Udayavni Special

ಖಗೋಳ ಯಾತ್ರೆ ಇತಿಹಾಸದಲ್ಲಿ ಸುವರ್ಣ ಅಧ್ಯಾಯ


Team Udayavani, Aug 4, 2020, 6:22 AM IST

ಖಗೋಳ ಯಾತ್ರೆ ಇತಿಹಾಸದಲ್ಲಿ ಸುವರ್ಣ ಅಧ್ಯಾಯ

ಜಗತ್ತಿನ ಮೊತ್ತಮೊದಲ ಮರುಬಳಕೆ ಮಾಡಬಹುದಾದ, ಸ್ಪೇಸ್‌ ಎಕ್ಸ್‌ ಕಂಪೆನಿಯ ‘ಫಾಲ್ಕನ್‌-9’ ರಾಕೆಟ್‌ನಲ್ಲಿ ಕುಳಿತು ಮೇ 31ರಂದು ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ಪ್ರಯಾಣ ಬೆಳೆಸಿದ್ದ ಅಮೆರಿಕದ ಇಬ್ಬರು ವಿಜ್ಞಾನಿಗಳು ಸೋಮವಾರ, ಭೂಮಿಗೆ ಯಶಸ್ವಿಯಾಗಿ ಹಿಂದಿರುಗಿದ್ದಾರೆ. ಬಾಹ್ಯಾಕಾಶ ಪ್ರಯಾಣದಲ್ಲಿ ಇದೊಂದು ದಾಖಲೆಯಾಗಿದ್ದು, ಹೊಸ ಅಧ್ಯಾಯಕ್ಕೆ ಇದು ನಾಂದಿ ಹಾಡಿದೆ.

ಪ್ರಯಾಣಿಸಿದ್ದು ಯಾವಾಗ?
ಮೇ 31ರ ಮಧ್ಯ ರಾತ್ರಿ ಭಾರತೀಯ ಕಾಲಮಾನ ಸುಮಾರು 12 ಗಂಟೆ ಹೊತ್ತಿಗೆ, ಫ್ಲಾರಿಡಾದಲ್ಲಿರುವ ಕೆನಡಿ ಬಾಹ್ಯಾಕಾಶ ಕೇಂದ್ರದಿಂದ ನಾಸಾಕ್ಕೆ ‘ಫಾಲ್ಕನ್‌ 9’ ರಾಕೆಟ್‌ ನಲ್ಲಿ ರಾಬರ್ಟ್‌ ಬೆಹ್ನ್ ಕೆನ್‌ ಹಾಗೂ ಡಗ್ಲಾಸ್‌ ಹರ್ಲೆ ಎಂಬಿಬ್ಬರು ಖಗೋಳ ಯಾತ್ರಿಕರು ಬಾಹ್ಯಾಕಾಶದಲ್ಲಿರುವ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ತೆರಳಿದ್ದಾರೆ. ಆ ರಾಕೆಟ್‌ ಬಾಹ್ಯಾಕಾಶಕ್ಕೆ ಆ ವಿಜ್ಞಾನಿಗಳನ್ನು ತಲುಪಿಸಿ ಮತ್ತೆ ಕೆನಡಿ ಬಾಹ್ಯಾಕಾಶ ಕೇಂದ್ರಕ್ಕೆ ಹಿಂದಿರುಗಿತ್ತು! ಇಬ್ಬರು ವಿಜ್ಞಾನಿಗಳು ಇದ್ದ ಸ್ಪೇಸ್‌ ಕ್ಯಾಪ್ಸೂಲ್‌, ರಾಕೆಟ್‌ನಿಂದ ಬೇರ್ಪಟ್ಟ ನಂತರ ವಿಜ್ಞಾನಿಗಳನ್ನು ಬಾಹ್ಯಾಕಾಶ ನಿಲ್ದಾಣಕ್ಕೆ ತಲುಪಿಸಿತ್ತು.

