
ಟೆಕ್ಕಿಗಳ ಸಂಗಾತಿಗೂ ಅಮೆರಿಕದಲ್ಲಿ ಕೆಲಸ ಮಾಡಲು ಅವಕಾಶ
Team Udayavani, Mar 31, 2023, 7:15 AM IST

ವಾಷಿಂಗ್ಟನ್: ಇನ್ನು ಮುಂದೆ ಎಚ್-1ಬಿ ವೀಸಾ ಹೊಂದಿರುವವರ ಸಂಗಾತಿ (ಪತ್ನಿ ಅಥವಾ ಪತಿ) ಕೂಡ ಅಮೆರಿಕದಲ್ಲಿ ಕೆಲಸ ಮಾಡಲು ಸಾಧ್ಯವಾಗಲಿದೆ. ಅದಕ್ಕೆ ಪೂರಕವಾಗುವಂಥ ತೀರ್ಪು ಕೊಲಂಬಿಯಾ ಜಿಲ್ಲಾ ಕೋರ್ಟ್‌ನ ಜಡ್ಜ್ ತಾನ್ಯಾ ಚುಟ್ಕಾನ್ ಅವರು ಬುಧವಾರ ನೀಡಿದ್ದಾರೆ.
ಇದು ಭಾರತೀಯರು ಸೇರಿದಂತೆ ಸಾವಿರಾರು ಮಂದಿ ಟೆಕಿಗಳಿಗೆ ಅನುಕೂಲವಾಗಿ ಪರಿಣಮಿಸಲಿದೆ. ಬರಾಕ್ ಒಬಾಮ ಅಧ್ಯಕ್ಷರಾಗಿದ್ದ ಅವಧಿಯಲ್ಲಿ, ಸಂಗಾತಿಗಳಿಗೆ ಕೆಲಸ ಮಾಡಲು ಅನುವು ಮಾಡಿಕೊಡಲಾಗಿತ್ತು. ಇದಕ್ಕೆ ” ಸೇವ್ ಜಾಬ್ಸ್ ಇನ್ ಯುಎಸ್‌ಎ’ ಎಂಬ ಗುಂಪು ವಿರೋಧ ವ್ಯಕ್ತಪಡಿಸಿತ್ತು. ಜತೆಗೆ ಕೊಲಂಬಿಯಾ ಜಿಲ್ಲಾ ಕೋರ್ಟ್‌ನಲ್ಲಿ ದಾವೆ ಹೂಡಿತ್ತು. ವೀಸಾ ಹೊಂದಿರುವ ಟೆಕಿಗಳ ಸಂಗಾತಿ (ಪತ್ನಿ ಅಥವಾ ಪತಿ) ದೇಶದಲ್ಲಿ ಕೆಲಸ ಮಾಡುವುದರಿಂದ ಸ್ಥಳೀಯರಿಗೆ ಉದ್ಯೋಗದ ಕೊರತೆ ಉಂಟಾಗುತ್ತದೆ ಎಂದು ಅದು ವಾದಿಸಿತ್ತು. ಜತೆಗೆ, ಆ ನಿಯಮವನ್ನು ರದ್ದು ಮಾಡುವಂತೆ ಕೋರಿತ್ತು. ಆದರೆ, ಈಗ ಕೋರ್ಟ್, ಆ ಅರ್ಜಿಯನ್ನೇ ವಜಾ ಮಾಡಿದೆ.
ಟಾಪ್ ನ್ಯೂಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH

ಪಾಕ್ ಆಕ್ರಮಿತ ಪ್ರದೇಶದಲ್ಲಿ ತಲೆಯೆತ್ತಿದ ಶಾರದಾ ಪೀಠ | ಏನಿದರ ಹಿನ್ನೆಲೆ ?

Balasore Train Tragedy; ಎರಡೂ ರೈಲುಗಳನ್ನು ದುರಸ್ತಿ ಮಾಡಲಾಗಿದೆ: ಅಶ್ವಿನಿ ವೈಷ್ಣವ್

ಶುಚಿ ರುಚಿಗೆ ಹೆಸರುವಾಸಿ ಅರ್ಚನಾ ಹೋಟೆಲ್ ಇನ್ನಂಜೆ

ಗ್ಯಾರಂಟಿ ಖಚಿತ, ಪ್ರಯಾಣ ಉಚಿತ, ಷರತ್ತು ನಿಯಮಿತ… | ಗ್ಯಾರಂಟಿ ಯೋಜನೆಗಳ ನಿಯಮಗಳು ಇಲ್ಲಿದೆ
