ಅಕ್ಕಿ, ಸಲ್ಲುಗೆ ಹೆಚ್ಚು ಸಂಭಾವನೆ
Team Udayavani, Jul 18, 2018, 8:40 AM IST
ನ್ಯೂಯಾರ್ಕ್: ವಿಶ್ವದಲ್ಲೇ ಅತಿ ಹೆಚ್ಚು ಸಂಭಾವನೆ ಪಡೆಯುತ್ತಿರುವ 100 ಮಂದಿ ಸೆಲೆಬ್ರಿಟಿಗಳ ಪಟ್ಟಿಯಲ್ಲಿ ಹೆಸರು ಗಿಟ್ಟಿಸಿಕೊಳ್ಳುವಲ್ಲಿ ಬಾಲಿವುಡ್ ನಟರಾದ ಅಕ್ಷಯ್ ಕುಮಾರ್ ಮತ್ತು ಸಲ್ಮಾನ್ ಖಾನ್ ಯಶಸ್ವಿಯಾಗಿದ್ದಾರೆ. ಆದರೆ, ಪ್ರತಿ ಬಾರಿ ಫೋರ್ಬ್ಸ್ ಪಟ್ಟಿಯಲ್ಲಿ ಸ್ಥಾನ ಪಡೆಯುತ್ತಿದ್ದ ಮತ್ತೂಬ್ಬ ನಟ ಶಾರುಖ್ ಖಾನ್ ಈ ಬಾರಿ ವಿಫಲರಾಗಿದ್ದಾರೆ.
ವಿಶ್ವದಲ್ಲೇ ಅತಿ ಹೆಚ್ಚು ಆದಾಯ ಗಳಿಸುತ್ತಿರುವ ಸೆಲೆಬ್ರಿಟಿ ಎಂಬ ಖ್ಯಾತಿಗೆ ಫ್ಲಾಯ್ಡ ಮೇವೆದರ್ (1951 ಕೋಟಿ ರೂ.) ಪಾತ್ರರಾಗಿದ್ದಾರೆ. ಪ್ರಸಕ್ತ ವರ್ಷ 277 ಕೋಟಿ ರೂ. ಸಂಭಾವನೆ ಪಡೆಯುವ ಮೂಲಕ ನಟ ಅಕ್ಷಯ್ ಕುಮಾರ್ 76ನೇ ಸ್ಥಾನ ಪಡೆದರೆ, 257 ಕೋಟಿ ರೂ. ಸಂಭಾವನೆ ಮೂಲಕ ಸಲ್ಮಾನ್ 82ನೇ ಸ್ಥಾನ ಪಡೆದುಕೊಂಡಿದ್ದಾರೆ. ಇನ್ನು ಈ ಬಾರಿ ಸ್ಥಾನ ಪಡೆಯದ ಶಾರುಖ್, 2017ರ ಪಟ್ಟಿಯಲ್ಲಿ 260 ಕೋಟಿ ರೂ. ಸಂಭಾವನೆ ಪಡೆದು 65ನೇ ಸ್ಥಾನವನ್ನು ಪಡೆದಿದ್ದರು.
ಸಲ್ಮಾನ್ ಖಾನ್ : 257ಕೋಟಿ ರೂ.
ಅಕ್ಷಯ್ ಕುಮಾರ್ : 277ಕೋಟಿ ರೂ.
ಟಾಪ್ 5 ಸೆಲೆಬ್ರಿಟಿಗಳು
ಫ್ಲಾಯ್ಡ ಮೇವೆದರ್ : 1951ಕೋಟಿ ರೂ.
ಜಾರ್ಜ್ ಕ್ಲೂನೆ : 1636ಕೋಟಿ ರೂ.
ಕೈಲಿ ಜೆನ್ನರ್ : 1139ಕೋಟಿ ರೂ.
ಜ್ಯೂಡಿ ಶೆಂಡ್ಲಿನ್ : 1006 ಕೋಟಿ ರೂ.
ವೇನ್ ಜಾನ್ಸನ್ : 848ಕೋಟಿ ರೂ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Jamie Dimon: ಮೋದಿ ಆರ್ಥಿಕ ನೀತಿ ಅದ್ಭುತ, ಅಮೆರಿಕದಲ್ಲೂ ಜಾರಿ ಮಾಡಿ: ಜೇಮಿ
Sunita Williams: ಮೇ 6ರಂದು 3ನೇ ಬಾರಿಗೆ ಸುನಿತಾ ವಿಲಿಯಮ್ಸ್ ಗಗನ ಯಾತ್ರೆ
Thailandನಲ್ಲಿ ಗುಜರಿ ಮಾಫಿಯಾದ ಕಿಂಗ್ ಪಿನ್ ರವಿ ಕಾನಾ, ಪ್ರಿಯತಮೆ ಕಾಜಲ್ ಜಾ ಬಂಧನ
ತಂಗಿಯ ಸಮಾಧಿ ಸ್ಥಳಕ್ಕೆ ಭೇಟಿ ನೀಡುವುದನ್ನು ವ್ಲಾಗ್ ವಿಡಿಯೋ ಮಾಡಿದ ಯೂಟ್ಯೂಬರ್: ಆಕ್ರೋಶ
Kyrgyzstan; ಹೆಪ್ಪುಗಟ್ಟಿದ ಜಲಪಾತದಲ್ಲಿ ಸಿಲುಕಿ ಆಂಧ್ರದ ವಿದ್ಯಾರ್ಥಿ ಸಾವು