ರಷ್ಯಾಅಧ್ಯಕ್ಷರಿಗೆ ಕೋವಿಡ್ 19 ಕೊಲ್ಲಲು ಮೂರು ತಿಂಗಳ ಸಮಯ ಬೇಕಂತೆ !
Team Udayavani, Mar 29, 2020, 1:30 PM IST
ಮಾಸ್ಕೊ: “ನನಗೆ 3 ತಿಂಗಳ ಸಮಯ ಕೊಡಿ. ಅದರ ಬೇರು ಸಮೇತ ಕಿತ್ತು ಹಾಕುತ್ತೇನೆ. ಆ ಸಾಮರ್ಥ್ಯ ನಮ್ಮ ದೇಶಕ್ಕೆ ಇದೆ’.
ಹೀಗೆಂದು ತಮ್ಮ ದೇಶದ ಪ್ರಜೆಗಳಲ್ಲಿ ಸಮಯ ಕೇಳಿದವರು ರಷ್ಯಾದ ಅಧ್ಯಕ್ಷ ವ್ಲಾದಿಮಿರ್ ಪುಟಿನ್. ಇದು ಭಯೋತ್ಪಾದನೆಯನ್ನು ನಿಗ್ರಹಿಸಲು ಯಾವುದೇ ರಾಷ್ಟ್ರ ಮಾಡಿದ ಶಪಥ ಅಲ್ಲ.ಚುನಾವಣೆ ಸಂದರ್ಭ ಕೇಳಿಬರುವ ಆಶ್ವಾಸನೆಗಳಲ್ಲ. ಬದಲಾಗಿ ಜಗತ್ತನ್ನೇ ಬೆಚ್ಚಿ ಬೀಳಿಸಿರುವ ಕೋವಿಡ್ 19 ವಿರುದ್ಧದ ಘೋಷಣೆ. ಕೋವಿಡ್ 19 ಜಗತ್ತಿನಾದ್ಯಂತ 27 ಸಾವಿರಕ್ಕೂ ಅಧಿಕ ಜೀವಗಳನ್ನು ಬಲಿ ಪಡೆದಿದೆ. ಇನ್ನೂ ಸಾವಿನ ಸಂಖ್ಯೆ ಏರುತ್ತಲೇ ಇದೆ. ಇತರ ದೇಶಗಳಿಗೆ ಹೋಲಿಸಿದರೆ ಚೀನ ಮತ್ತು ದ. ಕೊರಿಯಾದಲ್ಲಿ ಹರಡುವಿಕೆಯ ಪ್ರಮಾಣ ಕಡಿಮೆಯಾಗಿದೆ. ಈ ಮಧ್ಯೆ ಪುಟಿನ್ ಪುಟಿದೆದ್ದಿದ್ದಾರೆ.
ಪುಟಿನ್ ಹೇಳಿದ್ದೇನು?
ಸುದ್ದಿ ಸಂಸ್ಥೆ ಕ್ಸಿನುವಾ, ಈ ಸಾಂಕ್ರಾಮಿಕ ರೋಗವನ್ನು ಕೊನೆಗೊಳಿಸುವ ಸಾಮರ್ಥ್ಯ ರಷ್ಯಾಕ್ಕೆ ಇದೆ. ಎರಡು ಅಥವಾ ಮೂರು ತಿಂಗಳಲ್ಲಿ ರಷ್ಯಾವು ಕೋವಿಡ್ 19 ವೈರಸ್ ವಿರುದ್ಧದ ಸಮರದಲ್ಲಿ ಜಯಿಸಲಿದೆ ಎಂದು ಪುಟಿನ್ ಹೇಳಿರುವುದಾಗಿ ವರದಿ ಮಾಡಿದೆ.
