Udayavni Special

ರಷ್ಯಾದ Covid-19 ಲಸಿಕೆ ಫೇಕ್ ? ಸುರಕ್ಷೆಯ ಕುರಿತು ಬಹುದೊಡ್ಡ ಪ್ರಶ್ನೆ

ಲಸಿಕೆಯ ಕುರಿತು ಸ್ಪಷ್ಟನೆ ನೀಡಿರುವ ರಷ್ಯಾ ಯಾವುದೇ ಅಡ್ಡಪರಿಣಾಮಗಳಿಲ್ಲ ಎಂದಿದೆ. ಆದರೆ ಪರೀಕ್ಷೆ ನಡೆಸಲಾದ 38 ಜನರಲ್ಲಿ 144 ರೀತಿಯ ಅಡ್ಡಪರಿಣಾಮಗಳು ಕಂಡುಬಂದಿವೆ. ಪರೀಕ್ಷೆ ಏರ್ಪಟ್ಟ 42ನೇ ದಿನದಂದು 38ಮಂದಿಯಲ್ಲಿ ಇವುಗಳ ಈ ಅಡ್ಡಪರಿಣಾಮಗಳು ಕಾಣಿಸಿಕೊಂಡಿದ್ದವು.

Team Udayavani, Aug 13, 2020, 6:36 PM IST

Covid

ಸಾಂದರ್ಭಿಕ ಚಿತ್ರವನ್ನು ಬಳಸಲಾಗಿದೆ – Representative Image Used

ಮಣಿಪಾಲ: ರಷ್ಯಾದ ಲಸಿಕೆ ಸ್ಫುಟ್ನಿಕ್‌-ವಿ ಅನ್ನು ಜಗತ್ತಿನಾದ್ಯಂತ ಪ್ರಶ್ನಿಸಲಾಗುತ್ತಿದೆ.

ಆಗಸ್ಟ್‌ 11ರಂದು ವಿಶ್ವದ ಮೊದಲ ಕೋವಿಡ್‌-19 ಲಸಿಕೆ ನೋಂದಣಿಯ ಸಂದರ್ಭದಲ್ಲಿ ನೀಡಲಾದ ದಾಖಲೆಗಳೇ ಈಗ ಅನೇಕ ಅನುಮಾನಗಳು ಕಾರಣವಾಗಿವೆ.

ಲಸಿಕೆ ಎಷ್ಟು ಸುರಕ್ಷಿತವಾಗಿದೆ ಎಂದು ತಿಳಿಯಲು ಸಂಪೂರ್ಣ ಕ್ಲಿನಿಕಲ್‌ ಅಧ್ಯಯನ ನಡೆದಿಲ್ಲ ಎಂದು ತಜ್ಞರು ಆತಂಕ ವ್ಯಕ್ತಪಡಿಸಿದ್ದಾರೆ.

ಡೈಲಿ ಮೇಲ್‌ನ ಸುದ್ದಿಯನ್ನು ಆಧರಿಸಿ ವರದಿ ಮಾಡಿರುವ ಹಲವು ಮಾಧ್ಯಮಗಳು ಇದರ ಕುರಿತು ಸ್ಪಷ್ಟವಾದ ಚಿತ್ರಣ ಇಲ್ಲ ಎಂದು ಹೇಳಿದೆ. ಕೇವಲ 38 ಜನರಿಗೆ ಲಸಿಕೆಯ ಟ್ರಯಲ್‌ ನೀಡಲಾಗಿದೆ. ಆದರೆ ಟ್ರಯಲ್‌ನ ಮುಂದಿನ ಫ‌ಲಿತಾಂಶಗಳ ಕುರಿತು ಯಾವುದೇ ಮಾಹಿತಿ ಬಹಿರಂಗಗೊಂಡಿಲ್ಲ.

