ಕಡಲ ಒಡಲಿಂದ ತೆಗೆದ ತ್ಯಾಜ್ಯ ಲಕ್ಷ ಕೆ.ಜಿ.!
Team Udayavani, Jul 2, 2020, 6:20 AM IST
ಸಮುದ್ರ ಸ್ವಚ್ಛಗೊಳಿಸಲೆಂದೇ ಇರುವ ಹಲವು ಹಡಗುಗಳು ಸೇರಿಯೂ ಮಾಡಲಾಗದಂತಹ ಕಾರ್ಯವನ್ನು ಒಂದೇ ಹಡಗು ಮಾಡಿ ತೋರಿಸಿದೆ.
ಅದು ಕಡಲ ಒಡಲಲ್ಲಿ ಬೆರೆತ ಪ್ಲಾಸ್ಟಿಕ್ ತೆಗೆಯುವ ಕಾರ್ಯ.
ಆದರೆ ಓಷನ್ ವಾಯೇಜಸ್ ಸಂಸ್ಥೆಯ ಹಡಗು ಪೆಸಿಫಿಕ್ ಸಾಗರದೊಳಗಿಂದ ಹೆಕ್ಕಿ ತೆಗೆದಿರುವುದು ಒಂದೆರಡು ಕೆ.ಜಿ. ಕಸವಲ್ಲ, ಬರೋಬ್ಬರಿ ಒಂದು ಲಕ್ಷ ಕೆ.ಜಿ.ಯಷ್ಟು ಪ್ಲಾಸ್ಟಿಕ್ ತ್ಯಾಜ್ಯ! ಹಾಗೇ ಇದುವರೆಗೂ ಯಾವೊಂದು ಹಡಗು ಅಥವಾ ತಂಡ ಇಷ್ಟೊಂದು ಪ್ರಮಾಣದ ಕಸ ಹೊರತೆಗೆದ ಉದಾಹರಣೆಗಳಿಲ್ಲ.
ಹೀಗಾಗಿ ಇದೊಂದು ವಿಶ್ವ ದಾಖಲೆ ಕೂಡ ಹೌದು. ಇವೆಲ್ಲವುಗಳ ಜತೆ ಮಾನವನ ನಿರ್ಲಕ್ಷ್ಯದಿಂದಾಗಿ ನಮ್ಮ ಕೆರೆ, ನದಿ, ಸಮುದ್ರ ಸೇರಿ ಎಲ್ಲ ಜಲ ಮೂಲಗಳು ಮಲಿನಗೊಳ್ಳುತ್ತಿರುವುದಕ್ಕೆ ಇದೊಂದು ಸ್ಪಷ್ಟ ನಿದರ್ಶನ.
ಸ್ವಚ್ಛಗೊಳಿಸಿದ್ದು ಯಾರು?
– ಓಷನ್ ವಾಯೇಜಸ್ ಸಂಸ್ಥೆ ಸಂಸ್ಥಾಪಕಿ ಮೇರಿ ಕ್ರೌಲಿ ಹಾಗೂ ತಂಡ ಈ ಸ್ವಚ್ಛತಾ ಕಾರ್ಯ ಕೈಗೊಂಡಿತ್ತು.
– 48 ದಿನ ಸಮುದ್ರವೆಲ್ಲ ಸುತ್ತಾಡಿದ ತಂಡ, ಹರಿದ ಬಲೆ, ಜನ ಬಳಸಿ ಬಿಸಾಡಿದ ಪ್ಲಾಸ್ಟಿಕ್ ಹೊರ ತೆಗೆದಿದೆ.
– 2019ರಲ್ಲಿ 28 ದಿನ ಸಮುದ್ರ ಸಂಚಾರ ನಡೆಸಿದ್ದ ಇದೇ ತಂಡ 48 ಟನ್ ಪ್ಲಾಸ್ಟಿಕ್ ತ್ಯಾಜ್ಯ ಸಂಗ್ರಹಿಸಿತ್ತು.
– 100 ಟನ್ ವಿಷಕಾರಿ ಪ್ಲಾಸ್ಟಿಕ್ ಹೊರತೆಗೆಯುವ ಗುರಿ ಹೊಂದಿದ್ದ ತಂಡ, ನಿರೀಕ್ಷೆ ಮೀರಿ ಕಸ ಸಂಗ್ರಹಿಸಿದೆ.
