ಕರುಣೆ ಇಲ್ಲದ ಕೋವಿಡ್ 19 ವೈರಸ್ ಅಟ್ಟಹಾಸ: ಆರು ವಾರದ ನವಜಾತ ಹಸುಳೆ ಸಾವು
ಇದೊಂದು ನಿಜಕ್ಕೂ ಹೃದಯವಿದ್ರಾವಕ ಘಟನೆಯಾಗಿದೆ. ಕೋವಿಡ್ 19 ಸೋಂಕಿಗೆ ಬಲಿಯಾಗಿರುವ ಮೊದಲ ನವಜಾತ ಶಿಶು ಇದಾಗಿದೆ.
Team Udayavani, Apr 2, 2020, 10:20 AM IST
Representative Image
ನ್ಯೂಯಾರ್ಕ್: ಮಾರಣಾಂತಿಕ ಕೋವಿಡ್ 19 ಸೋಂಕಿಗೆ ಆರು ವಾರದ ನವಜಾತ ಶಿಶು ಸಾವನ್ನಪ್ಪಿರುವ ಘಟನೆ ಅಮೆರಿಕದ ಕನೆಕ್ಟಿಕಟ್ ರಾಜ್ಯದಲ್ಲಿ ನಡೆದಿರುವುದಾಗಿ ಗವರ್ನರ್ ತಿಳಿಸಿದ್ದು, ಇದು ವೈರಸ್ ತಗುಲಿ ಸಾವನ್ನಪ್ಪಿರುವ ಅತೀ ಕಿರಿಯ ಶಿಶು ಎಂದು ದಾಖಲೆಯಾಗಿದೆ.
ಗವರ್ನರ್ ನೆಡ್ ಲ್ಯಾಮೋಂಟ್ ಟ್ವೀಟ್ ಮೂಲಕ, ಕಳೆದ ವಾರ ನವಜಾತ ಶಿಶು ಆಸ್ಪತ್ರೆಗೆ ದಾಖಲಾಗಿದ್ದು, ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿರುವುದಾಗಿ ವಿವರಿಸಿದ್ದಾರೆ. ನವಜಾತ ಶಿಶುವಿಗೆ ಕೋವಿಡ್ 19 ವೈರಸ್ ಇದ್ದಿರುವುದು ಕಳೆದ ರಾತ್ರಿ ವರದಿಯಲ್ಲಿ ದೃಢಪಟ್ಟಿತ್ತು.
ಇದೊಂದು ನಿಜಕ್ಕೂ ಹೃದಯವಿದ್ರಾವಕ ಘಟನೆಯಾಗಿದೆ. ಕೋವಿಡ್ 19 ಸೋಂಕಿಗೆ ಬಲಿಯಾಗಿರುವ ಮೊದಲ ನವಜಾತ ಶಿಶು ಇದಾಗಿದೆ. ಕಳೆದ ವಾರ ಅಮೆರಿಕದ ಇಲಿನಾಯ್ಸ್ ರಾಜ್ಯದಲ್ಲಿ ಒಂದು ವರ್ಷದ ಮಗು ಕೋವಿಡ್ 19 ಸಂಬಂಧಿತ ಲಕ್ಷಣದಿಂದ ಸಾವನ್ನಪ್ಪಿದ್ದು, ಈ ಬಗ್ಗೆ ವಿಶೇಷ ತನಿಖೆ ನಡೆಯುತ್ತಿದೆ ಎಂದು ವರದಿ ತಿಳಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Jamie Dimon: ಮೋದಿ ಆರ್ಥಿಕ ನೀತಿ ಅದ್ಭುತ, ಅಮೆರಿಕದಲ್ಲೂ ಜಾರಿ ಮಾಡಿ: ಜೇಮಿ
Sunita Williams: ಮೇ 6ರಂದು 3ನೇ ಬಾರಿಗೆ ಸುನಿತಾ ವಿಲಿಯಮ್ಸ್ ಗಗನ ಯಾತ್ರೆ
Thailandನಲ್ಲಿ ಗುಜರಿ ಮಾಫಿಯಾದ ಕಿಂಗ್ ಪಿನ್ ರವಿ ಕಾನಾ, ಪ್ರಿಯತಮೆ ಕಾಜಲ್ ಜಾ ಬಂಧನ
ತಂಗಿಯ ಸಮಾಧಿ ಸ್ಥಳಕ್ಕೆ ಭೇಟಿ ನೀಡುವುದನ್ನು ವ್ಲಾಗ್ ವಿಡಿಯೋ ಮಾಡಿದ ಯೂಟ್ಯೂಬರ್: ಆಕ್ರೋಶ
Kyrgyzstan; ಹೆಪ್ಪುಗಟ್ಟಿದ ಜಲಪಾತದಲ್ಲಿ ಸಿಲುಕಿ ಆಂಧ್ರದ ವಿದ್ಯಾರ್ಥಿ ಸಾವು