ನಾವು ಯಾವತ್ತೂ ಅಫ್ಘಾನಿಗರ ಪರ; ಎನ್‌ಎಸ್‌ಎ ಅಜಿತ್ ದೊವಾಲ್
ದುಶಾಂಬೆ ಪ್ರಾದೇಶಿಕ ಭದ್ರತಾ ಸಮ್ಮೇಳನ.; ಶಾಂತಿ ಸ್ಥಾಪನೆ; ಮೂಲ ಸೌಕರ್ಯ ಅಭಿವೃದ್ಧಿಯೇ ಆದ್ಯತೆ
Team Udayavani, May 27, 2022, 8:34 PM IST
ದುಶಾಂಬೆ/ಕಾಬೂಲ್: ಅಫ್ಘಾನಿಸ್ತಾನದ ಜನರ ಪರವಾಗಿ ಭಾರತ ಸರ್ಕಾರ ಯಾವತ್ತೂ ನಿಂತಿದೆ. ಆ ನಿಲುವಿನಲ್ಲಿ ಯಾವತ್ತೂ ಬದಲಾವಣೆ ಉಂಟಾಗದು ಎಂದು ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೊವಾಲ್ ಹೇಳಿದ್ದಾರೆ.
ತಜಕಿಸ್ತಾನ ರಾಜಧಾನಿ ದುಶಾಂಬೆಯಲ್ಲಿ ಅಫ್ಘಾನಿಸ್ತಾನಕ್ಕೆ ಸಂಬಂಧಿಸಿದ ನಾಲ್ಕನೇ ಪ್ರಾದೇಶಿಕ ಭದ್ರತಾ ಸಮ್ಮೇಳನದಲ್ಲಿ ಅವರು ಈ ಮಾತುಗಳನ್ನಾಡಿದ್ದಾರೆ.
ಅಫ್ಘಾನಿಸ್ತಾನದ ಆಡಳಿತದ ಚುಕ್ಕಾಣಿ ವಹಿಸಿಕೊಂಡ ತಾಲಿಬಾನ್ ಉಗ್ರರು ಕಳೆದ ವರ್ಷದ ಆಗಸ್ಟ್‌ನಲ್ಲಿ ವಾಗ್ಧಾನ ಮಾಡಿದ್ದಂತೆ ನಡೆದುಕೊಳ್ಳದೆ ದುರ್ವರ್ತನೆ ತೋರುತ್ತಿದ್ದಾರೆ ಎಂಬ ವರದಿಗಳ ನಡುವೆಯೇ ಈ ಸಮ್ಮೇಳನ ನಡೆದಿದೆ.
“ಅಫ್ಘಾನಿಸ್ತಾನದಲ್ಲಿ ಶಾಂತಿ ಸ್ಥಾಪನೆ ಅಗತ್ಯ. ಅಲ್ಲಿ ಮೂಲ ಸೌಕರ್ಯ ಸೇರಿದಂತೆ ಹಲವು ಕ್ಷೇತ್ರಗಳ ಅಭಿವೃದ್ಧಿ ಆಗಬೇಕು ಎನ್ನುವುದು ಭಾರತದ ಸಂಕಲ್ಪ. 2021ರ ಆಗಸ್ಟ್ ಬಳಿಕ ಇದುವರೆಗೆ 17 ಸಾವಿರ ಮೆಟ್ರಿಕ್ ಟನ್ ಗೋಧಿ ನೀಡಿದ್ದೇವೆ. 5 ಲಕ್ಷ ಡೋಸ್ ಕೊವ್ಯಾಕ್ಸಿನ್ ಲಸಿಕೆ ಒದಗಿಸಲಾಗಿದೆ. 60 ಮಿಲಿಯ ಪೊಲಿಯೋ ಡ್ರಾಪ್, 13 ಟನ್ ಅಗತ್ಯ ಔಷಧಗಳನ್ನು ನೀಡಿದ್ದೇವೆ’ ಎಂದು ದೊವಾಲ್ ವಿವರಿಸಿದ್ದಾರೆ.
