Udayavni Special

ಅಮೆರಿಕದ ಹಲವೆಡೆ ನಿಷೇಧಾಜ್ಞೆ


Team Udayavani, Jun 1, 2020, 11:49 AM IST

ಅಮೆರಿಕದ ಹಲವೆಡೆ ನಿಷೇಧಾಜ್ಞೆ

ವಾಷಿಂಗ್ಟನ್‌ನಲ್ಲಿ ಶ್ವೇತಭವನದ ಸಮೀಪ ಪ್ರತಿಭಟನೆ ನಡೆಸಲಾಯಿತು.

ವಾಷಿಂಗ್ಟನ್‌/ಮಿನ್ನಿಯಾಪೊಲೀಸ್‌: ಈಗಾಗಲೇ ಕೋವಿಡ್ ಹೊಡೆತಕ್ಕೆ ತತ್ತರಿಸಿಹೋಗಿರುವ ಅಮೆರಿಕದಲ್ಲೀಗ ಜನಾಂಗೀಯ ದ್ವೇಷದ ಬೆಂಕಿ ಹೊತ್ತಿ ಉರಿಯುತ್ತಿದೆ. ಕಪ್ಪು ವರ್ಣೀಯ ಸಮು ದಾಯದ ವ್ಯಕ್ತಿ ಸಾವಿಗೆ ನ್ಯಾಯ ಕೋರಿ ನಡೆಯುತ್ತಿದ್ದ ಶಾಂತಿಯುತ ಪ್ರತಿಭಟನೆ, ಪೊಲೀಸರ ವರ್ತನೆಯಿಂದಾಗಿ ಅಹಿಂಸೆಯ ರೂಪ ಪಡೆದಿದೆ.

ಪ್ರತಿಭಟನೆಯು ಮಿನ್ನಿಯಾಪೊಲೀಸ್‌ನಿಂದ ಆಚೆಗಿನ ಇತರ ಪ್ರಮುಖ ನಗರಗಳಿಗೂ ವ್ಯಾಪಿಸಿದೆ. ಪರಿಣಾಮ, ಲಾಸ್‌ ಏಂಜಲೀಸ್‌, ಷಿಕಾಗೊ ಮತ್ತು ಅಟ್ಲಾಂಟ ಸೇರಿ ಅಮೆರಿಕದ 24ಕ್ಕೂ ಹೆಚ್ಚು ಪ್ರಮುಖ ನಗರಗಳಲ್ಲಿ ನಿಷೇಧಾಜ್ಞೆ ಜಾರಿಗೊಳಿಸಿದ್ದು, ಸಾರ್ವಜನಿಕರು ಮನೆಯಿಂದ ಹೊರಗೆ ಬರದಂತೆ ಪೊಲೀಸರು ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ. ಅಮೆರಿಕದ ಬಹುತೇಕ ರಾಜ್ಯಗಳಲ್ಲಿ ನಾಗರಿಕ ಅಶಾಂತಿಯನ್ನು ನಿಯಂತ್ರಿ‌ಲು ರಾಷ್ಟ್ರೀಯ ಕಾವಲು ಪಡೆ (ನ್ಯಾಷನಲ್‌ ಗಾರ್ಡ್‌) ಸೈನಿಕರ ನೆರವು ಪಡೆಯಲಾಗಿದೆ.

