ದಾಳಿಗೆ “ಸರ್ವಾಧಿಕಾರಿ’ ಬೆಲೆ ತೆರಲೇಬೇಕು! ಅಮೆರಿಕ ಸಂಸತ್‌ನಲ್ಲಿ ಬೈಡೆನ್‌ ಭಾಷಣ


Team Udayavani, Mar 3, 2022, 7:45 AM IST

ದಾಳಿಗೆ “ಸರ್ವಾಧಿಕಾರಿ’ ಬೆಲೆ ತೆರಲೇಬೇಕು! ಅಮೆರಿಕ ಸಂಸತ್‌ನಲ್ಲಿ ಬೈಡೆನ್‌ ಭಾಷಣ

ವಾಷಿಂಗ್ಟನ್‌: “ವೀ ವೆರ್‌ ರೆಡಿ…’ ಉಕ್ರೇನ್‌ ಮೇಲೆ ರಷ್ಯಾ ಯುದ್ಧ ಸಾರಿದ 7ನೇ ದಿನವಾದ ಬುಧವಾರ ಅಮೆರಿಕದ ಸಂಸತ್‌ ಅನ್ನು ಉದ್ದೇಶಿಸಿ ಮಾಡಿದ ಚೊಚ್ಚಲ ಭಾಷಣದ ವೇಳೆ ಅಧ್ಯಕ್ಷ ಜೋ ಬೈಡೆನ್‌ ಹೇಳಿದ ಮಾತಿದು.

“ಪುಟಿನ್‌ ಸಾರಿರುವ ಯುದ್ಧವು ಅಪ್ರಚೋದಿತವಾಗಿದೆ. ರಾಜತಾಂತ್ರಿಕತೆಯ ಎಲ್ಲ ಪ್ರಯತ್ನಗಳನ್ನೂ ಅವರು ತಿರಸ್ಕರಿಸಿದ್ದಾರೆ. ಪಾಶ್ಚಿಮಾತ್ಯ ರಾಷ್ಟ್ರಗಳು ಹಾಗೂ ನ್ಯಾಟೋ ಏನೂ ಮಾಡುವುದಿಲ್ಲ ಎಂದು ಪುಟಿನ್‌ ಭಾವಿಸಿದ್ದರು. ಆದರೆ, ಪುಟಿನ್‌ ಲೆಕ್ಕಾಚಾರ ತಪ್ಪಾಗಿದೆ. ನಾವು ರೆಡಿಯಾಗಿಯೇ ಇದ್ದೆವು’ ಎಂದು ಹೇಳುವ ಮೂಲಕ ಬೈಡೆನ್‌, ರಷ್ಯಾ ವಿರುದ್ಧ ಮತ್ತಷ್ಟು ಕ್ರಮ ಕೈಗೊಳ್ಳುವ ಸುಳಿವು ನೀಡಿದ್ದಾರೆ. ಅಲ್ಲದೇ, ಉಕ್ರೇನ್‌ ಮೇಲೆ ದಾಳಿ ನಡೆಸಿದ ರಷ್ಯಾ ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್‌ ತಮ್ಮ ಕುಕೃತ್ಯಕ್ಕೆ ಬೆಲೆ ತೆರಲೇಬೇಕು ಎಂದಿದ್ದಾರೆ.

