ಲಂಕಾ ಸ್ಫೋಟ : ಬಹುಭಾಷಾ ನಟಿ ರಾಧಿಕಾ ಶರತ್‌ ಕುಮಾರ್‌ ಪಾರು


Team Udayavani, Apr 21, 2019, 4:29 PM IST

258

ಕೊಲಂಬೋ: ಶ್ರೀಲಂಕಾದಲ್ಲಿ ಭಾನುವಾರ ನಡೆದ ಭೀಕರ ಬಾಂಬ್‌ ಸ್ಫೋಟದಲ್ಲಿ ಬಹುಭಾಷಾ ನಟಿ ರಾಧಿಕಾ ಶರತ್‌ ಕುಮಾರ್‌ ಅವರು ಪಾರಾಗಿದ್ದಾರೆ.

ಟ್ವೀಟರ್‌ನಲ್ಲಿ ಬರೆದುಕೊಂಡಿರುವ ರಾಧಿಕಾ, ನಾನು ಕೊಲಂಬೋದ ಸಿನ್ನಾಮೊನ್‌ಗ್ರ್ಯಾಂಡ್‌ ಹೊಟೇಲ್‌ನಿಂದ ಹೊರ ಬಂದ ಕೆಲ ಹೊತ್ತಲ್ಲೇ ಸ್ಫೋಟ ಸಂಭವಿಸಿದೆ. ನನಗೆ ಈ ಆಘಾತಕಾರಿ ವಿಚಾರವನ್ನು ನಂಬಲಾಗುತ್ತಿಲ್ಲ ಎಂದು ಬರೆದಿದ್ದಾರೆ.

ಈಸ್ಟರ್‌ ಆಚರಣೆಯ ವೇಳೆ ಶ್ರೀಲಂಕಾ ರಾಜಧಾನಿ ಕೊಲಂಬೋ ಸೇರಿ ಮೂರು ನಗರಗಳಲ್ಲಿ ಉಗ್ರರು 8 ಕಡೆಗಳಲ್ಲಿ ಸರಣಿ ಸ್ಫೋಟಗಳನ್ನು ನಡೆಸಿದ್ದು, ಮಂಗಳೂರಿನ ಮಹಿಳೆ ಸೇರಿ ಕನಿಷ್ಠ 162 ಮಂದಿ ಪ್ರಾಣ ಕಳೆದುಕೊಂಡಿದ್ದು , 350 ಜನರು ಗಂಭೀರವಾಗಿ ಗಾಯಗೊಂಡಿದ್ದಾರೆ. ಬೆಚ್ಚಿ ಬೀಳಿಸುವ ಘಟನೆ ಬಳಿಕ ದೇಶದೆಲ್ಲೆಡೆ ಕರ್‌ಫ್ಯೂ ಜಾರಿ ಗೊಳಿಸಲಾಗಿದೆ.

ಕೊಲಂಬೋಗೆ ಪತಿಯೊಂದಿಗೆ ಪ್ರವಾಸಕ್ಕೆ ತೆರಳಿದ್ದ ರಝೀನಾ ಎಂಬ ಮಹಿಳೆ ಸಾವನ್ನಪ್ಪಿರುವ ಬಗ್ಗೆ ವಿವರಗಳು ಲಭ್ಯವಾಗಿದ್ದು, ಮೃತ ಮಹಿಳೆ ಪತಿ ರಝಾಕ್‌ ಜೊತೆ ಪ್ರವಾಸಕ್ಕೆ ತೆರಳಿದ್ದರು ಎಂದು ತಿಳಿದು ಬಂದಿದೆ.

ಬೆಳಗ್ಗೆ 6ಕಡೆಗಳಲ್ಲಿ ನಡೆದ ಸರಣಿ ದಾಳಿಯಿಂದ ಇಡೀ ದೇಶವೇ ಬೆಚ್ಚಿ ಬಿದ್ದಿದ್ದು, ಮಧ್ಯಾಹ್ನ ಕೊಲಂಬೋದ ಇನ್ನೆರಡು ಸ್ಥಳಗಳಲ್ಲಿ ಪ್ರಬಲ ಸ್ಫೋಟಗಳು ಸಂಭವಿಸಿದ್ದು ಆತಂಕ ಇನ್ನಷ್ಟು ಹೆಚ್ಚಾಗಿದೆ.

ಕೊಲಂಬೋ ಸೇರಿದಂತೆ ಶ್ರೀಲಂಕಾದೆಲ್ಲೆಡೆ ಹೈ ಅಲರ್ಟ್‌ ಘೋಷಿಸಿ ಕಟ್ಟೆಚ್ಚರ ವಹಿಸಲಾಗಿದೆ. ವಿಮಾನ ನಿಲ್ದಾಣಗಳು, ಬಸ್‌ ನಿಲ್ದಾಣಗಳಲ್ಲಿ ತೀವ್ರ ತಪಾಸಣೆ ನಡೆಸಲಾಗುತ್ತಿದೆ.

