ಕೊರೊನಾ ವೈರಸ್ ತಾಯಿಯಿಂದ ಮಗುವಿಗೆ ಹರಡಲ್ಲ
Team Udayavani, Mar 17, 2020, 8:16 AM IST
ಹೆರಿಗೆ ವೇಳೆ ತಾಯಿಗೆ ಕೊರೊನಾ ವೈರಸ್ ಇದ್ದರೆ, ಅದು ಹುಟ್ಟುವ ಮಗುವಿಗೆ ಹರಡುವುದಿಲ್ಲ ಎಂದು ಅಧ್ಯಯನವೊಂದು ಹೇಳಿದೆ.
ಚೀನದಲ್ಲಿ ಕೋವಿಡ್-19 ಸೋಂಕು ಇದ್ದೂ ಮಕ್ಕಳಿಗೆ ಜನ್ಮನೀಡಿದ ತಾಯಿಯರಿಂದ, ಶಿಶುಗಳಿಗೆ ವೈರಸ್ ಹಬ್ಬಿಲ್ಲ ಎಂದು ಹುವಾಜಾಂಗ್ ಯುನಿವರ್ಸಿಟಿ ಆಫ್ ಸೈನ್ಸ್ ಆ್ಯಂಡ್ ಟೆಕ್ನಾಲಜಿಯ ವರದಿ ತಿಳಿಸಿದೆ. ವುಹಾನ್‌ನ ಆಸ್ಪತ್ರೆಯಲ್ಲಿನ ಸೋಂಕಿತ ಮಹಿಳೆಯರನ್ನು ಈ ಅಧ್ಯಯನಕ್ಕೆ ಬಳಸಲಾಗಿತ್ತು.