ಪ್ರಜಾಪ್ರಭುತ್ವ ಮತ್ತು ಸರ್ವಾಧಿಕಾರದ ನಡುವಿನ ಜಾಗತಿಕ ಯುದ್ಧದಲ್ಲಿ ಉಕ್ರೇನ್‌ ಈಗ ಮುಂಚೂಣಿಯಲ್ಲಿ ನಿಂತು ಹೋರಾಡುತ್ತಿದೆ. ಈ ಸಮರದಲ್ಲಿ ಪ್ರಜಾಪ್ರಭುತ್ವಕ್ಕೇ ಗೆಲುವು. ಇತಿಹಾಸದ ಪುಟವನ್ನೊಮ್ಮೆ ತಿರುವಿಹಾಕಿ ನೋಡಿ, ಅದರಿಂದ ನಾವು ಅನೇಕ ಪಾಠಗಳನ್ನು ಕಲಿತಿದ್ದೇವೆ. ಯಾವಾಗ ಸರ್ವಾಧಿಕಾರಿಗಳು ತಮ್ಮ ಆಕ್ರಮಣಕ್ಕೆ ತಕ್ಕ ಬೆಲೆ ತೆರಲಿಲ್ಲವೋ, ಅಂಥ ಸಂದರ್ಭದಲ್ಲೆಲ್ಲ ಅವರು ಇನ್ನಷ್ಟು ವಿಧ್ವಂಸಕ ಕೃತ್ಯಗಳನ್ನು ನಡೆಸಿದ್ದಾರೆ. ಅದರಿಂದಾದ ಪರಿಣಾಮವನ್ನು ಅಮೆರಿಕ ಮತ್ತು ಇಡೀ ಜಗತ್ತೇ ಎದುರಿಸಿದೆ. ಇದೇ ಕಾರಣಕ್ಕಾಗಿ 2ನೇ ವಿಶ್ವಯುದ್ಧದ ನಂತರ ಶಾಂತಿ ಮತ್ತು ಸ್ಥಿರತೆ ಸ್ಥಾಪಿಸಲೆಂದೇ ನ್ಯಾಟೋವನ್ನು ರಚಿಸಲಾಯಿತು. ಈಗ ದುಸ್ಸಾಹಸವೆಸಗಿದ ರಷ್ಯಾದ ವಿರುದ್ಧ ಈಗಾಗಲೇ ಕಠಿಣ ಆರ್ಥಿಕ ನಿರ್ಬಂಧಗಳನ್ನು ವಿಧಿಸಲಾಗಿದೆ. ಸದ್ಯ ಉಂಟಾಗಿರುವ ಬಿಕ್ಕಟ್ಟಿನಿಂದಾಗಿ ಏನೇನು ಪ್ರತಿಕೂಲ ಪರಿಣಾಮಗಳು ಉಂಟಾಗಲಿದೆ ಎಂಬುದನ್ನು ರಷ್ಯಾ ಅಧ್ಯಕ್ಷ ಮರೆತಿದ್ದಾರೆ ಎಂದೂ ತಮ್ಮ 62 ನಿಮಿಷಗಳ ಭಾಷಣದಲ್ಲಿ ಬೈಡೆನ್‌ ಹೇಳಿದ್ದಾರೆ. ಇದೇ ವೇಳೆ, ರಷ್ಯಾ ಸೇನೆಯ ವಿರುದ್ಧ ಉಕ್ರೇನ್‌ ಸೇನೆ ಮತ್ತು ನಾಗರಿಕರು ಪ್ರದರ್ಶಿಸುತ್ತಿರುವ ಧೈರ್ಯದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಕಚ್ಚಾ ತೈಲ ಬಿಡುಗಡೆ:
ಯುದ್ಧದ ಪರಿಣಾಮವಾಗಿ ಜಗತ್ತಿನಾದ್ಯಂತ ಕಚ್ಚಾ ತೈಲದ ಬೆಲೆ ಏರಿಕೆ ತಡೆಯುವ ನಿಟ್ಟಿನಲ್ಲಿ 30 ಶತಕೋಟಿ ಬ್ಯಾರೆಲ್‌ ಕಚ್ಚಾ ತೈಲವನ್ನು ವ್ಯೂಹಾತ್ಮಕ ಸಂಗ್ರಹದಿಂದ ಬಿಡುಗಡೆ ಮಾಡುವುದಾಗಿ ಬೈಡೆನ್‌ ಘೋಷಿಸಿದ್ದಾರೆ. ಜತೆಗೆ, ರಷ್ಯಾದ ವಿಮಾನಗಳಿಗೆ ಅಮೆರಿಕ ವಾಯುಪ್ರದೇಶದಲ್ಲಿ ಹಾರಾಟ ನಿಷೇಧದ ಘೋಷಣೆಯನ್ನೂ ಮಾಡಿದ್ದಾರೆ. ಆದರೆ, ಭಾರತಕ್ಕೆ ಆಗಮಿಸುವ ಕೆಲವು ವಿಮಾನಗಳು ರಷ್ಯಾದ ವಾಯು ಪ್ರದೇಶವನ್ನು ಬಳಸಿಕೊಂಡು ಸಾಗುತ್ತಿವೆ. ಹೊಸ ನಿರ್ಧಾರದಿಂದಾಗಿ, ಅಮೆರಿಕ ಮತ್ತು ಭಾರತ ನಡುವಿನ ವಿಮಾನ ಯಾನದ ಅವಧಿ ಇನ್ನೂ ಹೆಚ್ಚಾಗಲಿದೆ.