ಆದರೆ ಲಸಿಕೆಯ ಕುರಿತು ಸ್ಪಷ್ಟನೆ ನೀಡಿರುವ ರಷ್ಯಾ ಯಾವುದೇ ಅಡ್ಡಪರಿಣಾಮಗಳಿಲ್ಲ ಎಂದಿದೆ. ಆದರೆ ಪರೀಕ್ಷೆ ನಡೆಸಲಾದ 38 ಜನರಲ್ಲಿ 144 ರೀತಿಯ ಅಡ್ಡಪರಿಣಾಮಗಳು ಕಂಡುಬಂದಿವೆ ಎಂದು ವರದಿಯೊಂದು ಹೇಳಿದೆ. ಪರೀಕ್ಷೆ ಏರ್ಪಟ್ಟ 42ನೇ ದಿನದಂದು 38ಮಂದಿಯಲ್ಲಿ ಇವುಗಳ ಈ ಅಡ್ಡಪರಿಣಾಮಗಳು ಕಾಣಿಸಿಕೊಂಡಿದ್ದವು. ಈ ಹೊಸ ಡೋಸ್‌ ತೆಗೆದುಕೊಂಡ ಬಳಿಕ ಅನೇಕ ಸಮಸ್ಯೆಗಳಿದ್ದವು. ಇದನ್ನು ಡಬ್ಲ್ಯುಎಚ್‌ಒ ಕಳೆದ ಕೆಲವು ದಿನಗಳಿಂದ ಪ್ರಶ್ನಿಸುತ್ತಾ ಬಂದಿದೆ.

ಲಸಿಕೆಗಾಗಿ ನಿಗದಿಪಡಿಸಿದ ಮಾರ್ಗಸೂಚಿಗಳನ್ನು ರಷ್ಯಾ ಅನುಸರಿಸಲಿಲ್ಲ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ. ಆದ್ದರಿಂದ ಈ ಲಸಿಕೆ ಸರಿಯಾಗಿ ಕೆಲಸ ನಿರ್ವಹಿಸುವುದನ್ನು ನಂಬುವುದು ಕಷ್ಟ ಎಂದು ವಿಶ್ವಸಂಸ್ಥೆ ಸ್ಪಷ್ಟವಾಗಿ ಹೇಳಿದೆ.

ಸರಕಾರ ಹೇಳುವುದೇನು?
ರಷ್ಯಾದ ರಕ್ಷಣಾ ಸಚಿವಾಲಯದ ಪ್ರಕಾರ, ಲಸಿಕೆ ಪ್ರಯೋಗದ ಫ‌ಲಿತಾಂಶಗಳು ಉತ್ತಮ ರೋಗನಿರೋಧಕ ಶಕ್ತಿಯನ್ನು ಸಾಭೀತುಪಡಿಸಿವೆ. ಯಾವುದೇ ಸ್ವಯಂಸೇವಕರಲ್ಲಿ ನಕಾರಾತ್ಮಕ ಅಡ್ಡಪರಿಣಾಮಗಳು ಕಂಡುಬಂದಿಲ್ಲ ಎಂದು ಹೇಳಿತ್ತು. ಆದರೆ, ಲಸಿಕೆ ನೀಡಿದ ಸ್ವಯಂಸೇವಕರಿಗೆ ಜ್ವರ, ದೇಹದ ನೋವು, ದೇಹದ ಉಷ್ಣತೆ ಹೆಚ್ಚಾಗುವುದು, ಚುಚ್ಚುಮದ್ದಿನ ಸ್ಥಳದಲ್ಲಿ ತುರಿಕೆ, ಊತ ಮೊದಲಾದ ಅಡ್ಡಪರಿಣಾಮಗಳು ಕಂಡುಬಂದಿವೆಯಂತೆ. ಇಷ್ಟು ಮಾತ್ರವಲ್ಲದೇ ದೇಹದಲ್ಲಿನ ಶಕ್ತಿಯ ನಷ್ಟವಾಗಿದ್ದು, ನಿತ್ರಾಣಗಳು ಹೆಚ್ಚಾಗಿವೆ. ಹಸಿವು ಕಡಿಮೆಯಾಗಿದ್ದು, ತಲೆನೋವು, ಅತಿಸಾರ, ನೋಯುತ್ತಿರುವ ಗಂಟಲು, ಶೀತ ಮೊದಲಾದಅಡ್ಡಪರಿಣಾಮಗಳು ಸಾಮಾನ್ಯವಾಗಿವೆ.

ಲಸಿಕೆಯನ್ನು ಮೊದಲು ರಷ್ಯಾ ಅಧ್ಯಕ್ಷ ಪುಟಿನ್‌ ಮಗಳಿಗೆ ನೀಡಿದಾಗ, ದೇಹದ ಉಷ್ಣತೆಯಲ್ಲಿ ಬದಲಾವಣೆಗಳು ಕಂಡಿವೆಯಂತೆ. ಮೊದಲು ಒಂದು ಡಿಗ್ರಿ ಹೆಚ್ಚಾಗಿದ್ದು, ಅನಂತರ ಕಡಿಮೆಯಾಗಿತ್ತು. ಆದರೆ ನನ್ನ ಮಗಳ ದೇಹದಲ್ಲಿ ಪ್ರತಿಕಾಯಗಳ ಪ್ರಮಾನ ಹೆಚ್ಚಿವೆ ಎಂದು ಅಧ್ಯಕ್ಷ ಪುಟಿನ್‌ ಹೇಳಿದ್ದಾರೆ.

