ಶಶಿಯ ಒಡಲಲ್ಲಿ ‘ಚಂದ್ರ ಕಂಪನ’ : ಏನಂತಾರೆ ವಿಜ್ಞಾನಿಗಳು?

ಚಂದ್ರ ಕಂಪನ ದಾಖಲಿಸಿಕೊಳ್ಳಲು ಇರಿಸಲಾಗಿದೆ 4 ಕಂಪನ ಮಾಪಕಗಳು

Team Udayavani, May 14, 2019, 1:20 PM IST

ಸಾಂದರ್ಭಿಕ ಚಿತ್ರವನ್ನು ಬಳಸಲಾಗಿದೆ – Representative Image Used

ಭೂಮಿಯ ಆಳದಲ್ಲಿರುವ ಶಿಲಾಪದರಗಳಲ್ಲಿ ಉಂಟಾಗುವ ಕಂಪನಗಳನ್ನು ನಾವು ‘ಭೂಕಂಪ’ ಎಂದು ಕರೆಯುತ್ತೇವೆ. ಅದೇ ರೀತಿಯಲ್ಲಿ ಭೂಮಿಯ ನೈಸರ್ಗಿಕ ಉಪಗ್ರಹವಾಗಿರುವ ಚಂದ್ರನ ಒಡಲಲ್ಲೂ ಕಂಪನಗಳುಂಟಾಗುತ್ತವೆಯೇ? ಹೌದೆಂದಾರೆ ಅದರ ಸ್ವರೂಪ ಹೇಗಿರುತ್ತದೆ? ಏನಿದು ‘ಚಂದ್ರ ಕಂಪನ’ದ ರಹಸ್ಯ? ಇಲ್ಲಿದೆ ನೋಡಿ ಉತ್ತರ.

ಚಂದ್ರ ಗ್ರಹದ ಒಡಲು ತಂಪಾಗುವ ಕಾರಣದಿಂದ ಚಂದ್ರ ಕುಗ್ಗುತ್ತಾನಂತೆ. ಕಳೆದ ಹಲವಾರು ಶತ ಮಿಲಿಯನ್ ವರ್ಷಗಳಿಂದ ಈ ಪ್ರಕ್ರಿಯೆ ನಡೆಯುತ್ತಿದ್ದು ಅಂದಿನಿಂದ ನಮ್ಮ ಚಂದ್ರನ ಗಾತ್ರ ಸುಮಾರು 50 ಮೀಟರ್ ಗಳಷ್ಟು ಅಂದರೆ ಬರೋಬ್ಬರಿ 150 ಅಡಿಗಳಷ್ಟು ಕುಗ್ಗಿದೆ.

ದ್ರಾಕ್ಷಿಯೊಂದು ಸುರುಟಿ ಹೋಗಿ ಯಾವ ರೀತಿಯಲ್ಲಿ ಒಣ ದ್ರಾಕ್ಷಿಯ ಸ್ವರೂಪವನ್ನು ಪಡೆದುಕೊಳ್ಳುತ್ತದೆಯೋ ಹಾಗೆ ಚಂದ್ರನೂ ಸಹ ಕುಗ್ಗುತ್ತಾ ಹೋದ ಸಂದರ್ಭದಲ್ಲಿ ಸುಕ್ಕುಗಳು ಉಂಟಾಗುತ್ತವೆ.

ಆದರೆ ದ್ರಾಕ್ಷಿ ಹಣ್ಣಿನ ಸಿಪ್ಪೆ ಯಾವ ಸ್ಥಿತಿಗೆ ಬೇಕಾದರೂ ಒಗ್ಗಿಕೊಳ್ಳುತ್ತದೆ ಆದರೆ ಚಂದ್ರನ ಮೆಲ್ಮ್ಯೆ ಗಟ್ಟಿಯಾಗಿ ಬಿರುಕು ಗುಣದಿಂದ ಕೂಡಿರುವುದರಿಂದ ಚಂದ್ರ ಕುಗ್ಗಿದಾಗ ಅದರ ಸಂರಚನೆಯಲ್ಲಿ ‘ಚಾಚು ಪದರ’ಗಳು ಉಂಟಾಗುತ್ತದೆ. ಇಲ್ಲಿ ಒಂದು ಪದರ ತನ್ನ ಸಮೀಪದ ಪದರದ ಮೇಲ್ಭಾಗಕ್ಕೆ ಚಾಚಿಕೊಳ್ಳುವ ಸ್ಥಿತಿ ಇದಾಗಿರುತ್ತದೆ.