ಬೈಡೆನ್‌ ಎಡವಟ್ಟು:
ವಿಶೇಷವೆಂದರೆ, ಇದೇ ಮೊದಲ ಬಾರಿಗೆ ಅಮೆರಿಕ ಅಧ್ಯಕ್ಷರ ಭಾಷಣದ ವೇಳೆ ಇಬ್ಬರು ಪ್ರಭಾವಿ ಮಹಿಳೆಯರು ವೇದಿಕೆ ಮೇಲೆ ಉಪಸ್ಥಿತರಿದ್ದರು. ಉಪಾಧ್ಯಕ್ಷ ಕಮಲಾ ಹ್ಯಾರಿಸ್‌ ಮತ್ತು ಹೌಸ್‌ ಸ್ಪೀಕರ್‌ ನ್ಯಾನ್ಸಿ ಪೆಲೋಸಿ ಅವರು ಬೈಡೆನ್‌ ಹಿಂದೆಯೇ ನಿಂತಿದ್ದರು. ತಮ್ಮ ಚೊಚ್ಚಲ ಭಾಷಣದ ವೇಳೆ ಬೈಡೆನ್‌ ಅವರು ಎಡವಟ್ಟು ಮಾಡಿಕೊಂಡ ಸನ್ನಿವೇಶವೂ ನಡೆಯಿತು. “ರಷ್ಯಾ ಆಕ್ರಮಣದ ವಿರುದ್ಧ ಎಲ್ಲ ಉಕ್ರೇನಿಯನ್ನರೂ ಒಗ್ಗಟ್ಟಾಗಿ ನಿಲ್ಲಬೇಕು’ ಎಂದು ಹೇಳುವಾಗ “ಉಕ್ರೇನಿಯನ್ನರು’ ಎಂಬ ಪದದ ಬದಲಿಗೆ “ಇರಾನಿಯನ್ನರು’ ಎಂದು ಬಳಸಿದರು. ಈ ವೇಳೆ, ಹಿಂದೆ ನಿಂತಿದ್ದ ಕಮಲಾ, “ಉಕ್ರೇನಿಯನ್ನರು’ ಎಂದು ಸರಿಪಡಿಸಲು ಯತ್ನಿಸಿದರಾದರೂ, ಅದು ಬೈಡೆನ್‌ ಕಿವಿಗೆ ಬೀಳಲೇ ಇಲ್ಲ.

