President Droupadi Murmu ಅವರಿಗೆ ಟಿಮೋರ್-ಲೆಸ್ಟೆ ದೇಶದ ಅತ್ಯುನ್ನತ ಗೌರವ
''ಪ್ರಪಂಚದ ಪ್ರಗತಿಗೆ ಮಹಿಳೆಯರ ಪ್ರಗತಿ ಅಗತ್ಯ'' ಎಂದ ದ್ರೌಪದಿ ಮುರ್ಮು
Team Udayavani, Aug 10, 2024, 6:26 PM IST
ಡಿಲಿ: ಆಗ್ನೇಯ ಏಷ್ಯಾದ ರಾಷ್ಟ್ರ ಟಿಮೋರ್-ಲೆಸ್ಟೆ ಯ(Democratic Republic of Timor-Leste) ಅತ್ಯುನ್ನತ ಗೌರವ ಪ್ರಶಸ್ತಿ(‘Grand-Collar of the Order’) ಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಶನಿವಾರ (ಆಗಸ್ಟ್ 10) ಭಾಜನರಾಗಿದ್ದಾರೆ.
ಟಿಮೋರ್-ಲೆಸ್ಟೆ ಅಧ್ಯಕ್ಷ ಜೋಸ್ ರಾಮೋಸ್ ಹೊರ್ಟಾ ಅವರು ಅತ್ಯುನ್ನತ ಪ್ರಶಸ್ತಿ ನೀಡಿ ಗೌರವಿಸಿದರು. ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ದ್ರೌಪದಿ ಮುರ್ಮು ”ಈ ವಿಶೇಷ ಸಂವಾದಾತ್ಮಕ ಅಧಿವೇಶನಕ್ಕಾಗಿ ಅಧ್ಯಕ್ಷ ಹೋರ್ಟಾ ಅವರಿಗೆ ನಾನು ಕೃತಜ್ಞಳಾಗಿದ್ದೇನೆ. ಇದು ಭಾರತ ಮತ್ತು ಭಾರತೀಯರ ಬಗ್ಗೆ ಅವರ ಪ್ರೀತಿ ಮತ್ತು ಗೌರವದ ಅಭಿವ್ಯಕ್ತಿಯಾಗಿದೆ. ‘ಗ್ರ್ಯಾಂಡ್ ಕೊಲಾರ್ ಆಫ್ ದಿ ಆರ್ಡರ್’ ಪ್ರಶಸ್ತಿ ನನಗೆ ನೀಡಿರುವುದು ಇದೇ ಭಾವನೆಯ ಪುರಾವೆ. ಟಿಮೋರ್-ಲೆಸ್ಟೆಯೊಂದಿಗೆ ರಾಜತಾಂತ್ರಿಕ ಸಂಬಂಧಗಳನ್ನು ಸ್ಥಾಪಿಸಿದ ಮೊದಲ ದೇಶಗಳಲ್ಲಿ ಭಾರತವೂ ಒಂದಾಗಿದೆ. ಈ ಸಂಬಂಧಗಳು ಪ್ರಜಾಪ್ರಭುತ್ವದ ಹಂಚಿಕೆಯ ತತ್ವಗಳನ್ನು ಆಧರಿಸಿವೆ.ನಾವು ಶೀಘ್ರದಲ್ಲೇ ಟಿಮೋರ್-ಲೆಸ್ಟೆಯಲ್ಲಿ ರಾಯಭಾರ ಕಚೇರಿಯನ್ನು ತೆರೆಯುತ್ತೇವೆ. ಇದು ಭಾರತೀಯ ನಾಗರಿಕರು ಮತ್ತು ಭಾರತೀಯ ಬೇರುಗಳನ್ನು ಹೊಂದಿರುವ ಜನರಿಗೆ ಉತ್ತಮ ಕಾನ್ಸುಲರ್ ಸೇವೆಗಳನ್ನು ಖಚಿತಪಡಿಸುತ್ತದೆ’ ಎಂದರು.
“ಜಗತ್ತಿನಲ್ಲಿ ಸುಮಾರು 50% ಮಹಿಳೆಯರಿದ್ದಾರೆ. ಕುಟುಂಬ, ಸಮಾಜ ರಾಷ್ಟ್ರವಾಗಲಿ ಪ್ರಪಂಚವಾಗಲಿ ಪ್ರಗತಿಗೆ ಮಹಿಳೆಯರ ಪ್ರಗತಿ ಅಗತ್ಯ.ಪ್ರತಿಯೊಬ್ಬರ ಪರಿಸ್ಥಿತಿಯು ನಿಜವಾಗಿಯೂ ವಿಭಿನ್ನವಾಗಿದ್ದು ಸಮಾಜ ಈಗ ಆಧುನಿಕವಾಗಿದೆ. ಒಂದು ಕಾಲದಲ್ಲಿ ಮಹಿಳೆಯರು ತಮ್ಮ ಮನೆಯೊಳಗೆ ಇರುತ್ತಿದ್ದರು, ಆದರೆ ಈಗ ಎಲ್ಲರೂ ಅರ್ಥಮಾಡಿಕೊಂಡಿದ್ದು ಮುಂದೆ ಸಾಗಲು ಮತ್ತು ತಮ್ಮ ಕುಟುಂಬ, ಸಮಾಜ ಮತ್ತು ದೇಶವನ್ನು ಮುನ್ನಡೆಸಲು ಬಯಸುತ್ತಾರೆ” ಎಂದರು.
