ಕಪ್ಪೆ ಹಾವನ್ನೇ ನುಂಗಿತ್ತಾ!
Team Udayavani, Feb 6, 2020, 7:55 PM IST
ಮೆಲ್ಬರ್ನ್: ಕಪ್ಪೆಯನ್ನು ಹಾವು ನುಂಗುವುದು ಸಾಮಾನ್ಯ ಸಂಗತಿ. ಹಾವಿನ ಆಹಾರವೇ ಕಪ್ಪೆಯಾಗಿದೆ. ಆದರೆ, ಆಸ್ಟ್ರೇಲಿಯಾದಲ್ಲಿ ಹಾವನ್ನೇ ಕಪ್ಪೆ ನುಂಗಿ ಹಾಕಿದೆ. ಅದು ಕೂಡ ವಿಶ್ವದಲ್ಲೇ ಅತಿ ಹೆಚ್ಚು ವಿಷವನ್ನು ಹೊಂದಿರುವ ಮೂರನೇ ಹಾವು ಇದಾಗಿದೆ. ಇಂತಹ ವಿಷಕಾರಿ ಸರೀಸೃಪದಿಂದ ಸಾಕಷ್ಟು ಬಾರಿ ಕಚ್ಚಿಸಿಕೊಂಡಿದ್ದಲ್ಲದೇ, ಅದನ್ನು ನುಂಗಿದರೂ ಕಪ್ಪೆ ಜೀವಂತವಾಗಿದೆ.
ಕ್ವೀನ್ಸ್‌ಲ್ಯಾಂಡ್‌ನಲ್ಲಿ ಇಂತಹ ವಿಚಿತ್ರ ಸಂಗತಿ ನಡೆದಿದೆ.ಹಸಿರು ಬಣ್ಣದ ಕಪ್ಪೆಯನ್ನು ಹಲವು ಬಾರಿ ಈ ಹಾವು ಕಚ್ಚಿದೆ. ನೋಡ-ನೋಡುತ್ತಿದ್ದಂತೆಯೇ ಕಪ್ಪೆಯು ಹಾವನ್ನೇ ನುಂಗಲಾರಂಭಿಸಿದೆ. ಇದನ್ನು ನೋಡಿದ ಪ್ರತ್ಯಕ್ಷದರ್ಶಿ ಮಹಿಳೆಯೊಬ್ಬರು, ಕೂಡಲೇ ಉರಗತಜ್ಞರ ಗಮನಕ್ಕೆ ತಂದಿದ್ದಾರೆ. ಅವರು ಸ್ಥಳಕ್ಕೆ ಧಾವಿಸುವಷ್ಟರಲ್ಲೇ ಹಾವನ್ನು ಕಪ್ಪೆ ಗುಳಂ ಮಾಡಿತ್ತು.
ಈ ದೃಶ್ಯಾವಳಿಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಸಹಸ್ರಾರು ಮಂದಿ ಇದನ್ನು ನೋಡಿ ಅಚ್ಚರಿಗೊಳಗಾಗಿದ್ದಾರೆ. ಸಾಮಾನ್ಯವಾಗಿ ಹುಳುಗಳನ್ನು ತಿನ್ನುವ ಕಪ್ಪೆಯು ಹಾವನ್ನೇ ನುಂಗಿರುವುದು ತೀರಾ ಅಪರೂಪದ ಸಂಗತಿ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ನ್ಯೂಯಾರ್ಕ್ನಲ್ಲಿ ಶೂಟೌಟ್: ಭಾರತೀಯ ಮೂಲದ ವ್ಯಕ್ತಿಯ ಹತ್ಯೆ
ದೇಶಕ್ಕೆ ಕಪ್ಪು ಚುಕ್ಕಿ ತಂದಿಟ್ಟ ಎಮರ್ಜೆನ್ಸಿ: ಜರ್ಮನಿಯ ಮ್ಯೂನಿಚ್ನಲ್ಲಿ ಪ್ರಧಾನಿ ಅಭಿಮತ
ಈ ಹೋಟೆಲ್ ನಲ್ಲಿ ಆಂಟಿ ಎಂದರೆ ಆರ್ಡರ್ ಕ್ಯಾನ್ಸಲ್! 18ವರ್ಷ ಮೇಲ್ಪಟ್ಟವರಿಗೆ ಮಾತ್ರ ಈ ನಿಯಮ
ಇಮ್ರಾನ್ ಖಾನ್ ನಿವಾಸದಲ್ಲಿ ಬೇಹು ಸಾಧನ ಅಳವಡಿಕೆಗೆ ಯತ್ನ: ಭದ್ರತಾ ಸಿಬ್ಬಂದಿ ಬಂಧನ
ಆರ್ಥಿಕ ದುಸ್ಥಿತಿ: ಶ್ರೀಲಂಕಾದಲ್ಲಿ ಪೆಟ್ರೋಲ್, ಡೀಸೆಲ್ ಮತ್ತಷ್ಟು ತುಟ್ಟಿ