ಲಸಿಕೆ ಪ್ರಯೋಗಗಳಿಗೆ ಸಂಬಂಧಿಸಿದ ವೈಜ್ಞಾನಿಕ ಮಾಹಿತಿಯನ್ನು ರಷ್ಯಾ ಇನ್ನೂ ಮಂಡಿಸಿಲ್ಲ. ಪರೀಕ್ಷೆಯ ಮೂರನೇ ಹಂತ ನಡೆದಿವೆಯೇ ಎಂಬ ಕುರಿತಾದ ಅನುಮಾನವೂ ಇದೆ. ಲಸಿಕೆಯ ಮೂರನೇ ಹಂತದ ಪ್ರಯೋಗವಿಲ್ಲದೆ ಉತ್ಪಾದನೆಗೆ ಪರವಾನಗಿ ನೀಡಿದರೆ ಅದನ್ನು ಅಪಾಯಕಾರಿ ಎಂದು ಪರಿಗಣಿಸಲಾಗುತ್ತದೆ ಎಂದು ಅಲ್ಲಿನ ವಿಜ್ಞಾನಿಗಳು ಆತಂಕ ವ್ಯಕ್ತಪಡಿಸಿದ್ದಾರೆ. ಈ ಎಲ್ಲ ಪ್ರಯೋಗಗಳು ಕೇವಲ 42 ದಿನಗಳಲ್ಲಿ ಪೂರ್ಣಗೊಂಡಿವೆ ಎಂದು ಅಲ್ಲಿನ ದಾಖಲೆಗಳು ಹೇಳುತ್ತವೆ.

ಎಲ್ಲ ಮಾಹಿತಿ ಮುಚ್ಚಿಟ್ಟ ರಷ್ಯಾ
ಜಗತ್ತಿನಲ್ಲಿ ಯಾವುದೇ ಮೂಲೆಯಲ್ಲಿ ಇಂತಹ ತುರ್ತು ಆರೋಗ್ಯದ ಸಂದರ್ಭ ಲಸಿಕೆ ಪ್ರಯೋಗಗಳು ನಡೆದಾಗ ಅದರ ಮಾಹಿತಿಯನ್ನು ಹಂಚಿಕೊಳ್ಳಲಾಗುತ್ತದೆ. ಪ್ರತಿಯೊಂದು ಮಾಹಿತಿಯನ್ನು ಡಬ್ಲ್ಯುಎಚ್‌ಒಗೆ ನೀಡಲಾಗುತ್ತದೆ.ಆದರೆ ರಷ್ಯಾ ಆ ರೀತಿ ಮಾಡಿಲ್ಲ. ಇದಕ್ಕೆ ಸಂಬಂಧಿಸಿದ ಮಾಹಿತಿಯನ್ನು ಹೇಳಿಕೆಗಳಲ್ಲಿ ಮಾತ್ರ ಬಹಿರಂಗಪಡಿಸಲಾಗಿದೆ.

ವಿಶ್ವ ಸಂಸ್ಥೆ ಹೇಳಿದ್ದೇನು?
ಇದನ್ನು ಸೈಂಟಿಫಿಕ್‌ ಜರ್ನಲ್‌ ಅಥವಾ ಡಬ್ಲ್ಯುಎಚ್‌ಒ ಜತೆ ಹಂಚಿಕೊಳ್ಳಲಾಗಿಲ್ಲ. ಲಸಿಕೆ ತಯಾರಿಸಲು ರಷ್ಯಾ ಮಾರ್ಗಸೂಚಿಗಳನ್ನು ಅನುಸರಿಸಿಲ್ಲ ಎಂದು ಡಬ್ಲ್ಯುಎಚ್‌ಒ ಹೇಳಿದೆ. ಆದ್ದರಿಂದ ಈ ಲಸಿಕೆಯ ಯಶಸ್ಸು ಮತ್ತು ಸುರಕ್ಷತೆಯನ್ನು ನಂಬುವುದು ಕಷ್ಟ. ಲಸಿಕೆ ಉತ್ಪಾದನೆಗೆ ಹಲವು ಮಾರ್ಗಸೂಚಿಗಳನ್ನು ಮಾಡಲಾಗಿದೆ. ಇದನ್ನು ಇತರ ದೇಶಗಳು ಮಾಡುತ್ತಿವೆ. ರಷ್ಯಾವೂ ಅದನ್ನು ಅನುಸರಿಸಬೇಕು.

