ಸೂರ್ಯನಲ್ಲಿ ಭಾರೀ ಸ್ಫೋಟ! 2 ಲಕ್ಷ ಕಿ.ಮೀ. ಉದ್ದದ ಬೆಳಕಿನ ತಂತು ಸೃಷ್ಟಿ

ಭೂಮಿಯತ್ತ ನುಗ್ಗಿ ಬರುತ್ತಿರುವ ತಂತು

Team Udayavani, Oct 5, 2022, 6:57 PM IST

ಸೂರ್ಯನಲ್ಲಿ ಭಾರೀ ಸ್ಫೋಟ! 2 ಲಕ್ಷ ಕಿ.ಮೀ. ಉದ್ದದ ಬೆಳಕಿನ ತಂತು ಸೃಷ್ಟಿ

ಲಂಡನ್‌: ಸೂರ್ಯ ಸ್ಫೋಟಗೊಂಡಿದ್ದಾನೆ… ಅಷ್ಟೇ ಅಲ್ಲ. ಈ ಭೀಕರ ಸ್ಫೋಟದ ತೀವ್ರತೆಗೆ 2 ಲಕ್ಷ ಕಿ.ಮೀ.ನಷ್ಟು ಉದ್ದದ ಪ್ರಖರ ಬೆಳಕಿನ ತಂತುವೊಂದು ಹೊರಸೂಸಲ್ಪಟ್ಟಿದ್ದು, ಅದು ಭೂಮಿಯತ್ತ ನುಗ್ಗಿ ಬರುತ್ತಿದೆ ಎಂದು ವಿಜ್ಞಾನಿಗಳು ಹೇಳಿದ್ದಾರೆ.

ಸೋಹೋ ವೀಕ್ಷಣಾಲಯದ ಪ್ರಕಾರ, ಮಂಗಳವಾರ ಸೂರ್ಯನ ದಕ್ಷಿಣ ಗೋಳಾರ್ಧದಿಂದ 2 ಲಕ್ಷ ಕಿ.ಮೀ. ಉದ್ದವಿರುವ ಮ್ಯಾಗ್ನೆಟಿಸಂನ ತಂತು ವ್ಯಾಪಿಸತೊಡಗಿದ್ದು, ನೋಡಲು ರಬ್ಬರ್‌ಬ್ಯಾಂಡ್‌ ರೀತಿ ಗೋಚರಿಸುತ್ತಿದೆ ಎಂದು ತಜ್ಞರು ಹೇಳಿದ್ದಾರೆ.

ಸ್ಫೋಟದ ಅವಶೇಷಗಳು ಭೂಮಿಯತ್ತ ಸಂಚರಿಸುತ್ತಿದ್ದು, ಸ್ಫೋಟ ನಡೆದ ಸ್ಥಳದಿಂದ ದೊಡ್ಡ ಮಟ್ಟದಲ್ಲಿ ಸೌರ ಜ್ವಾಲೆಯು ಹೊರಹೊಮ್ಮುತ್ತಿದೆ ಎಂದೂ ಅವರು ತಿಳಿಸಿದ್ದಾರೆ. ಆದರೆ, ಈ ಕೊರೊನಲ್‌ ಮಾಸ್‌ ಇಜೆಕ್ಷನ್‌(ಸಿಎಂಇ)ನ ದತ್ತಾಂಶವು ಪೂರ್ಣಪ್ರಮಾಣದಲ್ಲಿ ಗೋಚರಿಸಿಲ್ಲ.

ಇದೇ ವೇಳೆ, ಅತ್ಯಂತ ದೊಡ್ಡ ಸನ್‌ ಸ್ಪಾಟ್‌ ಎಂದು ಕರೆಸಿಕೊಳ್ಳುವ ಎಆರ್‌3112 ಕೂಡ ಅಸ್ಥಿರವಾಗಿದ್ದು, ಯಾವುದೇ ಕ್ಷಣದಲ್ಲಾದರೂ ಅದು ಸ್ಫೋಟಗೊಳ್ಳಬಹುದು. ಈ ಸ್ಫೋಟವೂ ನೇರವಾಗಿ ಭೂಮಿಯತ್ತ ಮುಖ ಮಾಡುವ ಸಾಧ್ಯತೆಯಿದ್ದು, ಭೂಮಿಯ ಮೇಲೆ ಪರಿಣಾಮ ಬೀರುವ ಸಾಧ್ಯತೆ ದಟ್ಟವಾಗಿದೆ ಎನ್ನುತ್ತಾರೆ ತಜ್ಞರು.

