ಮರುಭೂಮಿಯಲ್ಲಿ ಮನೆ ಕಟ್ಟಲು ಸೌದಿ ಸಿದ್ಧತೆ!

Team Udayavani, Aug 8, 2017, 6:40 AM IST

flyer.jpg

ರಿಯಾದ್‌: ಅರ್ಧ ಶತಮಾನದಿಂದ ತೈಲ ರಫ್ತು ಮಾಡಿ ಗಳಿಸಿದ ಹಣವನ್ನೆಲ್ಲಾ ಮರುಭೂಮಿಗೆ ಸುರಿಯಲು ಸೌದಿ ಅರೇಬಿಯಾ ಸರಕಾರ ನಿರ್ಧರಿಸಿದೆ! ಅಂದರೆ, ಕಳೆದ 50 ವರ್ಷಗಳಿಂದ ತೈಲ ಸಂಪನ್ಮೂಲ ಒಂದನ್ನೇ ನೆಚ್ಚಿಕೊಂಡಿರುವ ಕೊಲ್ಲಿ ರಾಷ್ಟ್ರ, ಇದೀಗ ಮರುಭೂಮಿ ಯಲ್ಲಿ ನಗರ ಕಟ್ಟುವ ಕಾರ್ಯಕ್ಕೆ ನಾಂದಿ ಹಾಡಲಿದೆ.

ವಿಸ್ತೀರ್ಣದಲ್ಲಿ ಬೆಲ್ಜಿಯಂ ಹಾಗೂ ಮಾಸ್ಕೋ ನಗರ ಗಳಿಗಿಂತಲೂ ಹೆಚ್ಚು ವ್ಯಾಪ್ತಿ ಹೊಂದಿರುವ ಪ್ರದೇಶ ಗಳನ್ನು ಜಾಗತಿಕ ಪ್ರವಾಸೋದ್ಯಮ ತಾಣಗಳಾಗಿ ಪರಿ ವರ್ತಿಸುವ ಯೋಜನೆಯನ್ನು ವಾರದ ಹಿಂದಷ್ಟೇ ಸೌದಿ ಸರಕಾರ ಘೋಷಿಸಿತ್ತು. ಇದೀಗ “ಸೌದಿ ವಿಷನ್‌ 2030′ ಯೋಜನೆ ಭಾಗವಾಗಿ ಮರುಭೂಮಿಯಲ್ಲಿ ನಗರ ಕಟ್ಟಿ, ಅಲ್ಲಿ ಆರ್ಥಿಕ ವಲಯ, 63,800 ಕೋಟಿ ಮೌಲ್ಯದ ವಾಣಿಜ್ಯ ನಗರ, ಪ್ರವಾಸೋದ್ಯಮ ಮತ್ತು ಮನರಂಜನೆ ತಾಣಗಳನ್ನು ಸೃಷ್ಟಿಸಲು 84 ಪುಟಗಳ ನೀಲಿನಕ್ಷೆ ಸಿದ್ಧಪಡಿಸಿದೆ. ಸೌದಿಯ ಕೆಲವು ಮಹತ್ವಾಕಾಂಕ್ಷಿ ಯೋಜನೆಗಳ ಮಾಹಿತಿ ಇಲ್ಲಿದೆ.

ರೆಡ್‌ ಸೀ ಯೋಜನೆ
ರೆಡ್‌ ಸೀ ಕರಾವಳಿ ತೀರದ 50ಕ್ಕೂ ಹೆಚ್ಚು ದ್ವೀಪಗಳನ್ನು, 34,000 ಚ.ಕಿ.ಮೀ (ಬೆಲ್ಜಿಯಂಗಿಂತಲೂ ಹೆಚ್ಚು ವಿಸ್ತೀರ್ಣ) ಪ್ರದೇಶದಲ್ಲಿ ವಿಶ್ವವೇ ನಿಬ್ಬೆರಗಾಗಿ ನೋಡು ವಂಥ ಜಾಗತಿಕ ಪ್ರವಾಸೋದ್ಯಮ ತಾಣ ಸೃಷ್ಟಿಸುವ ಯೋಜನೆ. 2022ರ ಹೊತ್ತಿಗೆ ನಿರ್ಮಾಣ ಪೂರ್ಣಗೊಳ್ಳುವ ನಿರೀಕ್ಷೆಯಿದೆ.

