ಪ್ರೇಮಿಗಳ ದಿನಕ್ಕೆ ಜಿರಾಫೆ ಹೃದಯ ಗಿಫ್ಟ್…ಪತಿಗಾಗಿ ಮೂಕಜೀವಿ ಬಲಿ ಪಡೆದ ಪ್ರಾಣಿಹಂತಕಿ
Team Udayavani, Feb 23, 2021, 10:20 PM IST
ದಕ್ಷಿಣ ಆಫ್ರಿಕಾ : ಪ್ರೇಮಿಗಳ ದಿನದ ಉಡುಗೊರೆಯಾಗಿ ಪತ್ನಿಯೋರ್ವಳು ತನ್ನ ಪತಿಗೆ ಜಿರಾಫೆಯೊಂದರ ಹೃದಯ ನೀಡಿರುವ ವಿಚಿತ್ರ ಘಟನೆ ನಡೆದಿದೆ.
ದಕ್ಷಿಣ ಆಫ್ರಿಕಾದ 32 ವರ್ಷದ ಮೆರೆಲೈಸ್ ವ್ಯಾನ್ ಡೆರ್ ಮೆರ್ವೆ, ಗಂಡನಿಗಾಗಿ ಜಿರಾಫೆ ಹತ್ಯೆ ಮಾಡಿದ ಪ್ರಾಣಿಗಳ ಹಂತಕಿ. ಮೊದಲಿನಿಂದಲೂ ಪ್ರಾಣಿ ಬೇಟೆಯಾಡುವುದು ಈಕೆಗೆ ಹವ್ಯಾಸವಂತೆ. ಆನೆ, ಚಿರತೆ, ಹುಲಿ ಸೇರಿದಂತೆ ಇದುವರೆಗೂ ಸುಮಾರು 500 ಕ್ಕೂ ಹೆಚ್ಚು ಕಾಡು ಪ್ರಾಣಿಗಳ ಹತ್ಯೆ ಮಾಡಿದ್ದಾರಂತೆ ಮೆರ್ವೆ.
ಫೆ. 14 ರಂದು ತನ್ನ ಪತಿಗೆ ಉಡುಗೊರೆ ನೀಡುವ ಉದ್ದೇಶದಿಂದ 17 ವರ್ಷದ ಕಪ್ಪು ಜಿರಾಫೆಯ ಪ್ರಾಣ ತೆಗೆದಿದ್ದಾಳೆ. ಅದರ ಹೃದಯ ಬಗೆದು ಗಂಡನಿಗೆ ಗಿಫ್ಟ್ ಮಾಡಿದ್ದಾಳೆ. ರಕ್ತಸಿಕ್ತ ಜಿರಾಫೆ ಹೃದಯ ಹಿಡಿದುಕೊಂಡು ಫೋಟೊಗಳಿಗೆ ಫೋಸ್ ನೀಡಿರುವ ಈಕೆ, ಅವುಗಳನ್ನು ತನ್ನ ಫೇಸ್ ಬುಕ್ ನಲ್ಲಿ ಹಂಚಿಕೊಂಡಿದ್ದಾಳೆ.
ಇದನ್ನೂ ಓದಿ :ಹೊಸ ಉದ್ಯಮಕ್ಕೆ ಕೈ ಹಾಕಿದ ನಟಿ ಕಂಗನಾ…!
ಬಹುದಿನಗಳಿಂದ ಜಿರಾಫೆ ಕೊಲ್ಲಬೇಕೆಂಬ ನನ್ನ ಬಯಕೆ ಈಗ ಈಡೇರಿದೆ ಎಂದಿರುವ ಮೆರ್ವೆ, ಇದಕ್ಕೆ ಬೆಂಬಲ ನೀಡಿದ ಗಂಡನಿಗೆ ಧನ್ಯವಾದ ಹೇಳಿದ್ದಾಳೆ. ವೆರ್ಮೆ ಅವರ ದುಷ್ಕೃತ್ಯಕ್ಕೆ ವ್ಯಾಪಕ ವಿರೋಧ ವ್ಯಕ್ತವಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಇರಾನ್ ಬೆಂಬಲಿತ ಸಿರಿಯಾ ಉಗ್ರರ ತಾಣಗಳ ಮೇಲೆ ಅಮೆರಿಕ ವೈಮಾನಿಕ ದಾಳಿ
ವಂಚನೆ ಪ್ರಕರಣ: ನೀರವ್ ಮೋದಿ ಭಾರತಕ್ಕೆ ಗಡಿಪಾರು: ಬ್ರಿಟನ್ ಕೋರ್ಟ್ ತೀರ್ಪು
ಪತ್ನಿಯ ಮನೆಗೆಲಸಕ್ಕೆ ಪರಿಹಾರ ನೀಡಿ: ಕೋರ್ಟ್ ತೀರ್ಪು
ಕಾಶ್ಮೀರ ಸಮಸ್ಯೆ ನಿವಾರಣೆಗೆ ಭಾರತ ಸ್ಪಂದಿಸುತ್ತಿಲ್ಲ: ಇಮ್ರಾನ್ ಆರೋಪ
ಆತ್ಮಹತ್ಯೆಗೆ ಬ್ರೇಕ್ ಹಾಕಲು ‘ಲೋನ್ಲಿನೆಸ್ ಮಿನಿಸ್ಟರ್’ನ್ನು ಸಂಪುಟಕ್ಕೆ ಸೇರಿಸಿಕೊಂಡ ಜಪಾನ್!