ಕಳೆದ ಸೋಮವಾರ ಕಪ್ಪು ವರ್ಣೀಯರು ಪ್ರತಿಭಟನೆ ನಡೆಸುವಾಗ ಜಾರ್ಜ್‌ ಫ್ಲಾಯ್ಡ ಎಂಬಾತನನ್ನು ಪೊಲೀಸರು ಬಂಧಿಸಿದ್ದರು. ಈ ವೇಳೆ ಪೊಲೀಸ್‌ ಅಧಿಕಾರಿಯೊಬ್ಬ ತನ್ನ ಮೊಣಕಾ ಲಿನಿಂದ ಕುತ್ತಿಗೆಯನ್ನು ಬಲವಾಗಿ ಒತ್ತಿದ್ದರಿಂದ ಫ್ಲಾಯ್ಡ ಮೃತಪಟ್ಟಿದ್ದ. ಬಳಿಕ ಪ್ರತಿಭಟನೆ ತೀವ್ರ ಸ್ವರೂಪ ಪಡೆದಿದೆ. ಡೆಟ್ರಾಯಿಟ್‌ನಲ್ಲಿ ಅಪರಿಚಿತ ಹಾರಿಸಿದ ಗುಂಡಿಗೆ ವ್ಯಕ್ತಿಯೊಬ್ಬ ಬಲಿಯಾಗಿದ್ದಾನೆ. ಲಾಸ್‌ ಏಂಜಲೀಸ್‌ನಲ್ಲಿ ಹಿಂಸಾಚಾರ ಹೆಚ್ಚಾಗಿದ್ದರಿಂದ ಪೊಲೀಸರು ರಬ್ಬರ್‌ ಗುಂಡುಗಳನ್ನು ಹಾರಿಸಿ ಪ್ರತಿಭಟನಾಕಾ ರರನ್ನು ಚದುರಿಸಿದ್ದಾರೆ. ಷಿಕಾಗೊ, ನ್ಯೂಯಾರ್ಕ್‌ ನಗರಗಳಲ್ಲೂ ಪ್ರತಿಭಟನಾ ಕಾರರು, ಪೊಲೀಸರ ನಡುವೆ ಚಕಮಕಿ ನಡೆದಿದೆ. ಈ ನಡುವೆ ಫ್ಲಾಯ್ಡ ಸಾವಿಗೆ ಕಾರಣನಾದ ಪೊಲೀಸ್‌ ಅಧಿಕಾರಿ ಡೆರೆಕ್‌ ಚೌವಿನ್‌ ಎಂಬಾತನ್ನು ಬಂಧಿಸಿ, ಕೊಲೆ ಪ್ರಕರಣ ದಾಖಲಿಸಲಾಗಿದೆ.

ಎಚ್ಚರಿಕೆ ನೀಡಿದ ಅಧ್ಯಕ್ಷ ಟ್ರಂಪ್‌
ಪ್ರತಿಭಟನೆ ಮತ್ತು ಹಿಂಸಾಚಾರ ಕುರಿತು ಸರಣಿ ಟ್ವೀಟ್‌ ಮಾಡಿರುವ ಅಧ್ಯಕ್ಷ ಟ್ರಂಪ್‌, ಪ್ರತಿಭಟನಾಕಾರರೇನಾದರೂ ವೈಟ್‌ ಹೌಸ್‌ ಬಳಿ ಬಂದರೆ, ಅವರನ್ನು ಅತ್ಯಂತ ಕ್ರೂರ ಶ್ವಾನಗಳು ಹಾಗೂ ಶಸ್ತ್ರಾಸ್ತ್ರಗಳ ಮೂಲಕ ಸ್ವಾಗತಿಸಲಾಗುವುದು, ಎಂದು ಎಚ್ಚರಿಕೆ ನೀಡಿದ್ದಾರೆ. ನಗರಗಳಲ್ಲಿ ಶಾಂತಿ ಕಾಯ್ದುಕೊಳ್ಳದಿದ್ದರೆ ಮಿಲಿಟರಿ ನಿಯೋಜಿಸುವುದಾಗಿ ತಿಳಿಸಿದ್ದಾರೆ. ಅಲ್ಲದೆ, ಗಲಭೆಗೆ ಎಡ ಪಂಥೀಯರು ಕಾರಣ ಎಂದು ದೂರಿರುವ ಟ್ರಂಪ್‌, ವ್ಯಾಪಕ ಲೂಟಿ ಮತ್ತು ಸಾರ್ವಜನಿಕರ ಆಸ್ತಿಗೆ ಬೆಂಕಿ ಹಚ್ಚುವ ಮೂಲಕ ಗಲಭೆಕೋರರು ಜಾರ್ಜ್‌ ಫ್ಲಾಯ್ಡ ಬಲಿದಾನವನ್ನು ಅವಮಾನಿ ಸುತ್ತಿದ್ದಾರೆ ಎಂದು ಅಭಿಪ್ರಾಯಪಟ್ಟಿದ್ದಾರೆ.

