7 ಕೋಟಿ ರೂ. ಮೌಲ್ಯದ ಚಿತ್ರಕ್ಕೇ ಕಣ್ಣು ಬರೆದು ಎಡವಟ್ಟು!
Team Udayavani, Feb 12, 2022, 10:30 PM IST
ಮಾಸ್ಕೋ: ಕೆಲಸ ಮಾಡುವಾಗ ಬೋರ್ ಆಯಿತೆಂದು ಸೆಕ್ಯುರಿಟಿ ಗಾರ್ಡ್ವೊಬ್ಬರು ಮಾಡಿದ ಕೆಲಸ ಇದೀಗ ವಿಶ್ವದಲ್ಲೇ ಸುದ್ದಿಯಲ್ಲಿದೆ.
ಆತ ಮಾಡಿದ್ದು ಬೇರೇನೂ ಅಲ್ಲ, ನಾಲ್ಕು ಕಣ್ಣು ಬರೆದಿದ್ದಷ್ಟೇ! ರಷ್ಯಾದಲ್ಲಿ ಇತ್ತೀಚೆಗೆ ನಡೆದ ಚಿತ್ರಕಲಾ ಪ್ರದರ್ಶನದ ವೇಳೆ 60 ವರ್ಷ ವಯಸ್ಸಿನ ವ್ಯಕ್ತಿ ಸೆಕ್ಯುರಿಟಿ ಗಾರ್ಡ್ ಆಗಿ ಕೆಲಸ ಮಾಡುತ್ತಿದ್ದರು. ಅಲ್ಲಿದ್ದ 3 ಮನುಷ್ಯರ ಕಲಾಕೃತಿಯಲ್ಲಿ ಕಣ್ಣು, ಮೂಗು ಏನೂ ಇಲ್ಲದಿರುವುದನ್ನು ಕಂಡು ತಾವೇ ಎರಡು ಮನುಷ್ಯರ ಚಿತ್ರಕ್ಕೆ ಬಾಲ್ ಪಾಯಿಂಟ್ ಪೆನ್ನಿನಲ್ಲಿ ಕಣ್ಣುಗಳನ್ನು ಬರೆದಿದ್ದರು.
ಇಲ್ಲೇ ಆದದ್ದು ಎಡವಟ್ಟು! ಆ ಕಲಾಕೃತಿಗಳು ಅನ್ನಾ ಲಿಪೊರ್ಸ್ಸ್ಕಾಯ ಬರೆದಿದ್ದ “ತ್ರಿ ಫಿಗರ್’ ಥೀಮ್ನದ್ದಾಗಿದ್ದು, ಮಾಸ್ಕೋದಿಂದ ಬಾಡಿಗೆಗೆ ತರಲಾಗಿತ್ತು. ಅದರ ಮೌಲ್ಯ ಬರೋಬ್ಬರಿ 7 ಕೋಟಿ ರೂ.! ಈಗ ಕಲಾಕೃತಿಯನ್ನು ಹಾಳುಮಾಡಿದ ಆರೋಪದಲ್ಲಿ ಆ ಸೆಕ್ಯುರಿಟಿ ಗಾರ್ಡ್ ಅನ್ನು ಕೆಲಸದಿಂದ ವಜಾ ಮಾಡಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Jamie Dimon: ಮೋದಿ ಆರ್ಥಿಕ ನೀತಿ ಅದ್ಭುತ, ಅಮೆರಿಕದಲ್ಲೂ ಜಾರಿ ಮಾಡಿ: ಜೇಮಿ
Sunita Williams: ಮೇ 6ರಂದು 3ನೇ ಬಾರಿಗೆ ಸುನಿತಾ ವಿಲಿಯಮ್ಸ್ ಗಗನ ಯಾತ್ರೆ
Thailandನಲ್ಲಿ ಗುಜರಿ ಮಾಫಿಯಾದ ಕಿಂಗ್ ಪಿನ್ ರವಿ ಕಾನಾ, ಪ್ರಿಯತಮೆ ಕಾಜಲ್ ಜಾ ಬಂಧನ
ತಂಗಿಯ ಸಮಾಧಿ ಸ್ಥಳಕ್ಕೆ ಭೇಟಿ ನೀಡುವುದನ್ನು ವ್ಲಾಗ್ ವಿಡಿಯೋ ಮಾಡಿದ ಯೂಟ್ಯೂಬರ್: ಆಕ್ರೋಶ
Kyrgyzstan; ಹೆಪ್ಪುಗಟ್ಟಿದ ಜಲಪಾತದಲ್ಲಿ ಸಿಲುಕಿ ಆಂಧ್ರದ ವಿದ್ಯಾರ್ಥಿ ಸಾವು
MUST WATCH
ಹೊಸ ಸೇರ್ಪಡೆ
Lok Sabha Election: ಮೋದಿಗೆ ಮತ ಕೇಳುವ ಹಕ್ಕಿಲ್ಲ: ಸಿದ್ದರಾಮಯ್ಯ
Heart beats; ಭಾರತದ ಹೃದಯ ಪಾಕಿಸ್ಥಾನದ ಯುವತಿಗೆ ಹೊಸ ಜೀವನ ನೀಡಿತು..
T20 World Cup; ಯಾರಿಲ್ಲ.. ಯಾರಿಲ್ಲ.. ವಿಶ್ವಕಪ್ ಗೆ ವೇಗದ ಬೌಲರ್ ಗಳು ಯಾರೆಲ್ಲಾ?
ನರಗುಂದ: ಸಮಾಜದಲ್ಲಿ ದೇವಸ್ಥಾನಗಳು ಭಕ್ತಿಯ ಸಂಗಮ- ಶಾಂತಲಿಂಗ ಸ್ವಾಮೀಜಿ
ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಹಕ್ಕು ಹೊಂದಿಲ್ಲ