ಇದ್ಲಿಬ್ ಮೇಲಿನ ಬಾಂಬ್ ದಾಳಿ ಕೂಡಲೇ ನಿಲ್ಲಿಸಿ: ಸಿರಿಯ, ರಶ್ಯಕ್ಕೆ ಟ್ರಂಪ್ ಕರೆ
Team Udayavani, Jun 3, 2019, 11:30 AM IST
ವಾಷಿಂಗ್ಟನ್ : ಜಿಹಾದಿಗಳ ಕೊನೆಯ ಭದ್ರಕೋಟೆಯಾಗಿರುವ ಸಿರಿಯದ ಇದ್ಲಿಬ್ ನ ಮೇಲೆ ಬಾಂಬ್ ದಾಳಿ ನಡೆಸುವುದನ್ನು ತತ್ಕ್ಷಣ ನಿಲ್ಲಿಸುವಂತೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಸಿರಿಯ ಮತ್ತು ರಶ್ಯಕ್ಕೆ ಕರೆ ನೀಡಿದ್ದಾರೆ.
‘ಸಿರಿಯ, ರಶ್ಯ ಮತ್ತು ಸ್ವಲ್ಪ ಮಟ್ಟಿಗೆ ಇರಾನ್ ಸೇರಿಕೊಂಡು ಸಿರಿಯದ ಇದ್ಲಿಬ್ ಪ್ರಾಂತ್ಯದ ಮೇಲೆ ಬೇಕಾಬಿಟ್ಟಿ ಬಾಂಬ್ ದಾಳಿ ನಡೆಸುತ್ತಿವೆ ಎಂದು ಕೇಳಿದ್ದೇನೆ; ಇದರಿಂದ ಅನೇಕ ಅಮಾಯಕರು ಸಾಯುತ್ತಿದ್ದಾರೆ. ಜಗತ್ತು ಈ ನರಮೇಧವನ್ನು ನೋಡುತ್ತಿದೆ. ಈ ರೀತಿಯ ಬಾಂಬ್ ದಾಳಿ ಮಾಡುವ ಮೂಲಕ ನೀವೇನು ಪಡೆಯುವಿರಿ ? ಇದರ ಉದ್ದೇಶವೇನು ? ತತ್ಕ್ಷಣ ಇದನ್ನು ನಿಲ್ಲಿಸಿ’ ಎಂದು ಟ್ರಂಪ್ ಟ್ವೀಟ್ ಮಾಡಿದ್ದಾರೆ.
ಸಿರಿಯ ಮತ್ತು ರಶ್ಯ ಇದ್ಲಿಬ್ ಮೇಲೆ ನಡೆಸುತ್ತಿರುವ ಬಾಂಬ್ ದಾಳಿಯನ್ನು ಅಂತಾರಾಷ್ಟ್ರೀಯ ಸಮುದಾಯ ನೋಡಿಯೂ ಸುಮ್ಮಗಿರುವುದು ದುರದೃಷ್ಟಕರ ಎಂದು ಸಿರಿಯದ ಎನ್ಜಿಓ ಕಳೆದ ಶುಕ್ರವಾರ ಹೇಳಿತ್ತು.
ಸಿರಿಯ ಮತ್ತು ರಶ್ಯದ ಜಂಟಿ ಬಾಂಬ್ ದಾಳಿಯಿಂದಾಗಿ ವಾಯವ್ಯ ಸಿರಿಯದ ಸುಮಾರು 3 ಲಕ್ಷ ಜನರು ಬಲವಂತವಾಗಿ ಟರ್ಕಿ ಗಡಿಗೆ ದೂಡಲ್ಪಡುತ್ತಿದ್ದಾರೆ ಎಂದು ಎನ್ಜಿಓ ಹೇಳಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Jamie Dimon: ಮೋದಿ ಆರ್ಥಿಕ ನೀತಿ ಅದ್ಭುತ, ಅಮೆರಿಕದಲ್ಲೂ ಜಾರಿ ಮಾಡಿ: ಜೇಮಿ
Sunita Williams: ಮೇ 6ರಂದು 3ನೇ ಬಾರಿಗೆ ಸುನಿತಾ ವಿಲಿಯಮ್ಸ್ ಗಗನ ಯಾತ್ರೆ
Thailandನಲ್ಲಿ ಗುಜರಿ ಮಾಫಿಯಾದ ಕಿಂಗ್ ಪಿನ್ ರವಿ ಕಾನಾ, ಪ್ರಿಯತಮೆ ಕಾಜಲ್ ಜಾ ಬಂಧನ
ತಂಗಿಯ ಸಮಾಧಿ ಸ್ಥಳಕ್ಕೆ ಭೇಟಿ ನೀಡುವುದನ್ನು ವ್ಲಾಗ್ ವಿಡಿಯೋ ಮಾಡಿದ ಯೂಟ್ಯೂಬರ್: ಆಕ್ರೋಶ
Kyrgyzstan; ಹೆಪ್ಪುಗಟ್ಟಿದ ಜಲಪಾತದಲ್ಲಿ ಸಿಲುಕಿ ಆಂಧ್ರದ ವಿದ್ಯಾರ್ಥಿ ಸಾವು
MUST WATCH
ಹೊಸ ಸೇರ್ಪಡೆ
Kaup: ಎ.25ರಿಂದ ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ, ನಾಗಮಂಡಲ
Malicious Calls; ಜ್ಞಾನವ್ಯಾಪಿ ಮಸೀದಿ ಸರ್ವೆ ತೀರ್ಪು ನೀಡಿದ್ದ ಜಡ್ಜ್ ಗೆ ಬೆದರಿಕೆ ಕರೆ
ಬಂಟರು ಹಾಗೂ ಬಿಲ್ಲವರು ಮೊಗವೀರರ ಎರಡು ಕಣ್ಣುಗಳಿದ್ದಂತೆ: ಕಿರಣ್ ಕುಮಾರ್ ಉದ್ಯಾವರ
Vote: ಬನ್ನಿ ಉತ್ತಮ ನಾಯಕನನ್ನು ಆಯ್ಕೆ ಮಾಡೋಣ
ಜ.26ರಂದು 2ನೇ ಹಂತದ ಚುನಾವಣೆ;ರಾಹುಲ್, ತರೂರ್, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