 “ಬೆಂಬಲ’ ಸೂಚಕ ಉಡುಗೆ!
ಅಧ್ಯಕ್ಷರ ಭಾಷಣದ ವೇಳೆ ಅಮೆರಿಕದ ಪ್ರಥಮ ಮಹಿಳೆ ಜಿಲ್‌ ಬೈಡೆನ್‌ ಅವರು ತಮ್ಮ ಉಡುಗೆ-ತೊಡುಗೆಯ ಮೂಲಕವೇ “ಉಕ್ರೇನ್‌ಗೆ ಬೆಂಬಲ’ ವ್ಯಕ್ತಪಡಿಸಿದ್ದು ಕಂಡುಬಂತು. ಉಕ್ರೇನ್‌ನ ಧ್ವಜದ ಬಣ್ಣವಾದ “ನೀಲಿ’ ಬಣ್ಣದ ತುಂಬುತೋಳಿನ ಉಡುಪನ್ನು ಜಿಲ್‌ ಧರಿಸಿದ್ದರು. ಅಷ್ಟೇ ಅಲ್ಲ, ಬಲ ತೋಳಿನ ಅಂಗೈಯ ಭಾಗದಲ್ಲಿ “ಸೂರ್ಯಕಾಂತಿ’ ಹೂವಿನ ಪುಟ್ಟದಾದ ಎಂಬ್ರಾಯಿಡರಿ ವರ್ಕ್‌ ಕೂಡ ಎದ್ದುಕಾಣುತ್ತಿತ್ತು. ವಿಶೇಷವೆಂದರೆ, ಸೂರ್ಯಕಾಂತಿಯು ಉಕ್ರೇನ್‌ನ ರಾಷ್ಟ್ರೀಯ ಪುಷ್ಪವಾಗಿದೆ. ಜಿಲ್‌ ಮಾತ್ರವಲ್ಲದೇ, ಹೌಸ್‌ ಮತ್ತು ಸೆನೇಟ್‌ನಲ್ಲಿ ಹಲವರು ನೀಲಿ ಮತ್ತು ಹಳದಿ ಬಣ್ಣದ ರಿಬ್ಬನ್‌ಗಳನ್ನು ಧರಿಸುವ ಮೂಲಕ “ಉಕ್ರೇನ್‌ ಜತೆಗೆ ನಾವಿದ್ದೇವೆ’ ಎಂಬುದನ್ನು ತೋರಿಸಿದರು.

ಟಾಪ್ ನ್ಯೂಸ್

Biriyani was being served on paper plates with images of Lord Rama

Video| ರಾಮನ ಫೋಟೋ ಇರುವ ತಟ್ಟೆಯಲ್ಲಿ ಬಿರಿಯಾನಿ: ವಿವಾದ

K. S. Eshwarappa ಹಿರಿಯರು, ಅದೇಕೋ ಅಡ್ಡ ದಾರಿ ಹಿಡಿದಿದ್ದಾರೆ: ವಿಜಯೇಂದ್ರK. S. Eshwarappa ಹಿರಿಯರು, ಅದೇಕೋ ಅಡ್ಡ ದಾರಿ ಹಿಡಿದಿದ್ದಾರೆ: ವಿಜಯೇಂದ್ರ

K. S. Eshwarappa ಹಿರಿಯರು, ಅದೇಕೋ ಅಡ್ಡ ದಾರಿ ಹಿಡಿದಿದ್ದಾರೆ: ವಿಜಯೇಂದ್ರ

Copters crash into each other

Kuala Lumpur; ಪರಸ್ಪರ ಡಿಕ್ಕಿ ಹೊಡೆದು ಪತನಗೊಂಡ ಕಾಪ್ಟರ್‌ಗಳು: 10 ಯೋಧರು ಸಾವು

5-ksrgdu

Crime: ಕಾಸರಗೋಡು ಭಾಗದ ಅಪರಾಧ ಸುದ್ದಿಗಳು 

Lok Sabha Election; 28 ಕ್ಷೇತ್ರದಲ್ಲೂ ಗೆಲ್ಲುತ್ತೇವೆ: ಬಿಎಸ್‌ವೈ

Lok Sabha Election; 28 ಕ್ಷೇತ್ರದಲ್ಲೂ ಗೆಲ್ಲುತ್ತೇವೆ: ಬಿಎಸ್‌ವೈ

4-chikkamagaluru

Chikkamagaluru: ವಿದ್ಯುತ್ ಶಾಕ್ ನಿಂದ ಲೈನ್ ಮ್ಯಾನ್ ಸಾವು

nenapirali prem as police in new movie

Kannada Cinema; ಹೊಸ ಚಿತ್ರದಲ್ಲಿ ಖಡಕ್ ಪೊಲೀಸ್ ಆದ ನೆನಪಿರಲಿ ಪ್ರೇಮ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Copters crash into each other