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

48ನೇ ವಸಂತಕ್ಕೆ ಕಾಲಿಟ್ಟ ಕ್ರಿಕೆಟ್ ಅಭಿಮಾನಿಗಳ “ದಾದಾ” ಸೌರವ್ ಗಂಗೂಲಿ

48ನೇ ವಸಂತಕ್ಕೆ ಕಾಲಿಟ್ಟ ಕ್ರಿಕೆಟ್ ಅಭಿಮಾನಿಗಳ “ದಾದಾ” ಸೌರವ್ ಗಂಗೂಲಿ

News-tdy-1

ಕೋವಿಡ್ ನಿಂದ ರಕ್ಷಣೆ ಪಡೆಯಲು ಬಂದಿದೆ ಕೋವಿಡ್ ಕೊಡೆ..! : ವೈರಲ್ ಆಯಿತು ಕೋವಿಡ್ ಕೊಡೆ

covid19-india

ಒಂದೇ ದಿನ 22,752 ಹೊಸ ಪ್ರಕರಣ: ದೇಶದಲ್ಲಿ 7.42 ಲಕ್ಷ ದಾಟಿದ ಸೋಂಕಿತರ ಸಂಖ್ಯೆ

ಪ್ರತಿಮೆ ಆಯ್ತು ಈಗ ಮುಂಬೈನಲ್ಲಿ ಅಂಬೇಡ್ಕರ್ ಮನೆಗೆ ನುಗ್ಗಿ ಹಲವು ವಸ್ತುಗಳ ನಾಶ

ಪ್ರತಿಮೆ ಆಯ್ತು ಈಗ ಮುಂಬೈನಲ್ಲಿ ಡಾ.ಅಂಬೇಡ್ಕರ್ ಮನೆಗೆ ನುಗ್ಗಿ ಹಲವು ವಸ್ತುಗಳ ನಾಶ!

ದ.ಕ ಜಿಲ್ಲೆಯಲ್ಲಿ ಕೋವಿಡ್ ಸೋಂಕಿನ ಅಟ್ಟಹಾಸ : ಒಂದೇ ದಿನ ಮೂವರ ಸಾವು

ದ.ಕ ಜಿಲ್ಲೆಯಲ್ಲಿ ಕೋವಿಡ್-19 ಅಟ್ಟಹಾಸ: ಒಂದೇ ದಿನ ಮೂವರ ಸಾವು

suresh-kumar

ಶಾಲಾ ಕಾಲೇಜು ಪುನರಾರಂಭ: ಸರ್ಕಾರ ಯಾವುದೇ ನಿರ್ಧಾರ ತೆಗೆದುಕೊಂಡಿಲ್ಲ: ಸಚಿವ ಸುರೇಶ್ ಕುಮಾರ್

bhojegwod

ವಿಧಾನ ಪರಿಷತ್ ಸದಸ್ಯ ಎಚ್.ಎಲ್ ಭೋಜೆಗೌಡರಿಗೆ ಕೋವಿಡ್-19 ಸೊಂಕು ದೃಢ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಆನ್‌ಲೈನ್‌ ತರಗತಿ ನಡೆಯುವುದಾದರೆ ದೇಶ ಬಿಡಿ; ವಿದೇಶಿ ವಿದ್ಯಾರ್ಥಿಗಳಿಗೆ ಅಮೆರಿಕ ಆದೇಶ