#WATCH | Dili, Timor-Leste: Speaking to Timor-Leste President José Ramos-Horta, President of India Droupadi Murmu says, “There are around 50% women in the world. For the progress of the family, society nation or the world, progress of the women is necessary. Everyone’s situation… pic.twitter.com/kui8l8SGWC
— ANI (@ANI) August 10, 2024
”ಭಾರತದಲ್ಲಿ ಮಹಿಳೆಯರನ್ನು ಆರ್ಥಿಕವಾಗಿ ಸ್ವಾವಲಂಬಿಗಳನ್ನಾಗಿ ಮಾಡಲು ಸ್ವಸಹಾಯ ಗುಂಪುಗಳನ್ನು ಮಾಡಿದ್ದೇವೆ.ನಾನು ಅನೇಕ ಸ್ಥಳಗಳಿಗೆ ಹೋಗಿ ಉದ್ಯಮಿಗಳು, ರಾಜಕಾರಣಿಗಳು ಮತ್ತು ಅಧಿಕಾರಿಗಳು ಮಹಿಳೆಯರನ್ನು ನೋಡುತ್ತೇನೆ. ಭಾರತದಲ್ಲಿ ಮಹಿಳೆಯರನ್ನು ‘ಮಾತೃ ಶಕ್ತಿ’ ಎಂದು ಪರಿಗಣಿಸಲಾಗುತ್ತದೆ. ಮಹಿಳೆಯರಿಗೆ ಸಾಕಷ್ಟು ಶಕ್ತಿಯಿದೆ ಮತ್ತು ನಾವು ಆ ಶಕ್ತಿಯನ್ನು ಹೊರತೆಗೆದು ಜಗತ್ತಿಗೆ ತೋರಿಸಬೇಕು”ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Legal Bid: ಯುರೋಪಿನಲ್ಲಿ 13,000 ಕೋಟಿ ರೂ. ಕಾನೂನು ಸಮರ ಗೆದ್ದ ಗೂಗಲ್!
Explode in Lebanon: ಪೇಜರ್ ಬಳಿಕ ವಾಕಿಟಾಕಿ ಸ್ಫೋಟ: 14 ಮಂದಿ ಸಾವು
Israel: ಹೆಜ್ಬುಲ್ಲಾ ಬಳಸಿದ್ದ ಪೇಜರ್ಸ್ ಒಳಗೆ ಸ್ಫೋಟಕ ಅಳವಡಿಸಿದ್ದ ಇಸ್ರೇಲ್ ನ ಮೊಸ್ಸಾದ್!
Diddy ;ಸೆ*ಕ್ಸ್ ದಂಧೆ ಆರೋಪ: ಅಮೆರಿಕದ ಖ್ಯಾತ ಹಿಪ್-ಹಾಪ್ ಸ್ಟಾರ್ ಬಂಧನ
PM Modi ಅವರನ್ನು ಭೇಟಿಯಾಗಿ ಮಾತುಕತೆ ನಡೆಸುವುದಾಗಿ ಘೋಷಿಸಿದ ಟ್ರಂಪ್
MUST WATCH
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು
ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!
ಹೊಸ ಸೇರ್ಪಡೆ
ಖಾಯಂ ಪಿಡಿಓ, ಕಾರ್ಯದರ್ಶಿ ನೇಮಕಕ್ಕೆ ಒತ್ತಾಯ;ಗ್ರಾ.ಪಂ.ಸಾಮಾನ್ಯ ಸಭೆ ಬಹಿಷ್ಕರಿಸಿ ಪ್ರತಿಭಟನೆ
2A Reservation; ವಕೀಲರ ಮೂಲಕ ಸರ್ಕಾರ ಹಕ್ಕೊತ್ತಾಯ ಮಾಡುತ್ತೇವೆ: ಪಂಚಮಸಾಲಿ ಶ್ರೀ
Kanguva Movie: ಸೂರ್ಯ ಪ್ಯಾನ್ ಇಂಡಿಯಾ ʼಕಂಗುವʼ ಹೊಸ ರಿಲೀಸ್ ಡೇಟ್ ಔಟ್
Dandeli: ನಗರದಲ್ಲಿ ಸರಣಿ ಕಳ್ಳತನ… ಲಕ್ಷಾಂತರ ರೂ. ಮೌಲ್ಯದ ನಗನಗದು ಕಳವು, ಪೊಲೀಸರ ಭೇಟಿ
Shimoga: ವಿವಾದಿತ ಫ್ಲೆಕ್ಸ್ ಹಾಗು ಖಡ್ಗ ತೆರವು ಮಾಡಿದ ಪೊಲೀಸರು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.