ಲಂಕೆಯಲ್ಲಿ ಬುರ್ಖಾ ನಿಷೇಧಕ್ಕೆ ಪ್ರಸ್ತಾವ

Team Udayavani, Apr 25, 2019, 6:00 AM IST

ಕೊಲೊಂಬೋ: ಕಳೆದ ರವಿವಾರ ನಡೆದ ಆತ್ಮಾಹುತಿ ದಾಳಿಯಲ್ಲಿ ಮಹಿಳಾ ಬಾಂಬರ್‌ ಇರುವ ಬಗ್ಗೆ ಖಚಿತ ಮಾಹಿತಿ ಸಿಗುತ್ತಿದ್ದಂತೆಯೇ ದ್ವೀಪ ರಾಷ್ಟ್ರದ ಕೆಲ ಸಂಸದರು ಬುರ್ಖಾ ನಿಷೇಧಕ್ಕೆ ಸಲಹೆ ಮಾಡಿದ್ದಾರೆ. ಯುಎನ್‌ಪಿ ಪಕ್ಷದ ನಾಯಕ ಆಶು ಮಾರಸಿಂಘೆ ಅವರು ಈ ಬಗ್ಗೆ ಫೇಸ್‌ಬುಕ್‌ನಲ್ಲಿ ಈ ಬಗ್ಗೆ ಮಂಗಳವಾರ ಬರೆದು ಕೊಂಡಿ ದ್ದಾರೆ. ಅದರ ಪ್ರಕಾರ ಬುರ್ಖಾ ಎನ್ನುವುದು ಮುಸ್ಲಿಂ ಮಹಿಳೆಯರ ಸಾಂಪ್ರದಾ ಯಿಕ ವಸ್ತ್ರ ಅಲ್ಲ. ಉಗ್ರ ಕೃತ್ಯ ನಡೆಸುವ ಪುರುಷರು ತಮ್ಮ ಗುರುತು ಮುಚ್ಚಿ ಕೊಳ್ಳಲು ಅದನ್ನು ಬಳಕೆ ಮಾಡಿಕೊಂಡಿರುವ ಬಗ್ಗೆ ದೃಷ್ಟಾಂತ ಇದೆ ಎಂದು ಹೇಳಿದ್ದಾರೆ. ದೇಶದ ಕೆಲವು ಭಾಗಗಳಿಗೆ ಮುಸ್ಲಿಂ ಸಮುದಾಯದ ಮಹಿಳೆಯರು ಪ್ರವೇಶಿ ಸುವಾಗ ಬುರ್ಖಾ ತೆಗೆಯಬೇಕು ಎಂಬ ಸೂಚನೆಯನ್ನು ನೀಡ ಲಾಗಿತ್ತು ಎಂದು ಅಂಶು ಮಾರಸಿಂಘೆ ಹೇಳಿದ್ದಾರೆ. ಜತೆಗೆ ದ್ವೀಪ ರಾಷ್ಟ್ರದಲ್ಲಿರುವ ಸಮುದಾಯದ ಮುಖಂಡರು ಅದು ಸಾಂಪ್ರದಾಯಿಕ ವಸ್ತ್ರ ಅಲ್ಲ ಎಂದು ಹೇಳಿಕೊಂಡಿದ್ದಾರೆ.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