Kuala Lumpur; ಪರಸ್ಪರ ಡಿಕ್ಕಿ ಹೊಡೆದು ಪತನಗೊಂಡ ಕಾಪ್ಟರ್‌ಗಳು: 10 ಯೋಧರು ಸಾವು

Malaysian ನೌಕಾಪಡೆಯ 2 ಹೆಲಿಕಾಪ್ಟರ್ ಪತನ; 10 ಮಂದಿ ಮೃತ್ಯು, ಭಯಾನಕ ವಿಡಿಯೋ ಸೆರೆ

Malaysia ನೌಕಾಪಡೆಯ 2 ಹೆಲಿಕಾಪ್ಟರ್ ಪತನ; 10 ಮಂದಿ ಮೃತ್ಯು, ಭಯಾನಕ ವಿಡಿಯೋ ಸೆರೆ

Taiwan ನಲ್ಲಿ ಸರಣಿ ಭೂಕಂಪ… ರಾತ್ರಿಯಿಡೀ ಮನೆಯಿಂದ ಹೊರಗುಳಿದ ಮನೆಮಂದಿ

Taiwan ನಲ್ಲಿ ಸರಣಿ ಭೂಕಂಪ… ರಾತ್ರಿಯಿಡೀ ಮನೆಯಿಂದ ಹೊರಗುಳಿದ ಮನೆಮಂದಿ

1-wewwqewewqe

US ಪೌರತ್ವ: ಭಾರತೀಯರಿಗೆ ದ್ವಿತೀಯ ಸ್ಥಾನ

police USA

USA: ಅಪಘಾತದಲ್ಲಿ ಭಾರತ ಮೂಲದ ಇಬ್ಬರ ಸಾವು

MUST WATCH

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

ಹೊಸ ಸೇರ್ಪಡೆ

Biriyani was being served on paper plates with images of Lord Rama

Video| ರಾಮನ ಫೋಟೋ ಇರುವ ತಟ್ಟೆಯಲ್ಲಿ ಬಿರಿಯಾನಿ: ವಿವಾದ

K. S. Eshwarappa ಹಿರಿಯರು, ಅದೇಕೋ ಅಡ್ಡ ದಾರಿ ಹಿಡಿದಿದ್ದಾರೆ: ವಿಜಯೇಂದ್ರK. S. Eshwarappa ಹಿರಿಯರು, ಅದೇಕೋ ಅಡ್ಡ ದಾರಿ ಹಿಡಿದಿದ್ದಾರೆ: ವಿಜಯೇಂದ್ರ

K. S. Eshwarappa ಹಿರಿಯರು, ಅದೇಕೋ ಅಡ್ಡ ದಾರಿ ಹಿಡಿದಿದ್ದಾರೆ: ವಿಜಯೇಂದ್ರ

Copters crash into each other

Kuala Lumpur; ಪರಸ್ಪರ ಡಿಕ್ಕಿ ಹೊಡೆದು ಪತನಗೊಂಡ ಕಾಪ್ಟರ್‌ಗಳು: 10 ಯೋಧರು ಸಾವು

5-ksrgdu

Crime: ಕಾಸರಗೋಡು ಭಾಗದ ಅಪರಾಧ ಸುದ್ದಿಗಳು 

Lok Sabha Election; 28 ಕ್ಷೇತ್ರದಲ್ಲೂ ಗೆಲ್ಲುತ್ತೇವೆ: ಬಿಎಸ್‌ವೈ

Lok Sabha Election; 28 ಕ್ಷೇತ್ರದಲ್ಲೂ ಗೆಲ್ಲುತ್ತೇವೆ: ಬಿಎಸ್‌ವೈ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.