ಈ ರೀತಿಯ ಸಂರಚನೆಗಳು ಚಂದ್ರನಲ್ಲಿ ಈಗಲೂ ಕ್ರಿಯಾಶೀಲವಾಗಿದ್ದು ಇದರಿಂದ ಚಂದ್ರ ತಂಪಾಗಿ ಸಂಕುಚಿತಗೊಳ್ಳುವ ಸಂದರ್ಭದಲ್ಲೆಲ್ಲಾ ಚಂದ್ರನ ಒಡಲಲ್ಲಿ ಕಂಪನಗಳು ಉಂಟಾಗುತ್ತಿರುತ್ತವೆ ಎಂಬುದನ್ನು ವಿಜ್ಞಾನಿಗಳು ಕಂಡುಕೊಂಡಿದ್ದಾರೆ. ಇಂತಹ ಕಂಪನಗಳು ಕೆಲವೊಮ್ಮೆ ತೀವ್ರ ಸ್ವರೂಪದಲ್ಲಿದ್ದು ರಿಕ್ಟರ್ ಮಾಪಕದಲ್ಲಿ 5ಕ್ಕಿಂತಲೂ ಹೆಚ್ಚಿರುತ್ತದೆ.

ಚಂದ್ರನ ಮೆಲ್ಭಾಗವನ್ನು ಸೂಕ್ಷ್ಮವಾಗಿ ಗಮನಿಸಿದಾಗ ಈ ಸಂರಚನೆಗಳು ಮಹಡಿಯ ಮೆಟ್ಟಿಲುಗಳಂತೆ ಕಾಣುತ್ತದೆ. ಇದು ಸಾಮಾನ್ಯವಾಗಿ ಹತ್ತು ಮೀಟರ್ ಗಳಷ್ಟು ಎತ್ತರವನ್ನು ಹೊಂದಿದ್ದು ಹಲವಾರು ಕಿಲೋಮೀಟರ್ ಗಳವರೆಗೆ ಇದು ಚಾಚಿಕೊಂಡಿರುತ್ತದೆ ಎಂಬುದು ವಿಜ್ಞಾನಿಗಳ ಅಭಿಪ್ರಾಯವಾಗಿದೆ.

ಅಪೋಲೋ ಖಗೋಳ ವಿಜ್ಞಾನಿಗಳು ಚಂದ್ರನ ಮೆಲ್ಮೈಯ ಮೇಲೆ ಇರಿಸಿರುವ ನಾಲ್ಕು ಕಂಪನ ಮಾಪಕಗಳ ಮೂಲಕ ವಿಶಿಷ್ಟ ಗಣಿತ ಲೆಕ್ಕಾಚಾರದಲ್ಲಿ ಈ ಕಂಪನಗಳನ್ನು ಅಳೆಯಲಾಗಿ ‘ಚಂದ್ರ ಕಂಪನ’ ಸಂಬಂಧಿತ ವಿಸ್ತೃತ ಅಧ್ಯಯನ ವರದಿಯನ್ನು ವಿಜ್ಞಾನಿಗಳು ಸಿದ್ಧಪಡಿಸಿದ್ದಾರೆ.

ಅಪೋಲೋ 11, 12, 14, 15 ಮತ್ತು 16 ಮಿಷನ್ ಉಡ್ಡಯನ ಸಂದರ್ಭದಲ್ಲಿ ಈ ಕಂಪನ ಮಾಪಕಗಳನ್ನು ಚಂದ್ರನ ಮೆಲೆ ಇರಿಸಲಾಗಿತ್ತು. ಇವುಗಳಲ್ಲಿ ಅಪೋಲೋ 11 ಇರಿಸಿದ್ದ ಕಂಪನ ಮಾಪಕ ಕೇವಲ ಮೂರು ವಾರಗಳವರೆಗೆ ಮಾತ್ರವೇ ಕೆಲಸ ಮಾಡಿತ್ತು.

ಇನ್ನುಳಿದ ನಾಲ್ಕು ಕಂಪನ ಮಾಪಕಗಳು ಒಟ್ಟಾರೆಯಾಗಿ 28 ಚಂದ್ರ ಕಂಪನಗಳನ್ನು ದಾಖಲಿಸಿಕೊಂಡಿದೆ. ಇವುಗಳಲ್ಲಿ ಕಂಪನ ಪ್ರಮಾಣ ರಿಕ್ಟರ್ ಮಾಪಕದಲ್ಲಿ 2 ರಿಂದ 5ರವರೆಗೂ ದಾಖಲಾಗಿತ್ತು.

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