ಸ್ಪೇನ್ ನಲ್ಲಿ ಕೋವಿಡ್ 19 ವೈರಸ್ ಗೆ ಮತ್ತೆ 24ಗಂಟೆಯಲ್ಲಿ 838 ಸಾವು:ಲಾಕ್ ಡೌನ್ ಮುಂದುವರಿಕೆ
ತುರ್ತು ಅಗತ್ಯವಿಲ್ಲದ ಎಲ್ಲಾ ಉದ್ಯೋಗಿಗಳು ಇನ್ನೂ ಎರಡು ವಾರಗಳ ಕಾಲ ಮನೆಯಲ್ಲಿ ಇರುವಂತೆ ಸೂಚನೆ ನೀಡಿದ್ದಾರೆ.
Team Udayavani, Mar 29, 2020, 7:15 PM IST
ಮ್ಯಾಡ್ರಿಡ್:ಮಹಾಮಾರಿ ಕೋವಿಡ್ 19 ವೈರಸ್ ಗೆ ತತ್ತರಿಸಿ ಹೋಗಿರುವ ಸ್ಪೇನ್ ದೇಶಾದ್ಯಂತ ಲಾಕ್ ಡೌನ್ ಘೋಷಿಸಿ ಮೂರು ವಾರಗಳು ಸಮೀಪಿಸುತ್ತಿವೆ. ಮತ್ತೊಂದೆಡೆ ಕೋವಿಡ್ 19 ವೈರಸ್ ಗೆ ಕಳೆದ 24ಗಂಟೆಯಲ್ಲಿ ಬರೋಬ್ಬರಿ 838 ಜನರು ಸಾವನ್ನಪ್ಪಿದ್ದು, ಇದರೊಂದಿಗೆ ದೇಶದಲ್ಲಿ ಸಾವಿನ ಸಂಖ್ಯೆ 6,528ಕ್ಕೆ ಏರಿದೆ.
ಸ್ಪೇನ್ ನಲ್ಲಿಯೂ ಕೋವಿಡ್ 19 ಸೋಂಕು ಪೀಡಿತರ ಸಂಖ್ಯೆ ಒಂದೇ ದಿನದಲ್ಲಿ 72,248ರಿಂದ 78,797ಕ್ಕೆ ಏರಿಕೆಯಾಗಿದೆ ಎಂದು ವರದಿ ತಿಳಿಸಿದೆ.
ಶನಿವಾರ ರಾತ್ರಿ ಟೆಲಿವಿಷನ್ ಮೂಲಕ ಸ್ಪೇನ್ ದೇಶದ ಜನರನ್ನು ಉದ್ದೇಶಿಸಿ ಪ್ರಧಾನಿ ಪೆಡ್ರೋ ಸ್ಯಾನ್ ಚೆಝ್ ಮಾತನಾಡಿದ್ದು, ತುರ್ತು ಅಗತ್ಯವಿಲ್ಲದ ಎಲ್ಲಾ ಉದ್ಯೋಗಿಗಳು ಇನ್ನೂ ಎರಡು ವಾರಗಳ ಕಾಲ ಮನೆಯಲ್ಲಿ ಇರುವಂತೆ ಸೂಚನೆ ನೀಡಿದ್ದಾರೆ.
ನೌಕರರು, ಉದ್ಯೋಗಿಗಳ ಅವರ ಸಂಬಳ ದೊರೆಯಲಿದೆ. ಆದರೆ ಮುಂದಿನ ದಿನಗಳಲ್ಲಿ ಹೆಚ್ಚುವರಿ ಕೆಲಸ ಮಾಡಬೇಕಾಗುತ್ತದೆ ಎಂದು ತಿಳಿಸಿದ್ದಾರೆ.
ಸ್ಪೇನ್ ಸರ್ಕಾರ ಕೈಗೊಂಡ ನಿರ್ಧಾರವನ್ನು ಸ್ವಾಗತಿಸುವುದಾಗಿ ಯೂನಿಯನ್ಸ್ ಹಾಗೂ ಉದ್ಯಮಿಗಳ ಸಂಘ ತಿಳಿಸಿದೆ. ಇದರಿಂದಾಗಿ ಸ್ಪೇನ್ ಆರ್ಥಿಕತೆ ಹಾಗೂ ಕೈಗಾರಿಕಾ ವಲಯಕ್ಕೆ ಅನುಕೂಲವಾಗಲಿದೆ ಎಂದು ಹೇಳಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Congress: ಕೈಗಾರಿಕೋದ್ಯಮದಿಂದ ನಿರುದ್ಯೋಗ ಸಮಸ್ಯೆಗೆ ಪರಿಹಾರ: ಜೆಪಿ ಹೆಗ್ಡೆ
Neha hiremath Case; ನಿಷ್ಪಕ್ಷ ತನಿಖೆ ನಡೆಸಿ ನ್ಯಾಯ ಒದಗಿಸಲಾಗುವುದು: ಹೆಬ್ಬಾಳ್ಕರ್
Congress: ಉತ್ಸಾಹದ ಉತ್ತುಂಗದಲ್ಲಿ ಕಾಂಗ್ರೆಸ್; ಕಾರ್ಕಳದಲ್ಲಿ ಜೆಪಿ ಪಡೆ ದಿಟ್ಟ ನಡೆ
Fraud: ರೈಸ್ ಪುಲ್ಲಿಂಗ್ ಹೆಸರಿನಲ್ಲಿ ವಂಚನೆಗೆ ಯತ್ನ; 3 ಸೆರೆ, 69.79 ಲಕ್ಷ ವಶ
Crime: ಸ್ನೇಹಿತನನ್ನೇ ಕೊಲೆ ಮಾಡಿದ್ದ ನಾಲ್ವರು ಆರೋಪಿಗಳ ಸೆರೆ