ತೆರಿಗೆದಾರರ ಹಣವನ್ನು ಎಸ್‌ಬಿಐ ದುಂದುವೆಚ್ಚ ಮಾಡುತ್ತಿದೆ: ಮಲ್ಯ

Team Udayavani, Apr 20, 2019, 6:00 AM IST

ಲಂಡನ್‌: ತನ್ನ ವಿರುದ್ಧ ವಾದಿಸುತ್ತಿರುವ ವಕೀಲರಿಗೆ ಲಂಡನ್‌ನಲ್ಲಿ ವಕೀಲಿಕೆ ಶುಲ್ಕ ಪಾವತಿ ಮಾಡುವ ಮೂಲಕ ಸ್ಟೇಟ್‌ ಬ್ಯಾಂಕ್‌ ಇಂಡಿಯಾ ತೆರಿಗೆದಾರರ ಹಣವನ್ನು ದುಂದುವೆಚ್ಚ ಮಾಡುತ್ತಿದೆ ಎಂದು ಉದ್ಯಮಿ ವಿಜಯ್‌ ಮಲ್ಯ ಆರೋಪಿಸಿದ್ದಾರೆ. ಈ ಬಗ್ಗೆ ಶುಕ್ರವಾರ ಸರಣಿ ಟ್ವೀಟ್‌ ಮಾಡಿರುವ ಅವರು, ನನ್ನ ವಿರುದ್ಧ ಮಾಡಿದ ಸಾಧನೆಗಳ ಬಗ್ಗೆ ಇಂಗ್ಲೆಂಡ್‌ನ‌ಲ್ಲಿ ಎಸ್‌ಬಿಐ ವಕೀಲರು ಪ್ರಸೆಂಟೇಶನ್‌ ಮಾಡು ತ್ತಿದ್ದಾರೆ. ಇದೆಲ್ಲವೂ ಭಾರತದ ತೆರಿಗೆದಾರರ ವೆಚ್ಚದಲ್ಲಿ ನಡೆ ಯುತ್ತಿದೆ. ನಾನು ಸಂಪೂರ್ಣ ಸಾಲ ಭರಿಸು ತ್ತೇನೆ ಎಂದು ಹೇಳಿದ್ದರೂ ಎಸ್‌ಬಿಐ ಹೀಗೆ ಮಾಡುತ್ತಿದೆ ಎಂದು ಆರೋಪಿಸಿದ್ದಾರೆ.

ಈ ಬಗ್ಗೆ ಅವರು ಕೆಲವು ಫೋಟೋಗಳನ್ನೂ ಟ್ವೀಟ್‌ ಮಾಡಿದ್ದಾರೆ. ಮಾಧ್ಯಮಗಳು ಯಾಕೆ ನನ್ನ ವಿರುದ್ಧದ ಪ್ರಕರಣದಲ್ಲಿ ಎಸ್‌ಬಿಐ ಎಷ್ಟು ವೆಚ್ಚ ಮಾಡುತ್ತಿದೆ ಎಂದು ಆರ್‌ಟಿಐ ಸಲ್ಲಿಸಿ ಮಾಹಿತಿ ಪಡೆಯುತ್ತಿಲ್ಲ? ಲಂಡನ್‌ನಲ್ಲಿ ನನ್ನ ಸ್ವತ್ತುಗಳನ್ನು ಶೇ. 50 ಕಡಿಮೆ ಮೌಲ್ಯಕ್ಕೆ ಮಾರಾಟ ಮಾಡಲಾಗಿದೆ. ಇದು ಕಾನೂನು ವೆಚ್ಚಕ್ಕೂ ಸಾಲುವುದಿಲ್ಲ. ಯುಕೆ ವಕೀಲರನ್ನು ಶ್ರೀಮಂತಗೊಳಿಸಲು ಇದನ್ನು ಮಾಡುತ್ತಿದ್ದೀರಾ? ಎಂದು ಮಲ್ಯ ಪ್ರಶ್ನಿಸಿದ್ದಾರೆ.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