ನಾಲೆಡ್ಜ್ ಇಕನಾಮಿಕ್‌ ಸಿಟಿ
ಮದೀನಾಗೆ ಹೊಂದಿಕೊಂಡಂತೆ ರೂಪುಗೊಳ್ಳುವ ಈ ನವ ನಗರ, ಸೌದಿಯ ಮೊಟ್ಟಮೊದಲ ಸ್ಮಾರ್ಟ್‌ ಸಿಟಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಲಿದೆ. ಬೌದ್ಧಿಕ ಸಂಪತ್ತು, ಜ್ಞಾನಾಧಾರಿತ ಉದ್ಯಮಗಳು, ವೈದ್ಯಕೀಯ, ಆತಿಥ್ಯ, ಪ್ರವಾಸೋದ್ಯಮ, ಮಲ್ಟಿ ಮೀಡಿಯಾ ಸೇರಿ ಹಲವು ಸ್ಮಾರ್ಟ್‌ ಅನ್ನಬಹುದಾದ ಅಂಶಗಳು ಇಲ್ಲಿರಲಿವೆ. ಇವುಗಳ  ಜೊತೆಗೇ “ಕಿಂಗ್‌ ಅಬ್ದುಲ್ಲಾ ಇಕನಾಮಿಕ್‌ ಸಿಟಿ’, “ಕಿಂಗ್‌ ಅಬ್ದುಲ್ಲಾ ಫೈನಾನ್ಷಿಯಲ್‌ ಡಿಸ್ಟ್ರಿಕ್ಟ್’, “ಪ್ರಿನ್ಸ್‌ ಅಬ್ದುಲ್ಲಾಝಿಸ್‌ ಬಿನ್‌ ಮೌಸಯೀದ್‌ ಇಕನಾಮಿಕ್‌ ಸಿಟಿ’ ಯೋಜನೆಗಳೂ “ಸೌದಿ ವಿಷನ್‌ 2030’ಯ ಭಾಗಗಳಾಗಿವೆ.

ಅಲ್‌ ಫೈಸಲಿಯಾ
ಮೆಕ್ಕಾದ ಪಶ್ಚಿಮ ಭಾಗಕ್ಕೆ ಹೊಂದಿಕೊಂಡಂತೆ ಅಲ್‌ ಫೈಸಲಿಯಾ ಯೋಜನೆ ಮೈದಳೆಯಲಿದೆ. 2,450 ಚದರ ಕಿ.ಮೀ. (ಮಾಸ್ಕೋ ನಗರದ ವಿಸ್ತೀರ್ಣದಷ್ಟು) ವ್ಯಾಪ್ತಿಯಲ್ಲಿ ರೂಪುಗೊಳ್ಳುವ ಈ ಯೋಜನೆ ಅಡಿ, ವಸತಿ ಕಟ್ಟಡಗಳು, ಮನರಂಜನಾ ಸೌಲಭ್ಯ, ಏರ್‌ಪೋರ್ಟ್‌ ಮತ್ತು ಸೀ ಪೋರ್ಟ್‌ಗಳ ಸೃಷ್ಟಿಯಾಗಲಿದೆ. ಈ ಯೋಜನೆ 2050ರ ಹೊತ್ತಿಗೆ ಪೂರ್ಣಗೊಳ್ಳಲಿದೆ. 

ಮನೋರಂಜನಾ ನಗರ
ಅಲ್‌ ಖೀದಿಯಾ ನಗರದಲ್ಲಿ ಕ್ರೀಡೆ, ಸಂಸ್ಕೃತಿ ಒಳಗೊಂಡಂತೆ ಮನೋರಂಜನಾ ಸಾಮ್ರಾಜ್ಯ ನಿರ್ಮಾಣವಾಗಲಿದೆ. 334 ಚದರ ಕಿ.ಮೀ ವ್ಯಾಪಿಸಲಿರುವ ಈ ಯೋಜನೆ ಅಡಿ ಸಫಾರಿ ಪ್ರದೇಶ ಹಾಗೂ ಸಿಕ್ಸ್‌ ಫ್ಲಾಗ್‌ ಎಂಟಟೈìನ್ಮೆಂಟ್‌ ಕಾರ್ಪ್‌ ಥೀಮ್‌ ಪಾರ್ಕ್‌ಗಳು ತಲೆಯೆತ್ತಲಿವೆ. 2018ರಲ್ಲಿ ಕಾಮಗಾರಿ ಆರಂಭಿಸಿ, 2022ರವೇಳೆಗೆ ಪೂರ್ಣಗೊಳಿಸುವ ಗುರಿ ಹೊಂದಲಾಗಿದೆ.
 