ಹಿಂದಿರುಗಿದ್ದು ಯಾವಾಗ?
ಭಾರತೀಯ ಕಾಲಮಾನದ ಪ್ರಕಾರ, ಆ. 2ರ ಮಧ್ಯರಾತ್ರಿ 12:18ರ ಸುಮಾರಿಗೆ ಖಗೋಳ ಯಾತ್ರಿಗಳಿದ್ದ ಸ್ಪೇಸ್‌ ಕ್ಯಾಪ್ಸೂಲ್‌ ಮೆಕ್ಸಿಕೋ ಕೊಲ್ಲಿಯಲ್ಲಿ ಬಂದಿಳಿದಿದೆ. ಅವರು ಬಂದಿಳಿಯುವ ಜಾಗವನ್ನು ಮೊದಲೇ ಗ್ರಹಿಸಿದ್ದ ಸ್ಪೇಸ್‌ ಎಕ್ಸ್‌ ತಂತ್ರಜ್ಞರು, ಈಜುಗಾರರೊಂದಿಗೆ ನೌಕೆಯಲ್ಲಿ ಸಾಗಿ ಅವರನ್ನು ಸುರಕ್ಷಿತವಾಗಿ ಕರೆದುಕೊಂಡು ಬಂದಿದ್ದಾರೆ.


ಹೆಗ್ಗಳಿಕೆಯೇನು?

ಮರುಬಳಕೆ ಮಾಡಬಹುದಾದ ರಾಕೆಟ್‌ನಲ್ಲಿ ಗಗನಯಾತ್ರಿಗಳನ್ನು ಬಾಹ್ಯಾಕಾಶಕ್ಕೆ ಕಳಿಸಿ, ಆನಂತರ ಅಲ್ಲಿಂದ ಅವರನ್ನು ಭೂಮಿಗೆ ಸುರಕ್ಷಿತವಾಗಿ ವಾಪಸ್‌ ಕರೆಯಿಸಿಕೊಂಡ ವಿಶ್ವದ ಮೊದಲ ಖಾಸಗಿ ಕಂಪೆನಿ ಎಂಬ ಹೆಗ್ಗಳಿಕೆಗೆ ಸ್ಪೇಸ್‌ ಎಕ್ಸ್‌ ಹಾಗೂ ಅದರ ಮಾಲಕ ಎಲಾನ್‌ ಮಸ್ಕ್ ಪಾತ್ರರಾಗಿದ್ದಾರೆ. ಖಗೋಳ ಯಾತ್ರೆಯ ಇತಿಹಾಸದಲ್ಲಿ ಇದೊಂದು ಅಪೂರ್ವ ಸಾಧನೆ.

– 679 ಕೋಟಿ ರೂ. ಈ ಬೃಹತ್‌ ಯೋಜನೆಗೆ ಸುರಿದ ಹಣ

– 468 ಕೋಟಿ ರೂ. ಫಾಲ್ಕನ್‌-9 ಉಡಾವಣೆಗೆ ತಗುಲಿದ ವೆಚ್ಚ


– 28,163 ಕಿ.ಮೀ. ಭೂಮಿಗೆ ಹಿಂದಿರುಗುವಾಗ ಸ್ಪೇಸ್‌ ಕ್ಯಾಪ್ಸೂಲ್‌ನ ವೇಗ (ಪ್ರತಿ ಗಂಟೆಗೆ)