ಭಾರತಕ್ಕೆ ಸ್ವಾಗತ:
ಇದೇ ವೇಳೆ, ಆಫ್ಘನ್‌ನಲ್ಲಿ ಅಭಿವೃದ್ಧಿ ಕೆಲಸಗಳನ್ನು ಮಾಡುವುದಿದ್ದರೆ ಭಾರತ ಸರ್ಕಾರಕ್ಕೆ ಸ್ವಾಗತ. ಹಿಂದಿನ ಸರ್ಕಾರದ ಅವಧಿಯಲ್ಲಿ ನಡೆಸುತ್ತಿದ್ದ ಕೆಲಸಗಳನ್ನು ಮುಂದುವರಿಸಬಹುದು. ಎರಡೂ ದೇಶಗಳ ನಡುವೆ ಕ್ರಿಕೆಟ್ ಬಾಂಧವ್ಯ ಸುಧಾರಿಸಲು ನೆರವು ನೀಡಬಹುದು ಎಂದು ತಾಲಿಬಾಲ್ ಸರ್ಕಾರದ ಪ್ರಮುಖ ಅನಾಸ್ ಹಕ್ಕಾನಿ ಹೇಳಿದ್ದಾನೆ. ಭಾರತದ ರಾಜತಾಂತ್ರಿಕ ಅಧಿಕಾರಿಗಳಿಗೆ ಸೂಕ್ತ ಭದ್ರತೆಯನ್ನೂ ಕಲ್ಪಿಸುತ್ತೇವೆ ಎಂದೂ ಹೇಳಿದ್ದಾನೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
26/11 ಮುಂಬೈ ದಾಳಿಯ ಪ್ರಾಜೆಕ್ಟ್ ಮ್ಯಾನೇಜರ್ ಗೆ 15 ವರ್ಷ ಜೈಲು ಶಿಕ್ಷೆ ವಿಧಿಸಿದ ಪಾಕಿಸ್ಥಾನ
ಪಾಕ್ನ ಎಲ್ಲೆಲ್ಲೂ ಪೇಪರ್ ಬರ! ಕಾಗದ ಕ್ಷೇತ್ರದ ಮೇಲೆ ಆರ್ಥಿಕ ದುಸ್ಥಿತಿ ದುಷ್ಪರಿಣಾಮ
ಬ್ರಿಟನ್ ಪ್ರಧಾನಿ ಬೋರಿಸ್ಗೆ ಮತ್ತೆ ಹಿನ್ನಡೆ: ಉಪಚುನಾವಣೆಯ 2 ಕ್ಷೇತ್ರಗಳಲ್ಲಿ ಸೋಲು
ವಾಷಿಂಗ್ಟನ್: ಸ್ಪೇಸ್ ಲಾಂಚ್ ಸಿಸ್ಟಂ ಯಶಸ್ವಿ ಪರೀಕ್ಷೆ
ನಮ್ಮ ಜಿರಳೆಗಳನ್ನು ವಾಪಸ್ ಕೊಡಿ! ಹರಾಜು ಸಂಸ್ಥೆಗೆ ನಾಸಾ ಸೂಚನೆ
MUST WATCH
ಗೃಹ ಪ್ರವೇಶ ಸಂದರ್ಭ ಅವಾಂತರ |ಮಂಗಳಮುಖಿಯರ ರಂಪಾಟ
ಕಿನ್ನಿಗೋಳಿ :ಪತ್ನಿ ಸೇರಿ ಮೂವರು ಮಕ್ಕಳನ್ನು ಬಾವಿಗೆ ತಳ್ಳಿ ತಾನೂ ಆತ್ಮಹತ್ಯೆ ಯತ್ನಿಸಿದ ಪತಿ
ನೀವು ಬಿಜೆಪಿಗೆ ಸೇರಿ, ನಾವು ಶಿವಸೇನೆಯನ್ನು ಮತ್ತೆ ಕಟ್ಟುತ್ತೇವೆ : ರಾವತ್
13,940 ಮೊಳೆಗಳಲ್ಲಿ ಕಲಾಕೃತಿ : India Book of Records ಗೆ ದಾಖಲಾದ ಕಾಪುವಿನ ಶಶಾಂಕ್
ಮನುಷ್ಯನ ಮನಸ್ಸು ಒಂದೇ ರೀತಿ ಇರುವುದಿಲ್ಲ.. ಯಾಕೆ ?
ಹೊಸ ಸೇರ್ಪಡೆ
ಸುಳ್ಯ, ಕೊಡಗಿನ ಕೆಲವೆಡೆ ಭಾರಿ ಶಬ್ದದೊಂದಿಗೆ ಭೂಕಂಪನ
ಸಾಲುಮರದ ತಿಮ್ಮಕ್ಕಗೆ ಬಿಡಿಎ ನಿವೇಶನ ಮಂಜೂರು ಮಾಡಿದ ಸಿಎಂ ಬೊಮ್ಮಾಯಿ
ಕಿಡಿಗೇಡಿಗಳ ಬಂಧನಕ್ಕೆ ಯುವ ವೇದಿಕೆ ಆಗ್ರಹ
ಅನ್ಯಪಕ್ಷ ಅಧಿಕಾರದಲ್ಲಿರುವುದು ಬಿಜೆಪಿಗೆ ಅಪಥ್ಯ: ವಾರ್ಡ್ ವಿಂಗಡಣೆ ವಿರುದ್ಧ ಎಚ್ ಡಿಕೆ ಗರಂ
26/11 ಮುಂಬೈ ದಾಳಿಯ ಪ್ರಾಜೆಕ್ಟ್ ಮ್ಯಾನೇಜರ್ ಗೆ 15 ವರ್ಷ ಜೈಲು ಶಿಕ್ಷೆ ವಿಧಿಸಿದ ಪಾಕಿಸ್ಥಾನ