ಟಾಪ್ ನ್ಯೂಸ್

ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್‌ ಬ್ರಿಜೇಶ್‌ ಚೌಟ

ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್‌ ಬ್ರಿಜೇಶ್‌ ಚೌಟ

ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್‌ ಬೆಂಬಲಿಸಿ: ಪದ್ಮರಾಜ್‌ ಪೂಜಾರಿ

ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್‌ ಬೆಂಬಲಿಸಿ: ಪದ್ಮರಾಜ್‌ ಪೂಜಾರಿ

ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ

ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ

ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ

ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ

Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ

Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ

Veerappa Moily ಬಿಜೆಪಿ ವಿರುದ್ಧ ಅಸಮಾಧಾನ ಜ್ವಾಲಾಮುಖಿ ಸ್ಫೋಟ

Veerappa Moily ಬಿಜೆಪಿ ವಿರುದ್ಧ ಅಸಮಾಧಾನ ಜ್ವಾಲಾಮುಖಿ ಸ್ಫೋಟ

ಮತದಾರರ ಚೀಟಿಯಲ್ಲಿ ಕ್ಯುಆರ್‌ ಕೋಡ್‌! ಮಂಗಳೂರು ದಕ್ಷಿಣ-ಉತ್ತರದಲ್ಲಿ ಅನುಷ್ಠಾನ

ಮತದಾರರ ಚೀಟಿಯಲ್ಲಿ ಕ್ಯುಆರ್‌ ಕೋಡ್‌! ಮಂಗಳೂರು ದಕ್ಷಿಣ-ಉತ್ತರದಲ್ಲಿ ಅನುಷ್ಠಾನ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Jamie Dimon: ಮೋದಿ ಆರ್ಥಿಕ ನೀತಿ ಅದ್ಭುತ, ಅಮೆರಿಕದಲ್ಲೂ ಜಾರಿ ಮಾಡಿ: ಜೇಮಿ

Jamie Dimon: ಮೋದಿ ಆರ್ಥಿಕ ನೀತಿ ಅದ್ಭುತ, ಅಮೆರಿಕದಲ್ಲೂ ಜಾರಿ ಮಾಡಿ: ಜೇಮಿ

Sunita Williams: ಮೇ 6ರಂದು 3ನೇ ಬಾರಿಗೆ ಸುನಿತಾ ವಿಲಿಯಮ್ಸ್‌ ಗಗನ ಯಾತ್ರೆ

Sunita Williams: ಮೇ 6ರಂದು 3ನೇ ಬಾರಿಗೆ ಸುನಿತಾ ವಿಲಿಯಮ್ಸ್‌ ಗಗನ ಯಾತ್ರೆ

Thailandನಲ್ಲಿ ಗುಜರಿ ಮಾಫಿಯಾದ ಕಿಂಗ್‌ ಪಿನ್‌ ರವಿ ಕಾನಾ, ಪ್ರಿಯತಮೆ ಕಾಜಲ್‌ ಜಾ ಬಂಧನ

Thailandನಲ್ಲಿ ಗುಜರಿ ಮಾಫಿಯಾದ ಕಿಂಗ್‌ ಪಿನ್‌ ರವಿ ಕಾನಾ, ಪ್ರಿಯತಮೆ ಕಾಜಲ್‌ ಜಾ ಬಂಧನ

ತಂಗಿಯ ಸಮಾಧಿ ಸ್ಥಳಕ್ಕೆ  ಭೇಟಿ ನೀಡುವುದನ್ನು ವ್ಲಾಗ್‌ ವಿಡಿಯೋ ಮಾಡಿದ ಯೂಟ್ಯೂಬರ್: ಆಕ್ರೋಶ

ತಂಗಿಯ ಸಮಾಧಿ ಸ್ಥಳಕ್ಕೆ ಭೇಟಿ ನೀಡುವುದನ್ನು ವ್ಲಾಗ್‌ ವಿಡಿಯೋ ಮಾಡಿದ ಯೂಟ್ಯೂಬರ್: ಆಕ್ರೋಶ

Andhra Student passed away After Getting Trapped In Frozen Kyrgyzstan Waterfall

Kyrgyzstan; ಹೆಪ್ಪುಗಟ್ಟಿದ ಜಲಪಾತದಲ್ಲಿ ಸಿಲುಕಿ ಆಂಧ್ರದ ವಿದ್ಯಾರ್ಥಿ ಸಾವು

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್‌ ಬ್ರಿಜೇಶ್‌ ಚೌಟ

ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್‌ ಬ್ರಿಜೇಶ್‌ ಚೌಟ

ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್‌ ಬೆಂಬಲಿಸಿ: ಪದ್ಮರಾಜ್‌ ಪೂಜಾರಿ

ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್‌ ಬೆಂಬಲಿಸಿ: ಪದ್ಮರಾಜ್‌ ಪೂಜಾರಿ

ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ

ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ

ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ

ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ

Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ

Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.