2ನೇ ಎಲಿಜಬೆತ್ ಮೊಮ್ಮಗಳ ರಹಸ್ಯ ವಿವಾಹ
Team Udayavani, Jul 18, 2020, 10:05 AM IST
ಲಂಡನ್: ಇಂಗ್ಲೆಂಡ್ನ ರಾಣಿ 2ನೇ ಎಲಿಜಬೆತ್ನ ಮೊಮ್ಮಗಳು, ರಾಜಕುಮಾರಿ ಬಿಯಾಟ್ರಿಸ್ ಶುಕ್ರವಾರ ವಿಂಡ್ಸರ್ನಲ್ಲಿ ನಡೆದ ರಹಸ್ಯ ಸಮಾರಂಭದಲ್ಲಿ ವಿವಾಹವಾಗಿದ್ದಾರೆ ಎಂದು ಬ್ರಿಟಿಷ್ ಮಾಧ್ಯಮಗಳು ವರದಿ ಮಾಡಿವೆ. ಪ್ರಿಯಕರ, ರಿಯಲ್ ಎಸ್ಟೇಟ್ ಉದ್ಯಮಿ ಎಡೊರ್ಡೊ ಮ್ಯಾಪೆಲ್ಲಿ ಮಾಝಿ ಅವರನ್ನು ಬಿಯಾಟ್ರಿಸ್ ಕೈಹಿಡಿದಿದ್ದಾರೆ. ರಾಜ ಮನೆತನದ ಹಿರಿಯರು ಸೇರಿದಂತೆ 20 ಗಣ್ಯ ವ್ಯಕ್ತಿಗಳ ಸಮ್ಮುಖದಲ್ಲಿ ಈ ಸರಳ ವಿವಾಹ ಏರ್ಪಟ್ಟಿದೆ. ಮೇ ತಿಂಗಳಿನಲ್ಲಿ 150 ಅತಿಥಿಗಳ ಸಮ್ಮುಖದಲ್ಲಿ ಲಂಡನ್ನ ಸೇಂಟ್ ಜೇಮ್ಸ್ ಪ್ಯಾಲೇಸ್ನ ಚಾಪೆಲ್ ರಾಯಲ್ನಲ್ಲಿ ಬಿಯಾಟ್ರಿಸ್ ಅದ್ಧೂರಿ ವಿವಾಹಕ್ಕೆ ಸಾಕ್ಷಿಯಾಗಬೇಕಿತ್ತು. ಆದರೆ, ಲಾಕ್ಡೌನ್ ಕಾರಣದಿಂದಾಗಿ ಮದುವೆ ಮುಂದೂಡಲ್ಪಟ್ಟಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Jamie Dimon: ಮೋದಿ ಆರ್ಥಿಕ ನೀತಿ ಅದ್ಭುತ, ಅಮೆರಿಕದಲ್ಲೂ ಜಾರಿ ಮಾಡಿ: ಜೇಮಿ
Sunita Williams: ಮೇ 6ರಂದು 3ನೇ ಬಾರಿಗೆ ಸುನಿತಾ ವಿಲಿಯಮ್ಸ್ ಗಗನ ಯಾತ್ರೆ
Thailandನಲ್ಲಿ ಗುಜರಿ ಮಾಫಿಯಾದ ಕಿಂಗ್ ಪಿನ್ ರವಿ ಕಾನಾ, ಪ್ರಿಯತಮೆ ಕಾಜಲ್ ಜಾ ಬಂಧನ
ತಂಗಿಯ ಸಮಾಧಿ ಸ್ಥಳಕ್ಕೆ ಭೇಟಿ ನೀಡುವುದನ್ನು ವ್ಲಾಗ್ ವಿಡಿಯೋ ಮಾಡಿದ ಯೂಟ್ಯೂಬರ್: ಆಕ್ರೋಶ
Kyrgyzstan; ಹೆಪ್ಪುಗಟ್ಟಿದ ಜಲಪಾತದಲ್ಲಿ ಸಿಲುಕಿ ಆಂಧ್ರದ ವಿದ್ಯಾರ್ಥಿ ಸಾವು