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

ಬಿ.ಸಿ. ಪಾಟೀಲ್

ಕೃಷಿ ಕಾಯ್ದೆಯಿಂದ ರೈತರಿಗೆ ಸ್ವಾತಂತ್ರ್ಯ ಸಿಕ್ಕಿದ ಹಾಗಾಗಿದೆ: ಸಚಿವ ಬಿ.ಸಿ. ಪಾಟೀಲ್

ಪಶ್ಚಿಮ ಬಂಗಾಳಕ್ಕೆ ಹೆಚ್ಚು ಅಲ್‌ಖೈದಾ ನಂಟು: ಎನ್‌ಐಎ

ಪಶ್ಚಿಮ ಬಂಗಾಳಕ್ಕೆ ಹೆಚ್ಚು ಅಲ್‌ಖೈದಾ ನಂಟು: ಎನ್‌ಐಎ

ಡ್ರಗ್ ನಶೆಯಲ್ಲಿ ತೇಲುತ್ತಿದ್ದಾಗಲೇ ಪೊಲೀಸರಿಗೆ ಸಿಕ್ಕಿಬಿದ್ದ ಕಿಶೋರ್ ಶೆಟ್ಟಿ ಸ್ನೇಹಿತೆ!

ಡ್ರಗ್ ನಶೆಯಲ್ಲಿ ತೇಲುತ್ತಿದ್ದಾಗಲೇ ಪೊಲೀಸರಿಗೆ ಸಿಕ್ಕಿಬಿದ್ದ ಕಿಶೋರ್ ಶೆಟ್ಟಿ ಸ್ನೇಹಿತೆ!

ನಶೆ ನಂಟು: ವಿಚಾರಣೆಗೆ ಹಾಜರಾದ ಕಿರುತೆರೆ ನಟ ಅಭಿಷೇಕ್, ನಟಿ ಗೀತಾ ಭಟ್

ನಶೆ ನಂಟು: ವಿಚಾರಣೆಗೆ ಹಾಜರಾದ ಕಿರುತೆರೆ ನಟ ಅಭಿಷೇಕ್, ನಟಿ ಗೀತಾ ಭಟ್

bng-tdy-3

ಉಂಗುರ ಖರೀದಿಗೆ ಬಂದು,ಕೆ.ಜಿ.ಗಟ್ಟಲೆ ಚಿನ್ನ ಲೂಟಿ

ಶಿರೂರು ಸಮುದ್ರ ತೀರಕ್ಕೆ ತೇಲಿ ಬಂತು ಕ್ಷಿಪಣಿ ಮಾದರಿಯ ವಸ್ತು!

ಶಿರೂರು ಸಮುದ್ರ ತೀರಕ್ಕೆ ತೇಲಿ ಬಂತು ಕ್ಷಿಪಣಿ ಮಾದರಿಯ ವಸ್ತು!

Unlock 4.0: ಕೋವಿಡ್ 19 ಸೋಂಕು ಹೆಚ್ಚಳ-ಈ ನಗರ, ರಾಜ್ಯಗಳಲ್ಲಿ ಮತ್ತೆ ಹೊಸ ನಿರ್ಬಂಧ ಜಾರಿ

Unlock 4.0: ಕೋವಿಡ್ 19 ಸೋಂಕು ಹೆಚ್ಚಳ-ಈ ನಗರ, ರಾಜ್ಯಗಳಲ್ಲಿ ಮತ್ತೆ ಹೊಸ ನಿರ್ಬಂಧ ಜಾರಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಸಮುದ್ರ ದಂಡೆಗೆ ಬಂದು ರಾಶಿಬಿದ್ದ 270 ತಿಮಿಂಗಿಲಗಳು!

ಸಮುದ್ರ ದಂಡೆಗೆ ಬಂದು ರಾಶಿಬಿದ್ದ 270 ತಿಮಿಂಗಿಲಗಳು!

ಶುಕ್ರನ ಮೇಲೆ ನಮ್ಮದೇ ಅಧಿಕಾರ: ರಷ್ಯಾ

ಶುಕ್ರನ ಮೇಲೆ ನಮ್ಮದೇ ಅಧಿಕಾರ: ರಷ್ಯಾ

tiktok

ಸೆ.20ರಿಂದ ಅಮೆರಿಕದಲ್ಲಿ ಟಿಕ್ ಟಾಕ್, ವಿ-ಚಾಟ್ ಅಧಿಕೃತವಾಗಿ ಬ್ಯಾನ್

ಪಾರ್ಲಿಮೆಂಟ್ ನೊಳಗೆ ಅಶ್ಲೀಲ ಚಿತ್ರ ವೀಕ್ಷಿಸುತ್ತಿದ್ದಾಗಲೇ ಸಿಕ್ಕಿಬಿದ್ದ ಥಾಯ್ ಸಂಸದ!