 

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

Capitals-01

ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಸೋತ ಚೆನ್ನೈ ಸೂಪರ್ ಕಿಂಗ್ಸ್

ಬೀದರ್ ಜಿಲ್ಲೆಯಲ್ಲಿ ಕೋವಿಡ್ ಸೋಂಕಿಗೆ ಇಬ್ಬರ ಸಾವು, 44 ಹೊಸ ಪ್ರಕರಣ  ಪತ್ತೆ

ಬೀದರ್ ಜಿಲ್ಲೆಯಲ್ಲಿ ಕೋವಿಡ್ ಸೋಂಕಿಗೆ ಇಬ್ಬರ ಸಾವು, 44 ಹೊಸ ಪ್ರಕರಣ ಪತ್ತೆ

ಹಾವೇರಿ ಜಿಲ್ಲೆಯಲ್ಲಿ 148 ಜನರಿಗೆ ಸೋಂಕು; ಓರ್ವ ಸಾವು

ಹಾವೇರಿ ಜಿಲ್ಲೆಯಲ್ಲಿ 148 ಜನರಿಗೆ ಸೋಂಕು; ಓರ್ವ ಸಾವು

ಪೃಥ್ವಿ ಶಾ ಅರ್ಧ ಶತಕ: ಚೆನೈಗೆ ಗೆಲುವಿಗೆ 176 ರನ್ ಗಳ ಗುರಿ 

ಪೃಥ್ವಿ ಶಾ ಅರ್ಧ ಶತಕದಾಟ: ಚೆನೈಗೆ ಗೆಲುವಿಗೆ 176 ರನ್ ಗಳ ಗುರಿ! 

ಡ್ರಗ್ಸ್‌ ಪ್ರಕರಣ : ನಾಳೆಯಾದರೂ ಸಿಸಿಬಿ ಪೋಲೀಸರ ವಿಚಾರಣೆಗೆ ಹಾಜರಾಗಲಿದ್ದಾರೆಯೇ ಅನುಶ್ರೀ

ಡ್ರಗ್ಸ್‌ ಪ್ರಕರಣ : ನಾಳೆಯಾದರೂ ಸಿಸಿಬಿ ಪೋಲೀಸರ ವಿಚಾರಣೆಗೆ ಹಾಜರಾಗಲಿದ್ದಾರೆಯೇ ಅನುಶ್ರೀ?

ಮೂಡುಬಿದಿರೆ : ವಾಲ್ಪಾಡಿ ಪಂಚಾಯತ್ ಕಟ್ಟಡಕ್ಕೆ ಬೆಂಕಿ ಅಪಾರ ನಷ್ಟ

ಮೂಡುಬಿದಿರೆ : ವಾಲ್ಪಾಡಿ ಪಂಚಾಯತ್ ಕಟ್ಟಡಕ್ಕೆ ಬೆಂಕಿ ಅಪಾರ ನಷ್ಟ

instagram

ಎಚ್ಚರ…ನಿಮ್ಮ Insta ಅಕೌಂಟ್ ಹ್ಯಾಕ್ ಆಗಬಹುದು ! ಹೇಗಂತೀರಾ ? ಇದನ್ನು ಓದಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಶೀಘ್ರ ವಿಕಿಪೀಡಿಯಾ ಬದಲು: ಹೊಸ ಡಿಸೈನ್ ನಲ್ಲಿ ಬರಲಿದೆ ವಿಕಿಪೀಡಿಯಾ

