ಅಮೆರಿಕ ಅಧಿಕಾರಿಗಳೊಂದಿಗೆ ತಾಲಿಬಾನ್ ಮಾತುಕತೆ
Team Udayavani, Jul 29, 2018, 6:00 AM IST
ಇಸ್ಲಾಮಾಬಾದ್: ಇದೇ ಮೊದಲ ಬಾರಿಗೆ ಅಮೆರಿಕ ಅಧಿಕಾರಿಗಳೊಂದಿಗೆ ತಾಲಿಬಾನ್ ಮಾತುಕತೆ ನಡೆಸಿದ್ದು, ಅಫ್ಘಾನಿಸ್ತಾನದಲ್ಲಿ ಶಾಂತಿ ಕಾಪಾಡುವ ನಿಟ್ಟಿನಲ್ಲಿ ಚರ್ಚೆ ನಡೆದಿದೆ ಎನ್ನಲಾಗಿದೆ. ಭೇಟಿಯನ್ನು ತಾಲಿಬಾನ್ ಖಚಿತಪಡಿಸಿದೆಯಾದರೂ, ಅಮೆರಿಕ ಈ ಬಗ್ಗೆ ಯಾವುದೇ ವಿವರ ನೀಡಿಲ್ಲ. ದಕ್ಷಿಣ ಏಷ್ಯಾ ವ್ಯವಹಾರಗಳ ಪ್ರಮುಖ ಅಧಿಕಾರಿ ಅಲೈಸ್ ವೆಲ್ಸ್ ಜೊತೆಗೆ ತಾಲಿಬಾನ್ ಅಧಿಕಾರಿಗಳು ಕತಾರ್ನಲ್ಲಿ ಭೇಟಿಯಾಗಿದ್ದರು ಎನ್ನಲಾಗಿದೆ. ಈ ಭೇಟಿ ನಡೆದಿದ್ದು ನಿಜವಾಗಿದ್ದರೆ, ಅಫ್ಘಾನಿಸ್ತಾನದ 17 ವರ್ಷಗಳ ಹೋರಾಟದಲ್ಲಿ ಇದು ಮಹತ್ವದ ಹೆಜ್ಜೆಯಾಗಿರಲಿದೆ.
ಕತಾರ್ನಲ್ಲಿ 2013ರಿಂದಲೂ ರಾಜಕೀಯ ಕಚೇರಿಯನ್ನು ಹೊಂದಿದ್ದು, ಇಲ್ಲಿ ಭೇಟಿ ನಡೆದಿದೆ ಎಂದು ತಾಲಿಬಾನ್ ಹೇಳಿಕೊಂಡಿದೆ. ಚರ್ಚೆ ಉಪಯುಕ್ತ ವಾಗಿತ್ತು ಎಂದು ಹೇಳಲಾಗಿದೆ. ಕತಾರ್ನ ದೋಹಾಗೆ ವೆಲ್ಸ್ ಭೇಟಿ ನೀಡಿದ್ದು, ಅಲ್ಲಿನ ಆಡಳಿತಾರೂಢ ಕುಟುಂಬದೊಂದಿಗೆ ಮಾತುಕತೆ ನಡೆದಿದೆ ಎಂದಷ್ಟೇ ಅಮೆರಿಕ ಹೇಳಿಕೆ ನೀಡಿದೆ.
ಆದರೆ ಮುಂದಿನ ಭೇಟಿ ಯಾವಾಗ ನಡೆಯುತ್ತದೆ ಎಂಬುದು ಸ್ಪಷ್ಟವಿಲ್ಲ. ಅಷ್ಟೇ ಅಲ್ಲ, ಮುಂದಿನ ಭೇಟಿ ನಡೆಯುತ್ತದೆಯೇ ಎಂಬುದೂ ಖಚಿತವಾಗಿಲ್ಲ. ಅಫ್ಘಾನಿಸ್ತಾನದಲ್ಲಿ 15 ಸಾವಿರ ಅಮೆರಿಕ ಹಾಗೂ ನ್ಯಾಟೋ ಪಡೆಗಳು ಇದ್ದು, ಇವುಗಳನ್ನು ಹಿಂಪಡೆಯಲು ಸ್ಪಷ್ಟ ವೇಳಾಪಟ್ಟಿಯನ್ನು ನಿಗದಿಸಬೇಕು ಎಂದು ತಾಲಿಬಾನ್ ಹಿಂದಿನಿಂದಲೂ ಬೇಡಿಕೆ ಇಟ್ಟಿತ್ತು. ಇನ್ನೊಂದೆಡೆ ಮೊದಲಿನಿಂದಲೂ ಅಮೆರಿಕದ ಜೊತೆಗೆ ಮಾತುಕತೆ ನಡೆಸಲು ತಾಲಿಬಾನ್ ವಿರೋಧ ಹೊಂದಿತ್ತಾದರೂ, ಈಗ ಮಾತುಕತೆಗೆ ಮುಂದಾಗಿರುವುದು ಅಚ್ಚರಿ ತಂದಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Vijayapura; ಚುನಾವಣಾ ಬಾಂಡ್ ತನಿಖೆಯಾದರೆ ಮೋದಿ ಜೈಲಿಗೆ: ಎಂ.ಬಿ. ಪಾಟೀಲ್
Dharwad; ಕಾಂಗ್ರೆಸ್ ಬಂದ ಮೇಲೆ ಅಪರಾಧ ಪ್ರಕರಣಗಳ ಸಂಖ್ಯೆ ಹೆಚ್ಚಳ: ಸಚಿವ ಜೋಶಿ ಗಂಭೀರ ಆರೋಪ
Bridge Collapse: 8 ವರ್ಷಗಳಿಂದ ನಿರ್ಮಾಣವಾಗುತ್ತಿದ್ದ ಸೇತುವೆ ಕುಸಿತ… ತಪ್ಪಿದ ದುರಂತ
ಕಾಂಗ್ರೆಸ್ ಸುಳ್ಳನ್ನು ಜನ ನಂಬಲ್ಲ: ಗೋವಿಂದ ಕಾರಜೋಳ
ಹಗರಿಬೊಮ್ಮನಹಳ್ಳಿ: ಶುದ್ಧ ನೀರಿನ ಘಟಕಕ್ಕೆ ಉದ್ಘಾಟನೆ ಭಾಗ್ಯವೆಂದು?