ಟಿಕ್‌ ಟಾಕ್‌ನಲ್ಲಿ ಶುರುವಾಯಿತು ಪರ್ಪಲ್‌ ಶಾಂಪೂ ಘಮ

Team Udayavani, Nov 1, 2019, 11:39 PM IST

ಪ್ರತಿ ವಾರ ಹೊಸ ಸವಾಲುಗಳನ್ನು ಹುಟ್ಟಿಹಾಕುವ ಮೂಲಕ ಟಿಕ್‌ ಟಾಕ್‌ ಯುವಕರನ್ನು ತನ್ನತ್ತ ಸೆಳೆಯುವ ಕಾರ್ಯ ಮಾಡುತ್ತಲ್ಲೇ ಇರುತ್ತದೆ. ಇದಕ್ಕೆ ಸೇರ್ಪಡೆಯಾಗಿ ಈ ವಾರ ಪರ್ಪಲ್‌ ಶಾಂಪೂ ಸವಾಲನ್ನು ನೀಡಿದ್ದು, ಸಾಮಾಜಿಕ ಜಾಲತಾಣದಲ್ಲಿ ಶಾಂಪು ಮೆತ್ತಿಕೊಂಡು ತಲೆಗಳ ಚಿತ್ರ ವೈರಲ್‌ ಆಗುತ್ತಿದೆ.

ಇನ್ನು ಟಿಕ್‌ ಟಾಕ್‌ ಬಳಕೆದಾರರು ಈ ಪರ್ಪಲ್‌ ಶಾಂಪೂ ಸವಾಲನ್ನು ಗಂಭೀರವಾಗಿ ತೆಗೆದುಕೊಂಡಿದ್ದು, ಮಹಿಳೆಯರು ತಮ್ಮ ಕೂದಲಿಗೆ ನೇರಳೆ ಬಣ್ಣದ ಶಾಂಪೂ ಹಾಕಿಕೊಂಡಿರುವ ಫೋಟೊಗಳನ್ನು ಶೇರ್‌ ಮಾಡುವ ಮೂಲಕ ಸವಾಲನ್ನು ಸ್ವೀಕರಿಸಿದ್ದೇವೆ ಎಂಬ ಸಂದೇಶವನ್ನು ರವಾನಿಸುತ್ತಿದ್ದಾರೆ.

ಒಟ್ಟಾರೆ ಎಲ್ಲಾ ಟಿಕ್‌ ಟಾಕ್‌ ಬಳಕೆದಾರರು ಸವಾಲಿನ ಭಾಗವಾಗಿ ಇಡೀ ಶಾಂಪೂ ಬಾಟಲಿಯನ್ನು ತಮ್ಮ ಕೂದಲಿನ ಮೇಲೆ ಸುರಿದುಕೊಳ್ಳುತ್ತಿದ್ದು, ಬಾಟಲಿಗಟ್ಟಲೆ ಶಾಂಪುನ್ನು ಖಾಲಿ ಮಾಡುತ್ತಿದ್ದಾರೆ. ಇನ್ನು ಕೆಲವರು ತಮ್ಮ ನೇರಳೆ ಬಣ್ಣದ ಕೂದಲನ್ನು ವೀಡಿಯೊ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿದು ಬಿಡುತ್ತಿದ್ದು, ಸುಮಾರು 70 ಮಿಲಿಯನ್‌ ಜನರು ಈ ವೀಡಿಯೋಗಳನ್ನು ನೋಡಿದ್ದಾರೆ.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