ತಾರಾಪುಂಜದಲ್ಲೊಂದು ವಿರೂಪಿ ಗ್ರಹ ಪತ್ತೆ
Team Udayavani, Jan 14, 2022, 7:20 AM IST
ಲಂಡನ್: ಗುರುಗ್ರಹಕ್ಕಿಂತ ದುಪ್ಪಟ್ಟು ಗಾತ್ರ ಹೊಂದಿರುವ, ವಿಚಿತ್ರ ಆಕಾರದ ಗ್ರಹವೊಂದನ್ನು ಇದೇ ಮೊದಲ ಬಾರಿಗೆ ನಮ್ಮದೇ ತಾರಾಪುಂಜದಲ್ಲಿ ಪತ್ತೆ ಹಚ್ಚಲಾಗಿದೆ. ಐರೋಪ್ಯ ಬಾಹ್ಯಾಕಾಶ ಸಂಸ್ಥೆಯ ಚಿಯೋಪ್ಸ್ ಉಪಗ್ರಹವು ಈ ಎಕ್ಸೋಪ್ಲಾನೆಟ್ ಅನ್ನು ಪತ್ತೆಹಚ್ಚಿದೆ.
ಸೂರ್ಯನನ್ನು ಹೊರತುಪಡಿಸಿ ನಕ್ಷತ್ರವನ್ನು ಸುತ್ತುವ ಇಂತಹ ಗ್ರಹಗಳ ಆಂತರಿಕ ರಚನೆಯನ್ನು ಅಧ್ಯಯನ ಮಾಡಲು ಇದರಿಂದ ನೆರವಾಗಲಿದೆ ಎಂದು ಖಗೋಳವಿಜ್ಞಾನಿಗಳು ಅಭಿಪ್ರಾಯಪಟ್ಟಿದ್ದಾರೆ. ಈ ಗ್ರಹವನ್ನು ವಾಸ್ಪ್-103ಬಿ ಎಂದು ಹೆಸರಿಸಲಾಗಿದ್ದು, ಹರ್ಕ್ಯುಲಸ್ ನಕ್ಷತ್ರಪುಂಜದಲ್ಲಿ ಇದು ಕಂಡುಬಂದಿದೆ. ಸೂರ್ಯನಿಗಿಂತ ಸುಮಾರು 200 ಡಿಗ್ರಿಯಷ್ಟು ಶಾಖ ಮತ್ತು 1.7 ಪಟ್ಟು ದೊಡ್ಡದಾದ ವಾಸ್ಪ್ -103 ಎಂಬ ನಕ್ಷತ್ರದ ಕಕ್ಷೆಯಲ್ಲಿ ಈ ಎಕ್ಸೋಪ್ಲಾನೆಟ್ ಸುತ್ತುತ್ತಿದೆ.
ಗ್ರಹದ ಆಕಾರ ವಿಚಿತ್ರವೇಕೆ? :
ಈಗ ಪತ್ತೆಯಾಗಿರುವ ಗ್ರಹದ ಆಕಾರವು ವಿಚಿತ್ರ ಅಥವಾ ಸೊಟ್ಟಗಾಗಿರಲು ಬೃಹತ್ ಪ್ರಮಾಣದ ತರಂಗಗಳ ಶಕ್ತಿಯೇ ಕಾರಣ. ಭೂಮಿಯಲ್ಲೂ ಇದೇ ರೀತಿಯ ಅಲೆಗಳನ್ನು ನಾವು ಸಮುದ್ರದಲ್ಲಿ ಕಾಣಬಹುದು. ಆದರೆ, ಭೂಮಿ ಮತ್ತು ಚಂದ್ರನ ನಡುವಿನ ದೂರ ಬಹಳಷ್ಟಿರುವ ಕಾರಣ ಭೂಮಿಯ ಆಕಾರವು ವಿರೂಪಗೊಂಡಿಲ್ಲ. ಆದರೆ, ಈ ಹೊಸ ಗ್ರಹದ ಗಾತ್ರವು ಗುರುಗ್ರಹಕ್ಕಿಂತ ದುಪ್ಪಟ್ಟಿದೆ. ಮಾತ್ರವಲ್ಲ, ಈ ಗ್ರಹವು ಕೇವಲ ಒಂದೇ ದಿನದಲ್ಲಿ ನಕ್ಷತ್ರದ ಸುತ್ತ ಸುತ್ತುತ್ತದೆ. ಗ್ರಹವು ನಕ್ಷತ್ರಕ್ಕೆ ಅಷ್ಟೊಂದು ಸಮೀಪದಲ್ಲಿರುವ ಕಾರಣ ಭಾರೀ ಪ್ರಮಾಣದ ಅಲೆಗಳು ಸೃಷ್ಟಿಯಾಗಿ, ಗ್ರಹದ ಆಕಾರವು ವಿರೂಪಗೊಂಡಿರಬಹುದು ಎನ್ನುವುದು ವಿಜ್ಞಾನಿಗಳ ಅಂದಾಜು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಇಸ್ರೇಲ್ ಕಾರ್ಯಾಚರಣೆ: ಕ್ಷಿಪಣಿ ಹಾರಿಸಿ ಉಗ್ರ ಕಮಾಂಡರ್ ಹತ್ಯೆ
ಆರ್ಯ ವಾಲ್ವೇಕರ್ ಮುಡಿಗೆ ಮಿಸ್ ಇಂಡಿಯಾ ಯುಎಸ್ಎ-2022 ಕಿರೀಟ
ಹುಲಿ ಮರಿಗಳಿಗೆ ಹಾಲು ಕುಡಿಸಿದ ಒರಾಂಗುಟಾನ್! -ವಿಡಿಯೋ ವೈರಲ್
ಪಾಕ್: ಜನಪ್ರತಿನಿಧಿಯನ್ನು ಗುರಿಯಾಗಿರಿಸಿ ಗುಂಡಿನ ದಾಳಿ; ಪೊಲೀಸರು ಸೇರಿ ನಾಲ್ವರು ಬಲಿ
ಗಂಡನ ಕಿರುಕುಳ ತಾಳಲಾರದೆ ಅಮೆರಿಕದಲ್ಲಿ ಆತ್ಮಹತ್ಯೆಗೆ ಶರಣಾದ ಭಾರತೀಯ ಮಹಿಳೆ