ಸೌದಿ ಮಿತ್ರ ಪಡೆಗಳಿಂದ ಯೆಮೆನ್‌ ರಾಜಧಾನಿ ಮೇಲೆ ವಾಯು ದಾಳಿ; 6 ಸಾವು

Team Udayavani, May 16, 2019, 3:18 PM IST

ಸನಾ : ಸೌದಿ ನೇತೃತ್ವದ ಮೈತ್ರಿ ಪಡೆಗಳು ಬಂಡುಕೋರರ ವಶದಲ್ಲಿರುವ ಯೆಮೆನ್‌ ರಾಜಧಾನಿಯ ಮೇಲೆ ನಡೆಸಿದ ವಾಯು ದಾಳಿಯಲ್ಲಿ ಕನಿಷ್ಠ ಆರು ಮಂದಿ ಮೃತಪಟ್ಟಿದ್ದು 10 ಮಂದಿ ಗಾಯಗೊಂಡಿದ್ದಾರೆ ಎಂದು ಸನಾ ಆಸ್ಪತ್ರೆಯ ವೈದ್ಯರೊಬ್ಬರು ಹೇಳಿದ್ದಾರೆ.

ಸನಾ ನೆರೆಯಲ್ಲಿರುವ ರಿಪಬ್ಲಿಕನ್‌ ಆಸ್ಪತ್ರೆಗೆ ಎಲ್ಲ ಮೃತರು ಮತ್ತು ಗಾಯಾಳುಗಳನ್ನು ತರಲಾಗಿದೆ ಎಂದು ಡಾ. ಮುಖ್‌ತಾರ್‌ ಮೊಹಮ್ಮದ್‌ ತಿಳಿಸಿದ್ದಾರೆ.

ಮಿತ್ರ ಪಡೆಗಳು ಬಂಡುಕೋರರ ವಶದಲ್ಲಿರುವ ಪ್ರದೇಶಗಳ ಉದ್ದಗಲದಲ್ಲಿ ಒಟ್ಟು 19 ವಾಯು ದಾಳಿಗಳನ್ನು ನಡೆಸಿದ್ದು ಈ ಪೈಕಿ 11 ದಾಳಿಗಳು ರಾಜಧಾನಿಯ ಮೇಲೆಯೇ ನಡೆದಿವೆ ಎಂದು ಬಂಡುಕೋರರ ಅಲ್‌ ಮಸೀರಾಹ್‌ ಟಿವಿ ವರದಿ ಮಾಡಿದೆ.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