ಸೌರ ಜ್ವಾಲೆಗಳು ಅತ್ಯಂತ ಪ್ರಖರವಾಗಿರುವ ಕಾರಣ, ಭೂಮಿಯಲ್ಲಿರುವ ರೇಡಿಯೋ ಕಮ್ಯೂನಿಕೇಷನ್‌ಗಳು, ವಿದ್ಯುತ್‌ ಗ್ರಿಡ್‌ಗಳು, ನೇವಿಗೇಷನ್‌ ಸಂಕೇತಗಳ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತವೆ. ಅಲ್ಲದೇ, ಬಾಹ್ಯಾಕಾಶ ನೌಕೆಗಳು ಹಾಗೂ ಗಗನಯಾತ್ರಿಗಳಿಗೆ ಅಪಾಯ ಉಂಟುಮಾಡುತ್ತವೆ.

ಟಾಪ್ ನ್ಯೂಸ್

lighthouse web exclusive dm

ಕಾಪು ಲೈಟ್‌ ಹೌಸ್‌ ಬಗ್ಗೆ ನಿಮಗೆಷ್ಟು ಗೊತ್ತು ? ದೀಪಸ್ತಂಭಗಳ ಬಗ್ಗೆ ಕುತೂಹಲಕರ ಮಾಹಿತಿ…

1-sadsad

ಮೂವರು ಶೂಟರ್‌ಗಳು ನನ್ನನ್ನು ಮುಗಿಸಲು ಮುಂದಾಗಿದ್ದರು: ಇಮ್ರಾನ್ ಖಾನ್

1-sadsdsads

ಸಿದ್ರಾಮುಲ್ಲಾ ಖಾನ್ ಬಂದರೆ ಹಿಂದೂಗಳ….; ಸಿ.ಟಿ.ರವಿ ಆಕ್ರೋಶ

arrested

ಹಿಂದೂ ಯುವತಿಯೊಂದಿಗಿದ್ದ ಮುಸ್ಲಿಂ ಯುವಕನ ಮೇಲೆ ಹಲ್ಲೆ ; ಮೂವರ ಬಂಧನ

1-sdsadas

ಧರ್ಮ ಲೆಕ್ಕಿಸದೆ ಜನಸಂಖ್ಯಾ ನಿಯಂತ್ರಣ ಮಸೂದೆ ಅಗತ್ಯವಿದೆ: ಸಚಿವ ಗಿರಿರಾಜ್ ಸಿಂಗ್

ಕೆನಡಾದಲ್ಲಿ ರಸ್ತೆ ಅಪಘಾತ: ಭಾರತೀಯ ಮೂಲದ ವಿದ್ಯಾರ್ಥಿ ಸಾವು

ಕೆನಡಾದಲ್ಲಿ ರಸ್ತೆ ಅಪಘಾತ: ಭಾರತೀಯ ಮೂಲದ ವಿದ್ಯಾರ್ಥಿ ಸಾವು

1-sadsadasd

ಜನರೀಗ ರಾಹುಲ್ ಗಾಂಧಿಯ ನಿಜವಾದ ಮುಖವನ್ನು ನೋಡುತ್ತಿದ್ದಾರೆ: ವೇಣುಗೋಪಾಲ್ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-sadsad

ಮೂವರು ಶೂಟರ್‌ಗಳು ನನ್ನನ್ನು ಮುಗಿಸಲು ಮುಂದಾಗಿದ್ದರು: ಇಮ್ರಾನ್ ಖಾನ್

ಕೋವಿಡ್‌ ಪ್ರಕರಣ ಹೆಚ್ಚಳ; ಚೀನ ಲಾಕ್‌ಡೌನ್‌: ಹಲವೆಡೆ ಘರ್ಷಣೆ

ಕೋವಿಡ್‌ ಪ್ರಕರಣ ಹೆಚ್ಚಳ; ಚೀನ ಲಾಕ್‌ಡೌನ್‌: ಹಲವೆಡೆ ಘರ್ಷಣೆ

ವಲಸಿಗರ ನಿಯಂತ್ರಣಕ್ಕೆ ಬ್ರಿಟನ್‌ ಸರ್ಕಾರ ಚಿಂತನೆ?