ಶುಕ್ರವಾರವಷ್ಟೇ ನೊಬೆಲ್ ಪ್ರಶಸ್ತಿ ವಿಜೇತ ಮತ್ತು ಸ್ಟ್ಯಾನ್ಫೋರ್ಡ್ ಜೈವಿಕ ಭೌತಶಾಸ್ತ್ರಜ್ಞ ಮೈಕೆಲ್ ಲೆವಿಟ್ ಅವರು ಕೋವಿಡ್ 19 ಕೆಲವೇ ದಿನಗಳ ಅತಿಥಿ ಎಂದು ಹೇಳಿರುವುದನ್ನು ನಾವಿಲ್ಲಿ ಸ್ಮರಿಸಬಹುದು. ಮೈಕೆಲ್ 2013ರಲ್ಲಿ ರಸಾಯನಶಾಸ್ತ್ರ ಕ್ಷೇತ್ರದಲ್ಲಿ ನೊಬೆಲ್ ಪ್ರಶಸ್ತಿ ಪಡೆದರು. ಇತ್ತೀಚಿನ ಮಾಹಿತಿಯ ಪ್ರಕಾರ, ರಷ್ಯಾದಲ್ಲಿ ಸೋಂಕಿತರ ಸಂಖ್ಯೆ 840ಕ್ಕೆ ತಲುಪಿದೆ. ಇದರಲ್ಲಿ ಮಾಸ್ಕೋದಲ್ಲಿ ಅತೀ ಹೆಚ್ಚಿನ ಸಂಖ್ಯೆಯಲ್ಲಿ ಜನರು ಸೇರಿದ್ದಾರೆ. ಈವರೆಗೆ 38 ಜನರು ಚೇತರಿಸಿಕೊಂಡಿದ್ದು, ಇಬ್ಬರು ಬಲಿಯಾಗಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Baltimore bridge: ಬಾಲ್ಟಿಮೋರ್ ಸೇತುವೆ ಕುಸಿತ: ಇಬ್ಬರ ಮೃತದೇಹ ಹೊರತೆಗೆದ ರಕ್ಷಣಾ ತಂಡ
America: ಕಾನೂನು ಸಮರದಲ್ಲಿ ಹೈರಾಣ-ಹಣ ಸಂಗ್ರಹಕ್ಕಾಗಿ ಟ್ರಂಪ್ ಬೈಬಲ್ ಮಾರಾಟ!
Baltimore bridge collapse; ಆರು ಕಾರ್ಮಿಕರು ನಾಪತ್ತೆ: ಪತ್ತೆ ಕಾರ್ಯ ಸ್ಥಗಿತ
Anjali Chakra – Sufi Malik; ಮದುವೆಗೂ ಮುನ್ನ ಭಾರತ-ಪಾಕ್ ಸಲಿಂಗಿ ಜೋಡಿ ಬ್ರೇಕಪ್!
H5N1: ವಿಯೆಟ್ನಾಂನಲ್ಲಿ ಹಕ್ಕಿಜ್ವರಕ್ಕೆ ಮೊದಲ ಬಲಿ!
MUST WATCH
ಹೊಸ ಸೇರ್ಪಡೆ
Australia; ಕೇಂದ್ರೀಯ ಗುತ್ತಿಗೆ ಪಟ್ಟಿ: ವಾರ್ನರ್, ಸ್ಟೋಯಿನಿಸ್, ಅಗರ್ ಹೊರಕ್ಕೆ
ACA ವಿರುದ್ಧ ಹೇಳಿಕೆ: ಕ್ರಿಕೆಟಿಗ ಹನುಮ ವಿಹಾರಿಗೆ ನೋಟಿಸ್
Rajasthan Royals; ಪ್ರಸಿದ್ಧ್ ಕೃಷ್ಣ ಬದಲಿಗೆ ಕೇಶವ ಮಹಾರಾಜ್
Uttara Kannada ಸಮುದ್ರದಲ್ಲಿ ಮತ್ತೆ ಜೆಲ್ಲಿಫಿಶ್ಗಳು: ಪ್ರವಾಸಿಗರಿಗೆ ಭಯ
IPL ;ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 12 ರನ್ಗಳ ಜಯ