ಬೆಳಗ್ಗೆ ಮೂರು ಚರ್ಚ್‌ಗಳು ಮತ್ತು ಮೂರು ಪಂಚತಾರಾ ಹೊಟೇಲ್‌ಗ‌ಳನ್ನು ಗುರಿಯಾಗಿಸಿ ದಾಳಿ ನಡೆಸಲಾಗಿತ್ತು. ಮಧ್ಯಾಹ್ನ ಕೊಲಂಬೋದ ದೆಹಿವಾಲಾ ಮತ್ತು ಡೆಮೊಟಗೋಡಾ ಪ್ರದೇಶದಲ್ಲಿ ಸ್ಫೋಟ ಸಂಭವಿಸಿದೆ.

ದೆಹಿವಾಲಾದಲ್ಲಿ ಸಂಭವಿಸಿದ ಸ್ಫೋಟದಲ್ಲಿ ಕನಿಷ್ಠ ಇಬ್ಬರು ಸಾವನ್ನಪ್ಪಿದ್ದು, ಹಲವರು ಗಾಯಗೊಂಡಿರುವ ಬಗ್ಗೆ ವರದಿಯಾಗಿದೆ.

ಬಟ್ಟಿಕಾಲೋಯಾದ ಚರ್ಚ್‌ನಲ್ಲಿ ಮೊದಲ ನ್ಪೋಟ ಸಂಭವಸಿದ್ದು, ಬಳಿಕ ಕೊಲಂಬೋದ ಕೊಚ್ಚಿಕೊಡೆಯ ಚರ್ಚ್‌ನಲ್ಲಿ ಸ್ಫೋಟ ಸಂಭವಿಸಿದೆ.

ಈಸ್ಟರ್‌ ಆಚರಣೆಗಾಗಿ ಭಾರೀ ಸಂಖ್ಯೆಯ ಜನರು ಚರ್ಚ್‌ನಲ್ಲಿ ಜಮಾವಣೆಗೊಂಡಿರುವುದನ್ನು ಗುರಿಯಾಗಿರಿಸಿಕೊಂಡು ಭೀಕರ ದಾಳಿ ನಡೆಸಲಾಗಿದೆ.

ಕೊಲಂಬೋ ನಗರದಲ್ಲಿ ಸೇನಾ ಪಡೆಗಳ ತುಕಡಿಗಳನ್ನು ನಿಯೋಜಿಸಿ ಕಟ್ಟೆಚ್ಚರ ವಹಿಸಲಾಗಿದೆ. ಎಲ್ಲಾ ಭದ್ರತಾ ಸಿಬಂದಿಗಳ ರಜೆ ಕಡಿತಗೊಳಿಸಲಾಗಿದೆ.

ಸಾಮಾಜಿಕ ತಾಣಗಳನ್ನು ಸಂಪೂರ್ಣವಾಗಿ ಬಂದ್‌ ಮಾಡಲಾಗಿದೆ. ಸೋಮವಾರ ಮತ್ತು ಮಂಗಳವಾರ ಸರ್ಕಾರಿ ರಜೆ ಘೋಷಿಸಲಾಗಿದೆ.

ಪ್ರಧಾನಿ ರಣಿಲ್‌ ವಿಕ್ರಮಸಿಂಘೆ ಅವರು ಭದ್ರತಾ ಸಮಿತಿಯ ತುರ್ತು ಸಭೆಯನ್ನು ಕರೆದು ಸ್ಫೋಟಗಳ ಬಗ್ಗೆ ವಿವರ ಕೇಳಿದ್ದಾರೆ.

ಸ್ಫೋಟದಲ್ಲಿ ದಾಳಿಯನ್ನು ರಾಷ್ಟ್ರಪತಿ ರಾಮ್‌ನಾಥ್‌ ಕೋವಿಂದ್‌ ಮತ್ತು

ಯಾವ ಉಗ್ರ ಸಂಘಟನೆ ದಾಳಿ ನಡೆಸಿದೆ ಎನ್ನುವುದು ಇನ್ನಷ್ಟೇ ತಿಳಿದು ಬರಬೇಕಾಗಿದೆ.

ಟಾಪ್ ನ್ಯೂಸ್

Lok sabha polls: ಸುರೇಶ್‌ ಗೆಲ್ಲುವುದಿರಲಿ, ಠೇವಣಿ ಕೂಡ ಸಿಗದು; ರಾಧಾಮೋಹನ್‌ ದಾಸ್‌

Lok sabha polls: ಸುರೇಶ್‌ ಗೆಲ್ಲುವುದಿರಲಿ, ಠೇವಣಿ ಕೂಡ ಸಿಗದು; ರಾಧಾಮೋಹನ್‌ ದಾಸ್‌

1-wwqeqw

Kejriwal; ಏಪ್ರಿಲ್ 1 ರವರೆಗೆ ಇಡಿ ಕಸ್ಟಡಿಗೆ: ಸಾರ್ವಜನಿಕರು ತಕ್ಕ ಉತ್ತರ ನೀಡುತ್ತಾರೆ

kejriwal-2

Kejriwal ಕುರಿತು ಅಮೆರಿಕದ ಹೇಳಿಕೆ ಸ್ವೀಕಾರಾರ್ಹವಲ್ಲ ಎಂದ ಭಾರತದ ವಿದೇಶಾಂಗ ಇಲಾಖೆ

1—eewqewq

World’s largest ಅನಕೊಂಡ ಅನಾ ಜೂಲಿಯಾ ಸಾವು; ಆಗಿದ್ದೇನು?

