ಸಿರಿಯಾ ವೈಮಾನಿಕ ದಾಳಿ : ಟರ್ಕಿಯ 33 ಯೋಧರ ಸಾವು

Team Udayavani, Feb 29, 2020, 7:33 AM IST

ರೈಹಾನ್ಲಿ: ಸಿರಿಯಾ ಸರಕಾರದ ವೈಮಾನಿಕ ದಾಳಿಗೆ ಟರ್ಕಿಯ 33 ಯೋಧರು ಶುಕ್ರವಾರ ಮೃತಪಟ್ಟಿದ್ದು, ಅಂಕಾರಾ ಮತ್ತು ಮಾಸ್ಕೋ ನಡುವೆ ಪ್ರಕ್ಷುಬ್ಧ ಸ್ಥಿತಿ ಸೃಷ್ಟಿಯಾಗಿದೆ.

ಇದ್ಲಿಬ್‌ ಪ್ರಾಂತ್ಯದಲ್ಲಿ 33 ಯೋಧರು ಮೃತಪಟ್ಟ ಬೆನ್ನಲ್ಲೇ, ಟರ್ಕಿ ನಡೆಸಿದ ಪ್ರತಿದಾಳಿಗೆ ಸಿರಿಯಾ ಪಡೆಯ 16 ಮಂದಿ ಸಾವಿಗೀಡಾಗಿದ್ದಾರೆ. 33 ಯೋಧರ ಸಾವಿಗೆ ಅಸ್ಸಾದ್‌ ಸರಕಾರ ಮತ್ತು ರಷ್ಯಾ ಕಾರಣ ಎಂದು ನ್ಯಾಟೋ ಮುಖ್ಯಸ್ಥರು ಆರೋಪಿಸಿದ್ದಾರೆ.

ಇನ್ನು ಟರ್ಕಿ ಮತ್ತು ರಷ್ಯಾ ಅಧ್ಯಕ್ಷರು ದೂರವಾಣಿ ಮೂಲಕ ಮಾತುಕತೆ ನಡೆಸಿ, ಪರಿಸ್ಥಿತಿಯನ್ನು ಶಾಂತ ಸ್ಥಿತಿಗೆ ತರುವ ಕುರಿತು ಚರ್ಚಿಸಿದ್ದಾರೆ. ಸಿರಿಯಾದ ವಾಯವ್ಯ ಪ್ರಾಂತ್ಯದಲ್ಲಿ ವಿಮಾನಗಳ ಹಾರಾಟ ನಡೆಸದಂತೆ ಅಂತಾರಾಷ್ಟ್ರೀಯ ಸಮುದಾಯಕ್ಕೆ ಟರ್ಕಿ ಸಲಹೆ ನೀಡಿದೆ.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