ಕಪ್ಪುಹಣ ಇಟ್ಟವರ ಮಾಹಿತಿ ಶೀಘ್ರ ಬಹಿರಂಗ?

Team Udayavani, Jun 17, 2019, 5:11 AM IST

ಬೆರ್ನೆ/ಹೊಸದಿಲ್ಲಿ: ಸ್ವಿಸ್‌ ಬ್ಯಾಂಕುಗಳಲ್ಲಿ ಅಕ್ರಮವಾಗಿ ಹಣ ಇಟ್ಟಿರುವ ಭಾರತೀಯರಲ್ಲಿ ಸುಮಾರು 50 ಜನರ ಹೆಸರುಗಳನ್ನು ಸದ್ಯದಲ್ಲೇ ಬಿಡುಗಡೆ ಮಾಡಲು ಅಲ್ಲಿನ ತನಿಖಾ ಸಂಸ್ಥೆಗಳು ನಿರ್ಧರಿಸಿವೆ. ಸದ್ಯದಲ್ಲೇ, ಸ್ವಿಜರ್ಲೆಂಡ್‌ ಸರಕಾರಕ್ಕೆ ಹಾಗೂ ಭಾರತ ಸರಕಾರಕ್ಕೆ ಈ ಪಟ್ಟಿಯಲ್ಲಿ ಸಲ್ಲಿಸಲು ತೀರ್ಮಾನಿಸಲಾಗಿದೆ. ಈ 50 ವ್ಯಕ್ತಿಗಳು ಭಾರತ ದಲ್ಲಿ ರಿಯಲ್‌ ಎಸ್ಟೇಟ್‌, ಹಣಕಾಸು ಸೇವೆಗಳು, ತಂತ್ರ ಜ್ಞಾನ, ದೂರಸಂಪರ್ಕ, ಬಣ್ಣ ತಯಾರಿಕಾ ಕ್ಷೇತ್ರ, ಗೃಹ ಅಲಂ ಕಾರ, ಜವಳಿ, ಇಂಜಿನಿಯರಿಂಗ್‌ ಉತ್ಪನ್ನ, ಆಭರಣ ಮತ್ತು ರತ್ನಗಳ ಕ್ಷೇತ್ರಗಳಲ್ಲಿ ತಮ್ಮದೆ ಆದ ಕಂಪನಿಗಳನ್ನು ಹೊಂದಿ ದ್ದಾರೆ. ಆದರೆ, ಈ ಕಂಪನಿಗಳಲ್ಲಿ ಕೆಲವು ಕಂಪನಿಗಳೂ ನಕಲಿ ಆಗಿರುವಂಥವು ಎಂದು ಅಧಿಕಾರಿಗಳು ತಿಳಿಸಿದ್ದಾರೆ.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