
ಚೀನದಲ್ಲಿ ಭುಗಿಲೆದ್ದ ಪ್ರತಿಭಟನೆಗಳು; ಕ್ಸಿ ಜಿನ್‌ಪಿಂಗ್ ವಿರುದ್ಧ ಘೋಷಣೆ !
ಕೋವಿಡ್ ಸಂಕಷ್ಟ; ಕ್ಸಿ ಜಿನ್‌ಪಿಂಗ್ ಕೆಳಗಿಳಿ... ಕಮ್ಯುನಿಸ್ಟ್ ಪಕ್ಷ ಕೆಳಗಿಳಿಯಲಿ....
Team Udayavani, Nov 27, 2022, 7:19 PM IST

ಬೀಜಿಂಗ್ : ಕಟ್ಟುನಿಟ್ಟಾದ ಕೋವಿಡ್ ಲಾಕ್‌ಡೌನ್‌ಗಳನ್ನು ವಿರೋಧಿಸಿ ಸಾರ್ವಜನಿಕ ಪ್ರತಿಭಟನೆಗಳು ಭಾನುವಾರ ರಾಜಕೀಯ ಸ್ವರೂಪ ಪಡೆದುಕೊಂಡಿದ್ದು, ಪ್ರತಿಭಟನಾಕಾರರು ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಮತ್ತು ಆಡಳಿತಾರೂಢ ಕಮ್ಯುನಿಸ್ಟ್ ಪಕ್ಷದ ವಿರುದ್ಧ ಘೋಷಣೆಗಳನ್ನು ಕೂಗಿದ್ದಾರೆ.
ಪ್ರತಿಭಟನೆಗಳು ರಾಜಧಾನಿ ಬೀಜಿಂಗ್ ಮತ್ತು ನಾನ್‌ಜಿಂಗ್‌ನ ವಿಶ್ವವಿದ್ಯಾಲಯ ಕ್ಯಾಂಪಸ್‌ಗಳಲ್ಲಿ ತೀವ್ರವಾಗಿದ್ದು,ಈ ವೇಳೆ ಸರಕಾರದ ವಿರೋಧಿ, ಅಧ್ಯಕ್ಷರ ವಿರೋಧಿ ಘೋಷಣೆಗಳನ್ನು ಮೊಳಗಿಸಲಾಗಿದೆ.
ಕ್ಸಿನ್‌ಜಿಯಾಂಗ್ ಪ್ರಾಂತೀಯ ರಾಜಧಾನಿ ಉರುಮ್ಕಿಯ ಹೆಸರನ್ನು ಇಡಲಾಗಿರುವ ವುಲುಮುಕಿ ರಸ್ತೆಯಲ್ಲಿ ಶನಿವಾರ ರಾತ್ರಿ ಸಾವಿರಾರು ಪ್ರತಿಭಟನಾಕಾರರು ಸೇರಿದ್ದು, ಶಾಂಘೈ ಪೊಲೀಸರ ಭಾರೀ ಉಪಸ್ಥಿತಿಯ ಹೊರತಾಗಿಯೂ ಭಾನುವಾರ ಹೊಸ ಪ್ರತಿಭಟಗಳಿಗೆ ಸಾಕ್ಷಿಯಾಯಿತು.
ಬೆಳಗ್ಗೆ ಆರಂಭವಾದ ಪ್ರತಿಭಟನೆಗಳು ಮಧ್ಯಾಹ್ನದ ವೇಳೆಗೆ ಸಾವಿರಾರು ಜನರು ಭಾಗವಹಿಸುವುದರೊಂದಿಗೆ ತೀವ್ರಗೊಂಡವು ಎಂದು ಪ್ರತಿಭಟನಾ ಸ್ಥಳದಲ್ಲಿ ಹಾಜರಿದ್ದ ಫೈನಾನ್ಷಿಯಲ್ ಟೈಮ್ಸ್ ವರದಿಗಾರ ಥಾಮಸ್ ಹೇಲ್ ಬಿಬಿಸಿಗೆ ತಿಳಿಸಿದ್ದಾರೆ.