– ಸಮುದ್ರದಲ್ಲಿನ ಪ್ಲಾಸ್ಟಿಕ್ ತ್ಯಾಜ್ಯ ಇದೆ ಎಂದು ಪತ್ತೆಹಚ್ಚಲು ಜಿಪಿಎಸ್ ಆಧಾರಿತ ಟ್ರಾಕಿಂಗ್ ವ್ಯವಸ್ಥೆ ಬಳಕೆ.
ಜಲಚರಗಳ ಜೀವಕ್ಕೆ ಮುಳುವು
ಮೀನುಗಾರರು ಸಮುದ್ರಕ್ಕೆಸೆಯುವ ಹರಿದ ಬಲೆಗಳು ಹಾಗೂ ಜನ ಬಳಸಿ ಬಿಸಾಡಿದ ಬಾಟಲಿ ಮತ್ತಿತರ ಪ್ಲಾಸ್ಟಿಕ್ ತ್ಯಾಜ್ಯ, ಜಲಚರಗಳ ಜೀವತೆಗೆಯುವಷ್ಟು ವಿಷಕಾರಿಯಾಗಿರುತ್ತದೆ. ಅರೆಬರೆ ಬಲೆಗಳಲ್ಲಿ ಮೀನು ಮತ್ತಿತರ ಜೀವಿಗಳು ಸಿಲುಕಿ ಪ್ರಾಣ ಬಿಡುವುದರಿಂದ ಇವುಗಳನ್ನು ತಜ್ಞರು ‘ಗೋಸ್ಟ್ ನೆಟ್’ ಅಂತಲೇ ಕರೆಯುತ್ತಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Jamie Dimon: ಮೋದಿ ಆರ್ಥಿಕ ನೀತಿ ಅದ್ಭುತ, ಅಮೆರಿಕದಲ್ಲೂ ಜಾರಿ ಮಾಡಿ: ಜೇಮಿ
Sunita Williams: ಮೇ 6ರಂದು 3ನೇ ಬಾರಿಗೆ ಸುನಿತಾ ವಿಲಿಯಮ್ಸ್ ಗಗನ ಯಾತ್ರೆ
Thailandನಲ್ಲಿ ಗುಜರಿ ಮಾಫಿಯಾದ ಕಿಂಗ್ ಪಿನ್ ರವಿ ಕಾನಾ, ಪ್ರಿಯತಮೆ ಕಾಜಲ್ ಜಾ ಬಂಧನ
ತಂಗಿಯ ಸಮಾಧಿ ಸ್ಥಳಕ್ಕೆ ಭೇಟಿ ನೀಡುವುದನ್ನು ವ್ಲಾಗ್ ವಿಡಿಯೋ ಮಾಡಿದ ಯೂಟ್ಯೂಬರ್: ಆಕ್ರೋಶ
Kyrgyzstan; ಹೆಪ್ಪುಗಟ್ಟಿದ ಜಲಪಾತದಲ್ಲಿ ಸಿಲುಕಿ ಆಂಧ್ರದ ವಿದ್ಯಾರ್ಥಿ ಸಾವು
MUST WATCH
ಹೊಸ ಸೇರ್ಪಡೆ
PM ಮೋದಿಯವರಿಂದ ಏ.28 ಮತ್ತು 29 ರಂದು 5 ಕಡೆ ಪ್ರಚಾರ: ವಿಜಯೇಂದ್ರ ಮಾಹಿತಿ
Bellary; ಲೋಕಾಯುಕ್ತ ಬಲೆಗೆ ಬಿದ್ದ 6 ಮಂದಿ ಭ್ರಷ್ಟ ಅಧಿಕಾರಿಗಳು: ಲಕ್ಷ ಲಕ್ಷ ರೂ. ಲಂಚ!
Lok Sabha Election: ಮೋದಿಗೆ ಮತ ಕೇಳುವ ಹಕ್ಕಿಲ್ಲ: ಸಿದ್ದರಾಮಯ್ಯ
Heart beats; ಭಾರತದ ಹೃದಯ ಪಾಕಿಸ್ಥಾನದ ಯುವತಿಗೆ ಹೊಸ ಜೀವನ ನೀಡಿತು..
T20 World Cup; ಯಾರಿಲ್ಲ.. ಯಾರಿಲ್ಲ.. ವಿಶ್ವಕಪ್ ಗೆ ವೇಗದ ಬೌಲರ್ ಗಳು ಯಾರೆಲ್ಲಾ?