ವಲಸಿಗರ ನಿಯಂತ್ರಣಕ್ಕೆ ಬ್ರಿಟನ್‌ ಸರ್ಕಾರ ಚಿಂತನೆ?

ಕಾಬೂಲ್‌: 12 ಮಂದಿಗೆ ಛಡಿ ಏಟಿನ ಶಿಕ್ಷೆ ವಿಧಿಸಿದ ತಾಲಿಬಾನ್ ಸರ್ಕಾರ

ಕಾಬೂಲ್‌: 12 ಮಂದಿಗೆ ಛಡಿ ಏಟಿನ ಶಿಕ್ಷೆ ವಿಧಿಸಿದ ತಾಲಿಬಾನ್ ಸರ್ಕಾರ

ಸ್ಮಾರ್ಟ್‌ಫೋನ್‌ ಉತ್ಪಾದನೆಗೆ ಎಲಾನ್‌ ಮಸ್ಕ್ ಚಿಂತನೆ

ಸ್ಮಾರ್ಟ್‌ಫೋನ್‌ ಉತ್ಪಾದನೆಗೆ ಎಲಾನ್‌ ಮಸ್ಕ್ ಚಿಂತನೆ

MUST WATCH

udayavani youtube

ಶ್ರೀ ದುರ್ಗಾ ಆದಿಶಕ್ತಿ ಕ್ಷೇತ್ರ ದೊಡ್ಡಣಗುಡ್ಡೆ ಕ್ಷೇತ್ರದಲ್ಲಿ ‘ದೀಪೋತ್ಸವ’ ಸಂಭ್ರಮ

udayavani youtube

ಅಸ್ತಮಾ ರೋಗಿಗಳು ಮನೆಯಲ್ಲಿಯೇ ಚಿಕಿತ್ಸೆ ಪಡೆಯುವುದು ಹೇಗೆ ? |Girija Surgicals

udayavani youtube

ಕುಕ್ಕೆ ಸುಬ್ರಹ್ಮಣ್ಯಕ್ಕೆ ಕ್ರಿಕೆಟಿಗ ಕೆ.ಎಲ್.ರಾಹುಲ್ ಭೇಟಿ

udayavani youtube

ಶಾರೀಕ್ ಜೊತೆಗಿದ್ನಾ ಇನ್ನೋರ್ವ ವ್ಯಕ್ತಿ ? ಪೊಲೀಸ್ ಆಯುಕ್ತರು ಹೇಳಿದ್ದೇನು..

udayavani youtube

ಶಾರಿಕ್ ಜೊತೆಗಿದ್ನಾ ಇನ್ನೋರ್ವ ವ್ಯಕ್ತಿ ? ವೈರಲ್ ಆಗುತ್ತಿದೆ ಸಿಸಿಟಿವಿ ಫೂಟೇಜ್…

ಹೊಸ ಸೇರ್ಪಡೆ

1-adasdsadsa

ಶೀಘ್ರ ಭತ್ತ-ರಾಗಿಗೆ ಖರೀದಿ ಕೇಂದ್ರ ಸ್ಥಾಪಿಸಿ: ಸಿಎಂಗೆ ದಿನೇಶ್‌ ಗೂಳಿಗೌಡ ಮನವಿ

lighthouse web exclusive dm

ಕಾಪು ಲೈಟ್‌ ಹೌಸ್‌ ಬಗ್ಗೆ ನಿಮಗೆಷ್ಟು ಗೊತ್ತು ? ದೀಪಸ್ತಂಭಗಳ ಬಗ್ಗೆ ಕುತೂಹಲಕರ ಮಾಹಿತಿ…

20

ಇನ್ನೂ ತಪ್ಪಿಲ್ಲ ಬಿಡಾಡಿ ದನಗಳ ಹಾವಳಿ

1-sadsad

ಮೂವರು ಶೂಟರ್‌ಗಳು ನನ್ನನ್ನು ಮುಗಿಸಲು ಮುಂದಾಗಿದ್ದರು: ಇಮ್ರಾನ್ ಖಾನ್

19

ಕುರುಗೋಡು: ಮಾಜಿ ಶಾಸಕರಿಂದ ಆಂಜನೇಯ ದೇವಸ್ಥಾನಕ್ಕೆ 1 ಲಕ್ಷ ದೇಣಿಗೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.