ಶಾಂಘೈನಲ್ಲಿನ ಪ್ರತಿಭಟನೆಗಳ ಕುರಿತು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಲಾದ ವಿಡಿಯೋಗಳ ಪ್ರಕಾರ, ಜನರು ಬಹಿರಂಗವಾಗಿ “ಕ್ಸಿ ಜಿನ್‌ಪಿಂಗ್ ಕೆಳಗಿಳಿ ಮತ್ತು ಕಮ್ಯುನಿಸ್ಟ್ ಪಕ್ಷ, ಕೆಳಗಿಳಿಯಲಿ ಎಂದು ಘೋಷಣೆಗಳನ್ನು ಕೂಗುತ್ತಿರುವುದು ಕೇಳಿಬಂದಿದೆ ಎಂದು ಬಿಬಿಸಿ ವರದಿ ತಿಳಿಸಿದೆ.
ಕೋವಿಡ್ ನೀತಿಗಳ ರಾಜಕೀಯವು ಆರ್ಥಿಕತೆಯ ನಿಧಾನಗತಿ ಸೇರಿದಂತೆ ವ್ಯಾಪಕ ರಾಜಕೀಯ ಹತಾಶೆಗಳನ್ನು ಪ್ರತಿಬಿಂಬಿಸುವುದರಿಂದ ಪ್ರತಿಭಟನೆಗಳು ಅತ್ಯಂತ ಮಹತ್ವದ್ದಾಗಿವೆ. ಇತರೆಡೆ ಪ್ರತಿಭಟನಾಕಾರರು ಖಾಲಿ ಬಿಳಿ ಬ್ಯಾನರ್‌ಗಳನ್ನು ಹಿಡಿದಿದ್ದರು, ಇತರರು ಮೇಣದಬತ್ತಿಗಳನ್ನು ಬೆಳಗಿಸಿದರು ಮತ್ತು ಉರುಂಕಿಯಲ್ಲಿ ಸಂತ್ರಸ್ತರಿಗೆ ಹೂವುಗಳನ್ನು ಹಾಕಿದರು, ಅಲ್ಲಿ ಗುರುವಾರ ಕೋವಿಡ್ ಲಾಕ್‌ಡೌನ್ ವೇಳೆ ಕಟ್ಟಡವೊಂದರಲ್ಲಿ ಬೆಂಕಿ ಕಾಣಿಸಿಕೊಂಡು 10 ಜನರು ಕೊನೆಯುಸಿರೆಳೆದಿದ್ದರು.
ವೀಕ್ಷಕರು ಹೇಳುವಂತೆ, ಅಭೂತಪೂರ್ವ 3 ನೇ ಬಾರಿ ಐದು ವರ್ಷಗಳ ಕಾಲ 69 ವರ್ಷದ ಕ್ಸಿ ಅವರನ್ನು ಆಯ್ಕೆ ಮಾಡಿದ ಬಳಿಕ ಇತ್ತೀಚಿನ ರಾಜಕೀಯ ಪ್ರತಿಭಟನೆಗಳು ಬೀಜಿಂಗ್‌ನಲ್ಲಿ ಕಳೆದ ತಿಂಗಳು ಬ್ಯಾನರ್ ಪ್ರತಿಭಟನೆಯ ಮುಂದುವರಿಕೆಯಾಗಿ ಕಂಡುಬಂದಿದೆ. ಮೂರನೇ ಅವಧಿಯ ಅಧಿಕಾರಕ್ಕೆ ಕೇವಲ ಒಂದು ತಿಂಗಳಿನಲ್ಲಿ ಆರಂಭವಾಗಿರುವ ಲಾಕ್‌ಡೌನ್-ವಿರೋಧಿ ಪ್ರತಿಭಟನೆಗಳು ಕ್ಸಿಗೆ ಪ್ರಮುಖ ಸವಾಲನ್ನು ಒಡ್ಡುತ್ತಿರುವಂತೆ ತೋರುತ್ತಿದೆ.