Politics: ಅಮಿತ್‌ ಶಾ ಓರ್ವ ಗೂಂಡಾ, ರೌಡಿ: ಯತೀಂದ್ರ 

Politics: ಅಮಿತ್‌ ಶಾ ಓರ್ವ ಗೂಂಡಾ, ರೌಡಿ: ಯತೀಂದ್ರ 

1-asdasdad

Pralhad Joshi ವಿರುದ್ದ ಸಿಡಿದೆದ್ದ ದಿಂಗಾಲೇಶ್ವರ ಶ್ರಿಗಳಿಗೆ ವೀರಶೈವ ಮಹಾಸಭಾ ಬೆಂಬಲ

NIA (2)

Rameshwaram Cafe case: ಎನ್‌ಐಎಯಿಂದ ಸಹ ಸಂಚುಕೋರನ ಬಂಧನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Baltimore bridge: ಬಾಲ್ಟಿಮೋರ್ ಸೇತುವೆ ಕುಸಿತ: ಇಬ್ಬರ ಮೃತದೇಹ ಹೊರತೆಗೆದ ರಕ್ಷಣಾ ತಂಡ

Baltimore bridge: ಬಾಲ್ಟಿಮೋರ್ ಸೇತುವೆ ಕುಸಿತ: ಇಬ್ಬರ ಮೃತದೇಹ ಹೊರತೆಗೆದ ರಕ್ಷಣಾ ತಂಡ

America: ಕಾನೂನು ಸಮರದಲ್ಲಿ ಹೈರಾಣ-ಹಣ ಸಂಗ್ರಹಕ್ಕಾಗಿ ಟ್ರಂಪ್‌ ಬೈಬಲ್‌ ಮಾರಾಟ!

America: ಕಾನೂನು ಸಮರದಲ್ಲಿ ಹೈರಾಣ-ಹಣ ಸಂಗ್ರಹಕ್ಕಾಗಿ ಟ್ರಂಪ್‌ ಬೈಬಲ್‌ ಮಾರಾಟ!

1—weqe

Baltimore bridge collapse; ಆರು ಕಾರ್ಮಿಕರು ನಾಪತ್ತೆ: ಪತ್ತೆ ಕಾರ್ಯ ಸ್ಥಗಿತ

LGBTQ Couple anjali chakra sufi malik broke their marriage

Anjali Chakra – Sufi Malik; ಮದುವೆಗೂ ಮುನ್ನ ಭಾರತ-ಪಾಕ್‌ ಸಲಿಂಗಿ ಜೋಡಿ ಬ್ರೇಕಪ್‌!

ವಿಯೆಟ್ನಾಂನಲ್ಲಿ ಹಕ್ಕಿಜ್ವರಕ್ಕೆ ಮೊದಲ ಬಲಿ!

H5N1: ವಿಯೆಟ್ನಾಂನಲ್ಲಿ ಹಕ್ಕಿಜ್ವರಕ್ಕೆ ಮೊದಲ ಬಲಿ!

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

29

Hassan Lok sabha Constituency: ಪ್ರಜ್ವಲ್‌ ರೇವಣ್ಣ ನಾಮಪತ್ರ ಸಲ್ಲಿಕೆ

Lok sabha polls: ಸುರೇಶ್‌ ಗೆಲ್ಲುವುದಿರಲಿ, ಠೇವಣಿ ಕೂಡ ಸಿಗದು; ರಾಧಾಮೋಹನ್‌ ದಾಸ್‌

Lok sabha polls: ಸುರೇಶ್‌ ಗೆಲ್ಲುವುದಿರಲಿ, ಠೇವಣಿ ಕೂಡ ಸಿಗದು; ರಾಧಾಮೋಹನ್‌ ದಾಸ್‌

Bike thief: ಬಜಪೆ ಪೊಲೀಸರಿಂದ ಅಂತರ್‌ ಜಿಲ್ಲಾ ಬೈಕ್‌ ಕಳ್ಳನ ಬಂಧನ

Bike thief: ಬಜಪೆ ಪೊಲೀಸರಿಂದ ಅಂತರ್‌ ಜಿಲ್ಲಾ ಬೈಕ್‌ ಕಳ್ಳನ ಬಂಧನ

1-aaa

Ex-IPS officer ಸಂಜೀವ್ ಭಟ್‌ಗೆ 1996 ರ ಡ್ರಗ್ಸ್ ಕೇಸ್ ನಲ್ಲಿ 20 ವರ್ಷ ಜೈಲು ಶಿಕ್ಷೆ

1-wwqeqw

Kejriwal; ಏಪ್ರಿಲ್ 1 ರವರೆಗೆ ಇಡಿ ಕಸ್ಟಡಿಗೆ: ಸಾರ್ವಜನಿಕರು ತಕ್ಕ ಉತ್ತರ ನೀಡುತ್ತಾರೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.