ಇಂಗ್ಲೆಂಡ್ ಸಚಿವೆ ಪ್ರೀತಿ ಪಟೇಲ್ ರಾಜೀನಾಮೆ
Team Udayavani, Nov 10, 2017, 11:12 AM IST
ಲಂಡನ್: ಖಾಸಗಿ ಭೇಟಿಯಲ್ಲಿ ಇಸ್ರೇಲ್ ಮುಖಂಡರನ್ನು ಭೇಟಿ ಮಾಡಿದ ಆರೋಪಕ್ಕೆ ಒಳಗಾಗಿರುವ ಭಾರತೀಯ ಮೂಲದ ಇಂಗ್ಲೆಂಡ್ ಸಚಿವೆ ಪ್ರೀತಿ ಪಟೇಲ್ ರಾಜೀನಾಮೆ ನೀಡಿದ್ದಾರೆ. ಅಂತಾರಾಷ್ಟ್ರೀಯ ಅಭಿವೃದ್ಧಿ ಸಚಿವೆ ಆಗಿದ್ದ ಪಟೇಲ್, ವಿದೇಶ ಪ್ರವಾಸವನ್ನು ಮೊಟಕುಗೊಳಿಸಿ ಬುಧವಾರ ಲಂಡನ್ಗೆ ಆಗಮಿಸಿದ್ದರು.
ನಂತರ ಪ್ರಧಾನಿ ಥೆರೇಸಾ ಮೇಗೆ ರಾಜೀನಾಮೆ ಪತ್ರ ಸಲ್ಲಿಸಿದ್ದಾರೆ. ಇಸ್ರೇಲ್ ಪ್ರಧಾನಿ ನೇತನ್ಯಾಹು ಸೇರಿದಂತೆ ಹತ್ತಕ್ಕೂ ಹೆಚ್ಚು ಮುಖಂಡರನ್ನು ಆಗಸ್ಟ್ ನಲ್ಲಿ ಪ್ರೀತಿ ಅನಧಿಕೃತವಾಗಿ ಭೇಟಿ ಮಾಡಿದ್ದರು. ಈ ವೇಳೆ ವಿದೇಶಾಂಗ ಇಲಾಖೆ, ರಾಯಭಾರ ಕಚೇರಿಗಳ ಅಧಿಕಾರಿಗಳನ್ನೂ ದೂರವಿಟ್ಟಿದ್ದರು. ಇದು ತೀವ್ರ ವಿವಾದ ಸೃಷ್ಟಿಸಿತ್ತು.