ಅಧಿಕೃತವಾಗಿ ಅರಮನೆ ಜೀವನಕ್ಕೆ ಗುಡ್ ಬೈ ಹೇಳಿದ ಪ್ರಿನ್ಸ್ ಹ್ಯಾರಿ ಮತ್ತು ಮೇಘನ್

Team Udayavani, Jan 19, 2020, 3:34 PM IST

ಲಂಡನ್: ಪ್ರತಿಷ್ಠಿತ ಬ್ರಿಟನ್ ರಾಜಮನೆತನದ ಯುವರಾಜ ಪ್ರಿನ್ಸ್ ಹ್ಯಾರಿ ಮತ್ತು ಪತ್ನಿ ಮೇಘನ್ ಅರಮನೆಯ ಜವಾಬ್ದಾರಿಗಳನ್ನು ತೊರೆದಿದ್ದಾರೆ.

ಪ್ರಿನ್ಸ್ ಹ್ಯಾರಿ ಮತ್ತು ಮೇಘನ್ ಇನ್ನು ಮುಂದೆ ಅವರ ಕೆಲಸಗಳಿಗೆ ಸಾರ್ವಜನಿಕ ಹಣವನ್ನು ಬಳಸುವುದಿಲ್ಲ ಎಂದು ಬಂಕಿಂಗ್ ಹ್ಯಾಮ್ ಅರಮನೆಯ ಅಧಿಕೃತ ಘೋಷಣೆ ತಿಳಿಸಿದೆ. ಅದಲ್ಲದೆ ಮುಂದಿನ ವಸಂತ ಋತುವಿನಿಂದಲೇ ಅರಮನೆಯಲ್ಲಿ ಹೊಸ ವ್ಯವಸ್ಥೆಗಳು ಜಾರಿಯಾಗಲಿದೆ ಎಂದು ಘೋಷಿಸಿದೆ.

ಹತ್ತು ದಿನಗಳ ಹಿಂದಷ್ಟೇ ಪ್ರಿನ್ಸ್ ಹ್ಯಾರಿ ದಂಪತಿ ತಾವು ಅರಮನೆ ಐಷಾರಾಮಿ ಜೀವನವನ್ನು ತೊರೆಯುವುದಾಗಿ ಘೋಷಿಸಿದ್ದರು. ರಾಜಮನೆತನದ ಗೌರವಗಳಾದ ರಾಜ ಮತ್ತು ರಾಣಿ ಪದವಿ ತಮಗೆ ಬೇಡ ಎಂದು ಹ್ಯಾರಿ ಮತ್ತು ಮೇಘನ್ ಹೇಳಿದ್ದರು.

ಹ್ಯಾರಿ ಮತ್ತು ಮೇಘನ್ ಅರಮನೆ ಜವಾಬ್ದಾರಿ ತ್ಯಜಿಸುವ ಬಗ್ಗೆ ಮಾತನಾಡಿರುವ ರಾಣಿ ಎಲಿಜಬೆತ್, ಹ್ಯಾರಿ ಮತ್ತು ಮೆಘನ್ ಅವರು ನನ್ನ ಕುಟುಂಬದಲ್ಲಿ ಅತೀ ಹೆಚ್ಚು ಪ್ರೀತಿಸುವ ಸದಸ್ಯರಾಗಿದ್ದರು. ದೇಶದಲ್ಲಿ ಅದುವರೆಗೆ ಮಾಡಿದ ಉತ್ತಮ ಕೆಲಸಗಳಿಗೆ ಅವರಿಗೆ ಧನ್ಯವಾದ ಹೇಳುತ್ತೇನೆ. ಅವರು ಎಂದಿಗೂ ರಾಜಮನೆತನದ ವೈಭೋಗದಲ್ಲಿ ಇರಬೇಕೆಂದು ನನ್ನ ಇಚ್ಛೆಯಾಗಿತ್ತು ಎಂದಿದ್ದಾರೆ.

ಹ್ಯಾರಿ ಮತ್ತು ಮೇಘನ್ ಮುಂದೆ ಇಂಗ್ಲೆಂಡ್ ನ ಫ್ರಾಗ್ ಮೋರ್ ಕಾಟೇಜ್ ನಲ್ಲಿ ಉಳಿಯಲಿದ್ದಾರೆ.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