ಸಿಖ್ ವ್ಯಕ್ತಿಯ ರೆಸ್ಟಾರೆಂಟ್ ಧ್ವಂಸ
Team Udayavani, Jun 25, 2020, 8:19 AM IST
ವಾಷಿಂಗ್ಟನ್: ಅಮೆರಿಕದಲ್ಲಿ ಜನಾಂಗೀಯ ದ್ವೇಷದ ಜ್ವಾಲೆಗೆ ಭಾರತೀಯರ ಆಸ್ತಿಪಾಸ್ತಿಗಳೂ ಹಾನಿಗೊಳಗಾಗುತ್ತಿವೆ. ನ್ಯೂ ಮೆಕ್ಸಿಕೊದಲ್ಲಿನ ಸ್ಯಾಂಟ್ ಫೆ ಸಿಟಿಯ ಸಿಖ್ ಒಡೆತನದ ರೆಸ್ಟಾರೆಂಟ್ ಅನ್ನು ದುಷ್ಕರ್ಮಿಗಳು ಧ್ವಂಸಗೊಳಿಸಿದ್ದಾರೆ. ಬಲ್ಜೀತ್ ಸಿಂಗ್ ಅವರು ಈ ರೆಸ್ಟಾರೆಂಟನ್ನು 30 ವರ್ಷಗಳಿಂದ ನಡೆಸುತ್ತಿದ್ದರು.
ಇಂಡಿಯಾ ಪ್ಯಾಲೇಸ್ ರೆಸ್ಟಾರೆಂಟ್ನ ಟೇಬಲ್, ಗಾಜಿನ ಸಾಮಾನು, ದೇವಿಯ ಪ್ರತಿಮೆಗಳನ್ನು ಧ್ವಂಸಗೊಳಿಸಲಾಗಿದೆ. ಕಂಪ್ಯೂಟರ್, ಅಡುಗೆ ಮನೆಯ ವಸ್ತುಗಳನ್ನು ಕದ್ದೊಯ್ಯಲಾಗಿದೆ. ಅಂದಾಜು 1 ಲಕ್ಷ ಡಾಲರ್ ಹಾನಿ ಉಂಟಾಗಿದೆ. “ನಿಮ್ಮ ದೇಶಕ್ಕೆ ಹಿಂತಿರುಗಿ, ವೈಟ್ ಪವರ್, ಟ್ರಂಪ್ 2020′ ಎಂಬ ದ್ವೇಷದ ಬರಹಗಳನ್ನು ಗೋಡೆ, ಬಾಗಿಲುಗಳ ಮೇಲೆ ದುಷ್ಕರ್ಮಿಗಳು ಬರೆದಿದ್ದಾರೆ. ಸ್ಥಳೀಯ ಪೊಲೀಸರು ಹಾಗೂ ಎಫ್ಬಿಐ ತನಿಖೆಗೆ ಮುಂದಾ ಗಿದೆ.ಈ ದುಷ್ಕೃತ್ಯವನ್ನು ಸಿಖ್ ಅಮೆರಿಕನ್ ಲೀಗಲ್ ಡಿಫೆನ್ಸ್ ಆ್ಯಂಡ್ ಎಜುಕೇಶನ್ ಫಂಡ್ ತೀವ್ರವಾಗಿ ಖಂಡಿಸಿದೆ.ಇತ್ತೀಚೆಗಷ್ಟೇ ಕೊಲೊರಾಡೊದ ಲೇಕ್ವುಡ್ನಲ್ಲಿ ಸಿಖ್ ವ್ಯಕ್ತಿಯೊಬ್ಬರ ಮೇಲೆ ಮಾರಣಾಂತಿಕ ಹಲ್ಲೆ ನಡೆದಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kyrgyzstan; ಹೆಪ್ಪುಗಟ್ಟಿದ ಜಲಪಾತದಲ್ಲಿ ಸಿಲುಕಿ ಆಂಧ್ರದ ವಿದ್ಯಾರ್ಥಿ ಸಾವು
Kuala Lumpur; ಪರಸ್ಪರ ಡಿಕ್ಕಿ ಹೊಡೆದು ಪತನಗೊಂಡ ಕಾಪ್ಟರ್ಗಳು: 10 ಯೋಧರು ಸಾವು
Malaysia ನೌಕಾಪಡೆಯ 2 ಹೆಲಿಕಾಪ್ಟರ್ ಪತನ; 10 ಮಂದಿ ಮೃತ್ಯು, ಭಯಾನಕ ವಿಡಿಯೋ ಸೆರೆ
Taiwan ನಲ್ಲಿ ಸರಣಿ ಭೂಕಂಪ… ರಾತ್ರಿಯಿಡೀ ಮನೆಯಿಂದ ಹೊರಗುಳಿದ ಮನೆಮಂದಿ
US ಪೌರತ್ವ: ಭಾರತೀಯರಿಗೆ ದ್ವಿತೀಯ ಸ್ಥಾನ