ಪಾರ್ಲಿಮೆಂಟ್ ನೊಳಗೆ ಅಶ್ಲೀಲ ಚಿತ್ರ ವೀಕ್ಷಿಸುತ್ತಿದ್ದಾಗಲೇ ಸಿಕ್ಕಿಬಿದ್ದ ಥಾಯ್ ಸಂಸದ!

ಅತ್ಯಾಧುನಿಕ ಜೆಟ್‌ ತಯಾರಿಸಿದ ಅಮೆರಿಕ

ಅತ್ಯಾಧುನಿಕ ಜೆಟ್‌ ತಯಾರಿಸಿದ ಅಮೆರಿಕ

MUST WATCH

udayavani youtube

Manipal: Multi-storey building in danger | inspection by DC Jagadeesh

udayavani youtube

ಗೇರು ಕೃಷಿಯ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ

udayavani youtube

ಪ್ರವಾಹದಲ್ಲಿ ಡೋಣಿ ನದಿ ದಾಟಲು ಮುಂದಾದ ವ್ಯಕ್ತಿಯ ಹುಚ್ಚು ಸಾಹಸ

udayavani youtube

ಬೆಳೆ ಹಾನಿ ತಡೆಗೆ ಪಟಾಕಿ ಸಿಡಿಸುವ ಕೋವಿ ತಯಾರಿ

udayavani youtube

ಕಬ್ಬಿನ ಬೆಳೆಯ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆಹೊಸ ಸೇರ್ಪಡೆ

ಪಾಳು ಬಿದ್ದಿದ್ದ ಪರವಾಸು ದೇಗುಲಕ್ಕೆ ಕಾಯಕಲ್ಪ

ಪಾಳು ಬಿದ್ದಿದ್ದ ಪರವಾಸು ದೇಗುಲಕ್ಕೆ ಕಾಯಕಲ್ಪ

ಬಿ.ಸಿ. ಪಾಟೀಲ್

ಕೃಷಿ ಕಾಯ್ದೆಯಿಂದ ರೈತರಿಗೆ ಸ್ವಾತಂತ್ರ್ಯ ಸಿಕ್ಕಿದ ಹಾಗಾಗಿದೆ: ಸಚಿವ ಬಿ.ಸಿ. ಪಾಟೀಲ್

ಪಶ್ಚಿಮ ಬಂಗಾಳಕ್ಕೆ ಹೆಚ್ಚು ಅಲ್‌ಖೈದಾ ನಂಟು: ಎನ್‌ಐಎ

ಪಶ್ಚಿಮ ಬಂಗಾಳಕ್ಕೆ ಹೆಚ್ಚು ಅಲ್‌ಖೈದಾ ನಂಟು: ಎನ್‌ಐಎ

ಗೋ ಸಂತತಿ ರಕ್ಷಣೆ ಅಗತ್ಯ: ಸಿದ್ಧಗಂಗಾ ಶ್ರೀ

ಗೋ ಸಂತತಿ ರಕ್ಷಣೆ ಅಗತ್ಯ: ಸಿದ್ಧಗಂಗಾ ಶ್ರೀ

ಗುಂಡಿ ಬಿದ್ದ ದೇವನಹಳ್ಳಿ-ಚಿಕ್ಕಬಳ್ಳಾಪುರ ರಸ್ತೆ : ಸಂಕಷ್ಟ

ಗುಂಡಿ ಬಿದ್ದ ದೇವನಹಳ್ಳಿ-ಚಿಕ್ಕಬಳ್ಳಾಪುರ ರಸ್ತೆ : ಸಂಕಷ್ಟ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.