ಮುಸ್ಲಿಮರನ್ನು ಶಿಕ್ಷಿಸಿ:ಯುಕೆಯಲ್ಲಿ ಅನಾಮಧೇಯ ಪತ್ರ ವೈರಲ್
Team Udayavani, Mar 14, 2018, 9:29 AM IST
ಲಂಡನ್: ಮುಸ್ಲಿಮರ ಮೇಲೆ ದಾಳಿ ನಡೆಸಿ ಎನ್ನುವ ಅನಾಮಧೇಯ ಪತ್ರವೊಂದು ಇಂಗ್ಲೆಂಡ್ನಾದ್ಯಂತ ಸಾಮಾಜಿಕ ತಾಣಗಳಲ್ಲಿ ವೈರಲ್ ಆಗಿದ್ದು ತೀವ್ರ ಕಳವಳಕ್ಕೆ ಕಾರಣವಾಗಿದೆ.
‘ಪನಿಷ್ ಎ ಮುಸ್ಲಿಂ ಡೇ ಥರ್ಡ್ ಎಪ್ರಿಲ್ 2018’ ಎಂಬ ಹೆಸರಿನಲ್ಲಿರುವ ಪತ್ರದಲ್ಲಿ ಮುಸ್ಲಿಮರನ್ನು ಗುರಿಯಾಗಿ ದಾಳಿ ನಡೆಸಲು ಪ್ರಚೋದಿಸಲಾಗಿದೆ.
ಈ ಪತ್ರವನ್ನು ಅಸಂಖ್ಯಾತ ಜನರು ಸಾಮಾಜಿಕ ತಾಣಗಳಲ್ಲಿ ಪೋಸ್ಟ್ ಮಾಡಿ ವೈರಲ್ ಮಾಡಿದ್ದಾರೆ. ಈ ಬಗ್ಗೆ ಇಂಗ್ಲೆಂಡ್ನ ನ್ಯಾಯಾಂಗ ಸಚಿವಾಲಯ ತನಿಖೆಗೆ ಆದೇಶ ನೀಡಿದೆ.
‘ಅವರು ನಿಮ್ಮನ್ನು ನೋಯಿಸಿದ್ದಾರೆ, ಅವರು ನಿಮ್ಮ ಪ್ರೀತಿಪಾತ್ರರು ಸಂಕಷ್ಟಪಡುವಂತೆ ಮಾಡಿದ್ದಾರೆ. ಅವರು ನಿಮಗೆ ನೋವು ಮತ್ತು ಮನೋವ್ಯಥೆ ಉಂಟುಮಾಡಿದ್ದಾರೆ. ನೀವು ಅದರ ಬಗ್ಗೆ ಏನು ಮಾಡಲಿದ್ದೀರಿ? ನೀವು ಬಹುಸಂಖ್ಯೆಯಲ್ಲಿದ್ದ ಹೊರತಾಗಿಯೂ ‘ಕುರಿ’ಯಂತೆ ಬದುಕುತ್ತೀರಾ?’ ಎಂದು ಪತ್ರದಲ್ಲಿ ಪ್ರಚೋದನಾತ್ಮಕವಾಗಿ ಬರೆಯಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Jamie Dimon: ಮೋದಿ ಆರ್ಥಿಕ ನೀತಿ ಅದ್ಭುತ, ಅಮೆರಿಕದಲ್ಲೂ ಜಾರಿ ಮಾಡಿ: ಜೇಮಿ
Sunita Williams: ಮೇ 6ರಂದು 3ನೇ ಬಾರಿಗೆ ಸುನಿತಾ ವಿಲಿಯಮ್ಸ್ ಗಗನ ಯಾತ್ರೆ
Thailandನಲ್ಲಿ ಗುಜರಿ ಮಾಫಿಯಾದ ಕಿಂಗ್ ಪಿನ್ ರವಿ ಕಾನಾ, ಪ್ರಿಯತಮೆ ಕಾಜಲ್ ಜಾ ಬಂಧನ
ತಂಗಿಯ ಸಮಾಧಿ ಸ್ಥಳಕ್ಕೆ ಭೇಟಿ ನೀಡುವುದನ್ನು ವ್ಲಾಗ್ ವಿಡಿಯೋ ಮಾಡಿದ ಯೂಟ್ಯೂಬರ್: ಆಕ್ರೋಶ
Kyrgyzstan; ಹೆಪ್ಪುಗಟ್ಟಿದ ಜಲಪಾತದಲ್ಲಿ ಸಿಲುಕಿ ಆಂಧ್ರದ ವಿದ್ಯಾರ್ಥಿ ಸಾವು