ಮಂಗಳ ಅಂಗಳದಲ್ಲಿ ದ್ರವರೂಪದ ನೀರಿನ ಅಂಶ?
Team Udayavani, Oct 6, 2022, 7:30 AM IST
ಲಂಡನ್: ಮಂಗಳ ಗ್ರಹದ ದಕ್ಷಿಣ ಧ್ರುವದ ಮಂಜುಗಡ್ಡೆಯ ಕೆಳಗೆ ಸಂಭವನೀಯ ದ್ರವರೂಪದ ನೀರಿನ ಅಂಶ ಇರುವುದಕ್ಕೆ ಸಂಶೋಧಕರಿಗೆ ಪುರಾವೆಗಳು ದೊರೆತಿದೆ.
ನೇಚರ್ ಅಸ್ಟ್ರಾನಮಿ ನಿಯತಕಾಲಿಕದಲ್ಲಿ ಪ್ರಕಟಗೊಂಡಿರುವ ವರದಿಯ ಪ್ರಕಾರ, ಮಂಗಳದ ದಕ್ಷಿಣ ಧ್ರುವದ ಕೆಳಗೆ ದ್ರವರೂಪದ ನೀರು ಇದೆ ಎಂಬುದಕ್ಕೆ ರಾಡಾರ್ ಹೊರತುಪಡಿಸಿ ಡೇಟಾ ಬಳಸಿಕೊಂಡು ಮೊದಲ ಬಾರಿಗೆ ಸ್ವತಂತ್ರ ಪುರಾವೆಯನ್ನು ಸಂಶೋಧಕರು ಒದಗಿಸಿದ್ದಾರೆ.
ಕೇಂಬ್ರಿಡ್ಜ್ ವಿಶ್ವವಿದ್ಯಾಲಯ ನೇತೃತ್ವದ ಸಂಶೋಧಕರ ತಂಡ, ಮಂಗಳ ಗ್ರಹದ ಮಂಜುಗಡ್ಡೆಯ ಮೇಲ್ಭಾಗದ ಆಕಾರದ ಎತ್ತರದಲ್ಲಿನ ಸೂಕ್ಷ್ಮ ಮಾದರಿಗಳನ್ನು ಗುರುತಿಸಲು ಸ್ಪೇಸ್ಕ್ರಾಫ್ಟ್ ಲೇಸರ್ ಆಲ್ಟಿಮೀಟರ್ ಅಳತೆಗಳನ್ನು ಬಳಸಿದೆ.
ಈ ಪುರಾವೆಗಳು ಮಂಜುಗಡ್ಡೆಯ ಕೆಳಗೆ ದ್ರವರೂಪದ ನೀರಿನ ಅಂಶ ಇರುವುದಕ್ಕೆ ಸಾಕ್ಷಿಯಾಗಿದೆ ಎಂದು ಸಂಶೋಧಕರು ಮಾಹಿತಿ ನೀಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kyrgyzstan; ಹೆಪ್ಪುಗಟ್ಟಿದ ಜಲಪಾತದಲ್ಲಿ ಸಿಲುಕಿ ಆಂಧ್ರದ ವಿದ್ಯಾರ್ಥಿ ಸಾವು
Kuala Lumpur; ಪರಸ್ಪರ ಡಿಕ್ಕಿ ಹೊಡೆದು ಪತನಗೊಂಡ ಕಾಪ್ಟರ್ಗಳು: 10 ಯೋಧರು ಸಾವು
Malaysia ನೌಕಾಪಡೆಯ 2 ಹೆಲಿಕಾಪ್ಟರ್ ಪತನ; 10 ಮಂದಿ ಮೃತ್ಯು, ಭಯಾನಕ ವಿಡಿಯೋ ಸೆರೆ
Taiwan ನಲ್ಲಿ ಸರಣಿ ಭೂಕಂಪ… ರಾತ್ರಿಯಿಡೀ ಮನೆಯಿಂದ ಹೊರಗುಳಿದ ಮನೆಮಂದಿ
US ಪೌರತ್ವ: ಭಾರತೀಯರಿಗೆ ದ್ವಿತೀಯ ಸ್ಥಾನ