ಸಿಪಿಸಿ ಮತ್ತು ಅದರ ನಾಯಕತ್ವವನ್ನು ವಿರೋಧಿಸುವ ರಾಜಕೀಯ ಪ್ರತಿಭಟನೆಗಳು ಚೀನದಲ್ಲಿ ಬಹಳ ವಿರಳ, ಆದರೆ ದೇಶವು ವಿವಿಧ ವಿಷಯಗಳ ಬಗ್ಗೆ ವಿರಳವಾದ ಆಂದೋಲನಗಳಿಗೆ ಸಾಕ್ಷಿಯಾಗಿದೆ. ಪಕ್ಷ ಮತ್ತು ನಾಯಕತ್ವದ ಟೀಕೆಗಳು ಕಠಿಣ ಶಿಕ್ಷೆಗೆ ಕಾರಣವಾಗಬಹುದು ಎನ್ನಲಾಗಿದೆ.
ಏತನ್ಮಧ್ಯೆ ಸೋಂಕಿನ ಹೊಸ ಸಮೂಹಗಳನ್ನು ಗುರುತಿಸಲು ಚೀನದಾದ್ಯಂತ ಸಾಮೂಹಿಕ ಕೋವಿಡ್ ಪರೀಕ್ಷೆಗಳನ್ನು ನಡೆಸಿದ್ದರಿಂದ ಶನಿವಾರದ ಅಂತ್ಯದ ವೇಳೆಗೆ ದೇಶದಲ್ಲಿ 35,858 ಲಕ್ಷಣರಹಿತ ಪ್ರಕರಣಗಳು ಸೇರಿದಂತೆ 39,501 ಕೋವಿಡ್ ವೈರಸ್ ಪ್ರಕರಣಗಳು ವರದಿಯಾಗಿವೆ ಎಂದು ರಾಷ್ಟ್ರೀಯ ಆರೋಗ್ಯ ಆಯೋಗ ಭಾನುವಾರ ತಿಳಿಸಿದೆ. ಸತತ ನಾಲ್ಕನೇ ದಿನವೂ ಚೀನ ಪ್ರಕರಣಗಳ ಹೆಚ್ಚಳವನ್ನು ವರದಿ ಮಾಡಿದೆ, ಇದು ಏಪ್ರಿಲ್‌ನಲ್ಲಿ ಶಾಂಘೈನಂತಹ ಉನ್ನತ ನಗರಗಳಲ್ಲಿ ಪ್ರಕರಣಗಳಲ್ಲಿ ತೀವ್ರ ಏರಿಕೆ ದಾಖಲಿಸಿದ ನಂತರ ಅತಿ ಹೆಚ್ಚಿನದ್ದಾಗಿದೆ.
ಟಾಪ್ ನ್ಯೂಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH

ಅನುದಾನ ನೀಡಿ ವರ್ಷವಾದರೂ ಆರಂಭವಾಗದ ಕಾಮಗಾರಿ ; ಗ್ರಾಮಸ್ಥರಿಂದ ಚುನಾವಣಾ ಬಹಿಷ್ಕಾರದ ಎಚ್ಚರಿಕೆ

ಮರಳಿನಲ್ಲಿ ಅರಳಿತು ತುಳುನಾಡ ನಾಗಾರಾಧನೆ | Malpe Beach Uthsava 2023 | Udupi – Udayavani

Beach Utsavaದಲ್ಲಿ ತರ ತರಹದ ಸ್ಪರ್ಧೆ, ಚಟುವಟಿಕೆಗಳು !ರಘುಪತಿ ಭಟ್ಟರು ಹೇಳಿದ್ದೇನು ?

ಕೃಷ್ಣ ನಗರಿಯ ಕುರಿತು ಅಭಿಮಾನದ ಮಾತುಗಳನ್ನಾಡಿದ Melody King Rajesh Krishnan
