾಗುವಂತೆ ಈ ರೊಬೋಟ್‌ ಇರಲಿದೆ.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