ಶೀಘ್ರ ವಿಕಿಪೀಡಿಯಾ ಬದಲು: ಹೊಸ ಡಿಸೈನ್ ನಲ್ಲಿ ಬರಲಿದೆ ವಿಕಿಪೀಡಿಯಾ

ಲಡಾಖ್‌ಗೆ ಹೊರಡಲು ಚೀನೀ ಸೈನಿಕರ ಅಳುಕು: ಸಾಮಾಜಿಕ ಜಾಲತಾಣಗಳಲ್ಲಿ ವೀಡಿಯೋ ವೈರಲ್‌

ಲಡಾಖ್‌ಗೆ ಹೊರಡಲು ಚೀನೀ ಸೈನಿಕರ ಅಳುಕು: ಸಾಮಾಜಿಕ ಜಾಲತಾಣಗಳಲ್ಲಿ ವೀಡಿಯೋ ವೈರಲ್‌

ವಿಶ್ವ ವಿಖ್ಯಾತ ಐಫೆಲ್ ಟವರ್ ಗೆ ಬಾಂಬ್ ಬೆದರಿಕೆ

ವಿಶ್ವ ವಿಖ್ಯಾತ ಐಫೆಲ್ ಟವರ್ ಗೆ ಬಾಂಬ್ ಬೆದರಿಕೆ

rbi 5

2 ವರ್ಷಗಳ ವರೆಗೆ ಇಎಂಐ ವಿನಾಯಿತಿ; ಸಾಧಕ ಬಾಧಕಗಳೇನು? ಇಲ್ಲಿದೆ ಕಂಪ್ಲೀಟ್‌ ಡಿಟೇಲ್ಸ್‌

ಏನಿದು: ಪಾಕಿಸ್ತಾನ ವಿರೋಧ ಪಕ್ಷಗಳ ಮುಖಂಡರ ಜತೆ ಐಎಸ್ ಐ, ಮಿಲಿಟರಿ ಚೀಫ್ ರಹಸ್ಯ ಸಭೆ

ಏನಿದು: ಪಾಕಿಸ್ತಾನ ವಿರೋಧ ಪಕ್ಷಗಳ ಮುಖಂಡರ ಜತೆ ಐಎಸ್ ಐ, ಮಿಲಿಟರಿ ಚೀಫ್ ರಹಸ್ಯ ಸಭೆ!

MUST WATCH

udayavani youtube

Padma Shri SPB: A journey of Legendary Singer | S P Balasubrahmanyam

udayavani youtube

ತೋಟದ ನಡುವೆ ಸಾಗುವ ಮಿನಿ ಟಿಪ್ಪರ್ ಆವಿಷ್ಕಾರ ಮಾಡಿದ ಪಾಲ್ತಾಡಿಯ ಯುವಕ

udayavani youtube

Udupi Krishna temple to be open for public from September 28 | Udayavani

udayavani youtube

ಕೋವಿಡ್ ‌ಕಾಲದಲ್ಲಿ ರಸ್ತೆ ರಾಜಕಾರಣ: ಪ್ರತಿಕ್ರಿಯಿಸಿದ ಸಂತ ಅಲೋಶಿಯಸ್ ಸಂಸ್ಥೆ

udayavani youtube

ಮಂಗಳೂರು ನಗರದ ಲೈಟ್ ಹೌಸ್ ರೋಡ್ ಗೆ ‘ಮುಲ್ಕಿ ಸುಂದರರಾಮ ಶೆಟ್ಟಿ ರಸ್ತೆ’ ಎಂದು ಮರುನಾಮಕರಣಹೊಸ ಸೇರ್ಪಡೆ

Capitals-01

ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಸೋತ ಚೆನ್ನೈ ಸೂಪರ್ ಕಿಂಗ್ಸ್

63

ಹೆಣ್ಣೊಬ್ಬಳ ಕಾನೂನು ಹೋರಾಟದ ಕಥನ ಲಾ

ಬೀದರ್ ಜಿಲ್ಲೆಯಲ್ಲಿ ಕೋವಿಡ್ ಸೋಂಕಿಗೆ ಇಬ್ಬರ ಸಾವು, 44 ಹೊಸ ಪ್ರಕರಣ  ಪತ್ತೆ

ಬೀದರ್ ಜಿಲ್ಲೆಯಲ್ಲಿ ಕೋವಿಡ್ ಸೋಂಕಿಗೆ ಇಬ್ಬರ ಸಾವು, 44 ಹೊಸ ಪ್ರಕರಣ ಪತ್ತೆ

ಹಾವೇರಿ ಜಿಲ್ಲೆಯಲ್ಲಿ 148 ಜನರಿಗೆ ಸೋಂಕು; ಓರ್ವ ಸಾವು

ಹಾವೇರಿ ಜಿಲ್ಲೆಯಲ್ಲಿ 148 ಜನರಿಗೆ ಸೋಂಕು; ಓರ್ವ ಸಾವು

book talk 8

ಸಂಧ್ಯಾರಾಗದೊಳಗೆ ತಾಳ್ಮೆಯ ಗೆಲುವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.