ಆನ್‌ಲೈನ್‌ ತರಗತಿ ನಡೆಯುವುದಾದರೆ ದೇಶ ಬಿಡಿ; ವಿದೇಶಿ ವಿದ್ಯಾರ್ಥಿಗಳಿಗೆ ಅಮೆರಿಕ ಆದೇಶ

ನೇಪಾಲದಲ್ಲಿ ಚೀನಕ್ಕೆ ಮುಖಭಂಗ; ಆಡಳಿತ ಪಕ್ಷದಲ್ಲಿ ಚೀನ ರಾಯಭಾರಿ ಹಸ್ತಕ್ಷೇಪ; ವ್ಯಾಪಕ ಖಂಡನೆ

ನೇಪಾಲದಲ್ಲಿ ಚೀನಕ್ಕೆ ಮುಖಭಂಗ; ಆಡಳಿತ ಪಕ್ಷದಲ್ಲಿ ಚೀನ ರಾಯಭಾರಿ ಹಸ್ತಕ್ಷೇಪ; ವ್ಯಾಪಕ ಖಂಡನೆ

ಅಧ್ಯಕ್ಷ ಟ್ರಂಪ್‌ ಹೇಳಿಕೆ ಸುಳ್ಳು ಅಮೆರಿಕದ ತಜ್ಞರ ಪ್ರತಿಪಾದನೆ

ಅಧ್ಯಕ್ಷ ಟ್ರಂಪ್‌ ಹೇಳಿಕೆ ಸುಳ್ಳು ಅಮೆರಿಕದ ತಜ್ಞರ ಪ್ರತಿಪಾದನೆ

ಜಾಗತಿಕ ಮಟ್ಟದ ಜವಾಬ್ದಾರಿಯುತ ರಾಷ್ಟ್ರ ಭಾರತ

ಜಾಗತಿಕ ಮಟ್ಟದ ಜವಾಬ್ದಾರಿಯುತ ರಾಷ್ಟ್ರ ಭಾರತ

7 ವರ್ಷದ ಹಿಂದೆಯೇ ವುಹಾನ್‌ ಲ್ಯಾಬ್‌ಗ ವೈರಸ್‌ ಮಾದರಿ ಸಲ್ಲಿಕೆ

7 ವರ್ಷದ ಹಿಂದೆಯೇ ವುಹಾನ್‌ ಲ್ಯಾಬ್‌ಗ ವೈರಸ್‌ ಮಾದರಿ ಸಲ್ಲಿಕೆ

MUST WATCH

udayavani youtube

ಗಾಲ್ವಾನ್ ಕಣಿವೆ: ಚೀನಾದ ಉದ್ಧಟತನಕ್ಕೆ ಏನು ಕಾರಣ? | Udayavani Straight Talk

udayavani youtube

ಮಡಹಾಗಲ ಕಾಯಿ – Spiny gourd ಬೆಳೆದು ಯಶಸ್ವಿಯಾದ ರೈತ | Successful Farmer Vegetable

udayavani youtube

ಮಧ್ಯಕರ್ನಾಟಕದ ಆಶಾಕಿರಣ | SS Hospital Davangere

udayavani youtube

ಮಡಹಾಗಲ ಕಾಯಿ ಬೆಳೆಯುವ ಸೂಕ್ತ ವಿಧಾನ | How to grow Spiny gourd in your Home

udayavani youtube

Uday Innaje : Success story of Sugarcane Farmer | Udayavani


ಹೊಸ ಸೇರ್ಪಡೆ

8-July-11

ಸಾಗರ; ಆರು ಕಡೆ ಸೀಲ್‌ಡೌನ್‌

48ನೇ ವಸಂತಕ್ಕೆ ಕಾಲಿಟ್ಟ ಕ್ರಿಕೆಟ್ ಅಭಿಮಾನಿಗಳ “ದಾದಾ” ಸೌರವ್ ಗಂಗೂಲಿ

48ನೇ ವಸಂತಕ್ಕೆ ಕಾಲಿಟ್ಟ ಕ್ರಿಕೆಟ್ ಅಭಿಮಾನಿಗಳ “ದಾದಾ” ಸೌರವ್ ಗಂಗೂಲಿ

8-July-10

ಮತ್ತೆ 33 ಮಂದಿಗೆ ಕೋವಿಡ್ ದೃಢ

News-tdy-1

ಕೋವಿಡ್ ನಿಂದ ರಕ್ಷಣೆ ಪಡೆಯಲು ಬಂದಿದೆ ಕೋವಿಡ್ ಕೊಡೆ..! : ವೈರಲ್ ಆಯಿತು ಕೋವಿಡ್ ಕೊಡೆ

8-July-09

ಓರ್ವನಿಗೆ ಕೋವಿಡ್ ಪಾಸಿಟಿವ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.